ಅವರು ಕೆರೆಹಳ್ಳಿ ಹೋಬಳಿಯಲ್ಲಿ ಮಳೆಹಾನಿ ವೀಕ್ಷಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿ ಈಗಾಗಲೇ ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶರಾವತಿ ನದಿಯಿಂದ ಮತ್ತು ಅಂಬ್ಲಿಗೊಳ ಡ್ಯಾಂ ನಿಂದ ನೂರಾರು ಹಳ್ಳಿಗಳ ರೈತ ನಾಗರೀಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಯಶಸ್ವಿಯಾಗಿದ್ದು ಅದೇ ಮಾದರಿಯಲ್ಲಿ ಹೊಸನಗರ ತಾಲ್ಲೂಕಿನ ಚಕ್ರಾ ವರಾಹಿ ನೀರನ್ನು ಸುಮಾರು 60-70 ಕೀ.ಮೀ.ವ್ಯಾಪ್ತಿಯಿಂದ ಸೂಡೂರಿನವರಗೆ ಬರುವ ಹಲವು ಗ್ರಾಮಗಳಿಗೆ ಕುಡಿಯುವ ನೀರು ಹರಿಸಲು ಸುಮಾರು 395 ಕೋಟಿ ರೂ.ಅಂದಾಜು ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಇನ್ನೊಂದು ವಾರದೊಳಗೆ ಅನುಮೋದನೆ ದೊರೆಯಲಿದೆ.
ಹೊಸನಗರ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿನ ಸೌಲಭ್ಯ ಕೊಡುವ ಉದ್ದೇಶದಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಾನು ಈ ಪ್ರಸ್ತಾವನೆ ಸಲ್ಲಿಸಿದೇವೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಬರುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಮೆಣಸೆ ಆನಂದ, ಎ.ಟಿ.ನಾಗರತ್ನ,ಉಮೇಶ್ ಜಾಗದ್ದೆ ,ಯೋಗೆಂದ್ರಪ್ಪ ಗೌಡ, ತಹಶೀಲ್ದಾರ್ ಎಸ್.ವಿ.ರಾಜೀವ್, ಜಿ.ಪಂ.ಇ. ವಿಭಾಗದ ಇಂಜಿನಿಯರ್ ಶಿವಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ಚಂದ್ರಶೇಖರ, ಕೃಷಿ ಇಲಾಖೆಯ ಅಧಿಕಾರಿ ಶಾಂತಕುಮಾರ್,ಉಪತಹಶೀಲ್ದಾರ್ ಟಿ.ಹುಚ್ಚರಾಯಪ್ಪ, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಬುಕ್ಕಿವರೆ ರಾಜೇಶ್, ಬೆಳ್ಳೂರು ತಿಮ್ಮಪ್ಪ, ದೇವೇಂದ್ರಪ್ಪಗೌಡ ನೆವಟೂರು, ಗ್ರಾಮ ಲೆಕ್ಕಾಧಿಕಾರಿ ಜಾಕೀರ್,ಹೆಡತ್ರಿ ಷಣ್ಮುಖಪ್ಪ, ಯೋಗೇಂದ್ರ ಬಸವಾಪುರ, ದಿವಾಕರ ಇನ್ನಿತರರು ಹಾಜರಿದ್ದರು.