ಮನೆ ಬಾಡಿಗೆಗೆ ಬೇಕು ಎಂದು ದಂಪತಿಗಳ ಪೋಷಾಕಿನಲ್ಲಿ ಬಂದ ಅಪರಿಚಿತ ಪುರುಷ ಮತ್ತು ಮಹಿಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣವನ್ನ ಹೊತ್ತೊಯ್ದ ಘಟನೆ ಶಿವಮೊಗ್ಗದ ಜಯನಗರದಲ್ಲಿ ನಡೆದಿದೆ.ಕಳ್ಳತನಕ್ಕೆ ಬುರ್ಖಾ ಧರಿಸಿ ಬಂದಿದ್ದ ಖತರ್ನಾಕ್ ಲೇಡಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನಲೆ :
ಶಿವಮೊಗ್ಗ ನಗರದ ಜಯನಗರ ಮೊದಲನೇ ತಿರುವಿನಲ್ಲಿರುವ ಸಮರ್ಥ ಅಪಾರ್ಟ್ ಮೆಂಟ್ ನ ಬಳಿ ಬುರ್ಕಾ ಹಾಕಿಕೊಂಡು ಬಂದ ಅಪರಿಚಿತ ಮಹಿಳೆ ಮತ್ತು ಅಪರಿಚಿತ ಪುರುಷ ಮನೆ ಬಾಡಿಗೆ ಇದೆಯಾ ಎಂದು ವಿಚಾರಿಸಿದ್ದಾರೆ..
ಪಕ್ಕದ ಮನೆ ಬಾಡಿಗೆ ಇದೆ ಎಂದು ಚಂದ್ರಕಲಾ ರವರು ತಿಳಿಸಿ ಫೊನ್ ನಂಬರ್ ಇದೆ ಸಂಪರ್ಕಿಸಿ ಎಂದು ಹೇಳಿ ಮನೆಯೊಳಗೆ ಹೋಗಿದ್ದಾರೆ.ಈ ಸಂಧರ್ಭದಲ್ಲಿ ಚಂದ್ರಕಲಾ ರವರ ಪತಿ ಮನೆಯಲ್ಲಿ ಇಲ್ಲದಿರುವುದನ್ನು ಖಾತ್ರಿಪಡೆಸಿಕೊಂಡಿದ್ದಾರೆ.
ನಂತರ ಸಂಜೆ 6 ಗಂಟೆಗೆ ಮನೆ ಬಾಡಿಗೆ ಕೇಳಿಕೊಂಡು ಬಂದ ಇಬ್ವರು ಅಪರಿಚಿತರು ಚಂದ್ರಕಲಾರ ಮನೆಯೊಳಗೆ ನುಗ್ಗಿದ್ದಾರೆ.ಮನೆಯೊಳಗೆ ನುಗ್ಗಿದ ಬುರ್ಕಾ ಧರಿಸಿದ ಮಹಿಳೆ ಚಂದ್ರಕಲಾ ಅವರ ಬಾಯಿಯನ್ನು ಅದುಮಿಟ್ಟಿದ್ದಾರೆ. ಬುರ್ಕಾ ಧರಿಸಿದ ಹೆಂಗಸಿನ ಜೊತೆ ಬಂದ ಗಂಡಸು ಚಂದ್ರಕಲಾರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ. ಚಂದ್ರಕಲಾ ಕಿರುಚಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಅಪರಿಚಿತ ಪುರುಷ ಮನೆಯಿಂದ ಓಡಿಹೋಗುವಾಗ ಟಿವಿ ಮೇಲೆ ಇಟ್ಟಿದ್ದ 21 ಗ್ರಾಂ ಚಿನ್ನದ ಸರವನ್ನ ಎತ್ತಿಕೊಂಡು ಹೋಗಿದ್ದಾನೆ.
ಬುರ್ಖಾ ಧರಿಸಿ ಕಳ್ಳತನಕ್ಕೆ ಬಂದಿದ್ದ ಅಪರಿಚಿತ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಚಿಕ್ಕಮಗಳೂರಿನ ಭಾಗ್ಯ ಎಂಬುವಳಿಂದ ಈ ಕೃತ್ಯ ನಡೆದಿದೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.