ರಿಪ್ಪನ್‌ಪೇಟೆ : ಪಟ್ಟಣದ ತಿಲಕ್ ಮಂಟಪದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 55 ನೇ ವರ್ಷದ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ ನಾಳೆ(10-09-2022) ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದೆ.ಈ ಬಾರಿ ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡು ವರ್ಷ ಅದ್ದೂರಿ ಮೆರವಣಿಗೆ ನಡೆದಿರಲಿಲ್ಲ ನಾಳೆ ನಡೆಯುವ ಅದ್ದೂರಿ ಮೆರವಣಿಗೆಯಲ್ಲಿ ಕಲಾ ತಂಡಗಳು,ಮಂಗಳವಾದ್ಯ,ಚಂಡೇಮೇಳ ,ಡೊಳ್ಳು ಕುಣಿತ ,ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ರಂಗು ತರಲಿದೆ ಎಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿ ಅಧ್ಯಕ್ಷ ವೈ ಜೆ ಕೃಷ್ಣ ಮತ್ತು ಕಾರ್ಯದರ್ಶಿ ಪಿ ಸುಧೀರ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೃಹತ್ ಬೈಕ್ ರ್‍ಯಾಲಿ
ನಾಳೆ ಮಧ್ಯಾಹ್ನ ಸರಿಯಾಗಿ 1.30 ಕ್ಕೆ 55 ನೇ ಗಣೇಶೋತ್ಸವದ ಅಂಗವಾಗಿ ಕರ್ನಾಟಕ ಹಿಂದೂ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಬೃಹತ್ ಬೈಕ್ ರ್‍ಯಾಲಿಯನ್ನು ಆಯೋಜಿಸಲಾಗಿದೆ
ಪೊಲೀಸ್ ಬಿಗಿ ಬಂದೋಬಸ್ತ್ :
ನಾಳೆ ನಡೆಯುವ ಗಣಪತಿ ಮೆರವಣಿಗೆಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಪಟ್ಟಣದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು ಸಿಸಿಟಿವಿ
,ಡ್ರೋನ್ ಕ್ಯಾಮೆರಾಗಳಲ್ಲಿ ಹಾಗೂ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ.
ಈ ಬಿಗಿ ಬಂದೋಬಸ್ತ್ ಕಾರ್ಯದಲ್ಲಿ 1 ಡಿವೈಎಸ್ಪಿ , 4 ಸರ್ಕಲ್ ಇನ್ಸ್ ಪೆಕ್ಟರ್ , 8 ಸಬ್ ಇನ್ಸ್ ಪೆಕ್ಟರ್ ,15 ಎ ಎಸ್ ಐ , 145 ಪೊಲೀಸ್ ಸಿಬ್ಬಂದಿಗಳು ,2 ತುಕಡಿ ಕೆ ಎಸ್ ಆರ್ ಪಿ ,2 ತುಕಡಿ ಡಿ ಎ ಆರ್ ಮತ್ತು 110 ಗೃಹರಕ್ಷಕ ದಳದವರು ಪಾಲ್ಗೊಳ್ಳಲಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.