ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದ್ದು ಸೆ.೧೩ ರಿಂದ ೨೩ ರವರೆಗೆ ಎರಡು ಮಂಗಳವಾರ ಎರಡು ಶುಕ್ರವಾರದೊಂದು ಜಾತ್ರೆ ಅಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಜೇನುಕಲ್ಲಮ್ಮ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್ ತಿಳಿಸಿದರು.
ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿತೃಪಕ್ಷದಲ್ಲಿ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಸೆಪ್ಟಂಬರ್ ೧೩ ಮತ್ತು ೧೬ ಹಾಗೂ ೨೦ ಮತ್ತು ೨೩ ಮಂಗಳವಾರ ಹಾಗೂ ಶುಕ್ರವಾರದೊಂದು ಈ ಜಾತ್ರಾಮಹೋತ್ಸವ ಜರುಗಲಿದೆ ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪಾಶೀರ್ವಾದ ಪಡೆದುಕೊಳ್ಳುವಂತೆ ಭಕ್ತರಲ್ಲಿ ಮನವಿ ಮಾಡಿದರು.
ಮಹಾಮಾರಿ ಕೊರೋನಾ ಹಿನ್ನೆಲೆಯಿಂದಾಗಿ ಕಳೆದ ಎರಡು ವರ್ಷದಿಂದ ಜಾತ್ರಾ ಮಹೋತ್ಸವ ರದ್ದುಗೊಂಡಿದ್ದು ಈ ಭಾರಿ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗುವುದೆಂಬ ಅಶಾಭಾವನೆ ವ್ಯಕ್ತಪಡಿಸಿ ಬರುವ ಭಕ್ತರ ವಾಹನಗಳಿಗೆ ಪ್ರತ್ಯೇಕ ನಿಲುಗಡೆಗೆ ಜಾಗ ಮಾಡಲಾಗಿದೆ ಸ್ವಚ್ಚತೆ ದೃಷ್ಟಿಯಿಂದ ಮತ್ತು ಸಿಹಿತಿಂಡಿ ಮತ್ತು ಜಾತ್ರಾಮಹೋತ್ಸವದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಸಹ ಜಾಗವನ್ನು ಕಾಯ್ದಿರಿಸಲಾಗಿದ್ದು ಸರ್ವರು ಸಹಕರಿಸುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿಯ ಪ್ರಧಾನಕಾರ್ಯದರ್ಶಿ ಸುದೀರ್‌ಭಟ್ ,ಪ್ರಧಾನ ಅರ್ಚಕ ಭಾಸ್ಕರ್‌ಜೋಯ್ಸ್, ಹರೀಶ್‌ಕಲ್ಯಾಣಪ್ಪಗೌಡರು,ಸಂತೋಷ,ಶ್ರೀನಿವಾಸ್ ಕೆ.ಹೆಚ್.,
ರತ್ನಮ್ಮ,ಡಿ.ಕೆ.ಸರೋಜ,ಎ.ವಿ.ಮಲ್ಲಿಕಾರ್ಜುನ,ಉಸ್ಮಾನ್ ಸಾಬ್ ಇನ್ನಿತರರು ಹಾಜರಿದ್ದರು.