Headlines

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಪಣ – ಸಂಸದ ಬಿ ವೈ ರಾಘವೇಂದ್ರ

ರಿಪ್ಪನ್ ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಉನ್ನತಿಗಾಗಿ ಸಮುದಾಯ ಭವನಗಳ ನಿರ್ಮಾಣವಾಗಿದೆ ಕೆಲವು ಮಾತ್ರ ನಿರ್ಮಾಣ ಹಂತದಲ್ಲಿದ್ದು ಶೀಘ್ರ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಸಂಸದರಾದ ಬಿ ವೈ ರಾಘವೇಂದ್ರ ತಿಳಿಸಿದರು.


ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶಿವ ಮಂದಿರ ಹಾಗೂ ಶ್ರೀ ರಾಮಭವನದ ಕಾಮಗಾರಿಯನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು.ನೂತನ ರೈಲ್ವೇ ಕಾಮಗಾರಿ, ವಿಮಾನ ನಿಲ್ದಾಣ, ನ್ಯಾಷನಲ್ ಹೈವೇ, ಸ್ಮಾರ್ಟ್ ಸಿಟಿ, ವಿಶ್ವ ವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿ ಹಾಗೂ ಹೊಸನಗರ ತಾಲೂಕಿನ ಕೊಡಚಾದ್ರಿ – ಕೊಲ್ಲೂರು ಕೇಬಲ್ ಕಾರ್, ಮಾವಿನಕೊಪ್ಪದಿಂದ – ನಾಗೋಡಿ ವರೆಗೆ 766c ನೂತನ ಬೈಪಾಸ್ (ಕೊಲ್ಲೂರು ), ನಿರ್ಮಾಣದಿಂದ ಪ್ರವಾಸೋದ್ಯಮ ಬೆಳೆದು ಉದ್ಯೋಗ ಸೃಷ್ಟಿಯಾಗಲಿದೆ,ಈ ಮೂಲಕ ಸಮಗ್ರ ಜಿಲ್ಲೆ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಅವರು ತಿಳಿಸಿದರು.




ಈ ಸಂಧರ್ಭದಲ್ಲಿ ಸಮಾಜ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಶಿಥಿಲ ಸ್ಥಿತಿಯಲ್ಲಿದ್ದ ಅರಸಾಳು ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ, ಮಾಲ್ಗುಡಿ ರೈಲ್ವೇ ಮ್ಯೂಸಿಯಂ ನಿರ್ಮಿಸಿದ್ದೇವೆ, ಮುಂದಿನ ದಿನದಲ್ಲಿ ಜನತೆಗೆ ಅನುಕೂಲವಾಗುವಂತೆ ರೈಲುಗಳನ್ನು ಅರಸಾಳಿನಲ್ಲಿ ಸ್ಟಾಪ್ ನೀಡಲು ಈಗಾಗಲೇ ರೈಲ್ವೇ ಜೆನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಲಾಗಿದೆ ಎಂದರು.




ಈ ಸಂದರ್ಭದಲ್ಲಿ  ಸಮಾಜದ ಮುಖಂಡರಾದ ಸುರೇಶ್, ಪದ್ಮ, ನಾಗರಾಜ್, ಪ್ರೇಮಚಂದ್ರ, ರಿಪ್ಪನಪೇಟೆ ಗ್ರಾ.ಪಂ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್,ಗ್ರಾಪಂ ಸದಸ್ಯ ನಿರೂಪ್ ಕುಮಾರ್,
ಸ್ವಾಮಿ ಗೌಡ್ರು, ವರ್ತೆಶ್ ಹುಗುಡಿ, ರಾಜೇಂದ್ರ ಗಂಟೆ, ಯುವರಾಜ ಗೌಡ್ರು ಚಿಕ್ಕಮಣತಿ, ಅಶೋಕ ಬೆನವಳ್ಳಿ,ತಿರ್ತೆಶ್ ನಾಗಭೂಷಣ್ ಮುಡುಬ, ಶಾಂತಕುಮಾರ್ ಜಂಬಳ್ಳಿ, ನಿಂಗಪ್ಪ ಬೆನವಳ್ಳಿ, ನಿಂಗಪ್ಪ ಕಗ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *