
ಅ.6 ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು ನಿಲುಗಡೆ
ಅ.6 ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು ನಿಲುಗಡೆ ಶಿವಮೊಗ್ಗ : ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು – ತಾಳಗುಪ್ಪ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು (ಸಂಖ್ಯೆ: 20651 / 20652) ನಿಲುಗಡೆಗೆ ಸೌಲಭ್ಯ ಒದಗಿಸಲು ತಾತ್ಕಾಲಿಕವಾಗಿ ಆದೇಶ ಹೊರಡಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ. ಈ ನಿಲುಗಡೆ ಸೌಲಭ್ಯವನ್ನು 2025ರ ಅಕ್ಟೋಬರ್ 6 ರಿಂದ 2026ರ ಜನವರಿ 5 ರವರೆಗೆ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೊಳಿಸಿ ರೈಲ್ವೆ ಇಲಾಖೆಯು ಆದೇಶ ನೀಡಿದೆ….