
ಕ್ರೈಂ ಸುದ್ದಿ:

RIPPONPETE | ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು
ಅಪ್ರಾಪ್ತೆಯೊಂದಿಗೆ ವಿವಾಹ – ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲು ರಿಪ್ಪನ್ ಪೇಟೆ ; ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಯೊಂದಿಗೆ ಯುವಕನೊಬ್ಬ ಬಾಲ್ಯವಿವಾಹವಾಗಿದ್ದು ಈ ಹಿನ್ನಲೆಯಲ್ಲಿ ಯುವಕನ ವಿರುದ್ದ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಳ ಗ್ರಾಮದ ಮೋಹನ್ಕುಮಾರ್ ಎಂಬುವರು ಅಪ್ರಾಪ್ತೆಯೊಂದಿಗೆ ವಿವಾಹವಾಗಿರುವ ಘಟನೆ ಬಹಿರಂಗವಾಗಿ, ಕಾನೂನು ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯೊಂದಿಗೆ ಕಳೆದ ಆಗಸ್ಟ್ 29ರಂದು ದೇವಸ್ಥಾನವೊಂದರಲ್ಲಿ ವಿವಾಹ…

ಚಿನ್ನಮನೆ ಬಳಿ ಭಾರೀ ಅವಘಡ – ಚಲಿಸುತಿದ್ದ ಕಾರಿನ ಮೇಲೆ ಬಿದ್ದ ಮರ – ನಜ್ಜುಗುಜ್ಜಾದ ಕಾರು
ಚಿನ್ನಮನೆ ಗ್ರಾಮದ ಬಳಿ ಭಾರೀ ಅವಘಡ – ಚಲಿಸುತಿದ್ದ ಕಾರಿನ ಮೇಲೆ ಬಿದ್ದ ಮರ – ನಜ್ಜುಗುಜ್ಜಾದ ಕಾರು ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚಿನ್ನಮನೆ ಗ್ರಾಮದ ಬಳಿ ಭಾರೀ ಅವಘಡ ಸಂಭವಿಸಿದೆ. ಚಲಿಸುತಿದ್ದ ಕಾರಿನ ಮೇಲೆ ಏಕಾಏಕಿ ಮರವೊಂದು ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ಮಧ್ಯಾಹ್ನ ನಡೆದಿದೆ. ಮಾರುತಿ ಸ್ವಿಫ್ಟ್ ಕಾರಿನ ಚಾಲಕರ ಕಾರು ಚಲಾಯಿಸುತ್ತಿರುವಾಗ ತೀವ್ರ ಗಾಳಿಯಿಂದ ಕಿತ್ತು ಬಂದ ದೊಡ್ಡ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದೆ. ಘಟನೆಯಿಂದ ಕಾರಿನ ಮುಂಭಾಗ…

RIPPONPETE | ಕಾಡು ಪ್ರಾಣಿಗಳ ಬೇಟೆಗೆ ಸಂಚು – ಮೂವರು ಆರೋಪಿಗಳ ಬಂಧನ , ಇಬ್ಬರು ಪರಾರಿ
RIPPONPETE | ಕಾಡು ಪ್ರಾಣಿಗಳ ಬೇಟೆಗೆ ಸಂಚು – ಮೂವರು ಆರೋಪಿಗಳ ಬಂಧನ , ಇಬ್ಬರು ಪರಾರಿ ರಿಪ್ಪನ್ಪೇಟೆ : ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ಕುಮದ್ವತಿ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಬಂದಿದ್ದ ಐವರ ಗುಂಪನ್ನು ಅರಣ್ಯಾಧಿಕಾರಿ ಪವನ್ ಕುಮಾರ್ ಎನ್ ನೇತೃತ್ವದ ತಂಡ ದಿಡೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ , ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗೆ ಬಲೆ ಬೀಸಿದ್ದಾರೆ ಮಂಗಳವಾರ ಮುಂಜಾನೆ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಶಂಕಾಸ್ಪದ ಮಾಹಿತಿ ಲಭ್ಯವಾದ…

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ – ಒಂದು ಗಂಟೆಯೊಳಗೆ ಆರೋಪಿಯ ಹೆಡೆಮುರಿ ಕಟ್ಟಿದ ರಿಪ್ಪನ್ ಪೇಟೆ ಪೊಲೀಸರು
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ – ಒಂದು ಗಂಟೆಯೊಳಗೆ ಆರೋಪಿಯ ಹೆಡೆಮುರಿ ಕಟ್ಟಿದ ರಿಪ್ಪನ್ ಪೇಟೆ ಪೊಲೀಸರು ರಿಪ್ಪನ್ ಪೇಟೆ : ಅವಿವಾಹಿತ ಮಹಿಳೆ ಮೇಲೆ ದೂರದ ಸಂಬಂಧಿ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿ ಕೇವಲ ಒಂದು ಗಂಟೆಯೊಳಗೆ ಪಿಎಸೈ ರಾಜುರೆಡ್ಡಿ ನೇತ್ರತ್ವದ ಪೊಲೀಸರು ಆರೋಪಿಯ ಬಂಧಿಸಿ ಜೈಲಿಗಟ್ಟಿರುವ ಘಟನೆ ನಡೆದಿದೆ. ಬೆಳ್ಳೂರು ನಿವಾಸಿ ಪ್ರಕಾಶ್ (40) ಬಂಧಿತ ಆರೋಪಿಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪ್ಱ್ಂ ವ್ಯಾಪ್ತಿಯ ಕಳಸೆ ಗ್ರಾಮದ…

ಹಬ್ಬಕ್ಕಾಗಿ ತವರಿಗೆ ಬಂದಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹಬ್ಬಕ್ಕಾಗಿ ತವರಿಗೆ ಬಂದಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ರಂಜಿತಾ (28) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ, ಜಗುಲಿಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ರಂಜಿತಾ ಅವರು ಗಣಪತಿ ಹಬ್ಬದ ಪ್ರಯುಕ್ತ ತವರು ಮನೆಗೆ ಬಂದಿದ್ದರು. ಈ ಸಂದರ್ಭ ಮನೆಯವರಿಲ್ಲದ ವೇಳೆಯಲ್ಲಿ ಜಗುಲಿಯಲ್ಲಿ ನೇಣು ಬಿಗಿದು…

SHIVAMOGGA | ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ
SHIVAMOGGA | ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ ಯಾದಗಿರಿ ಜಿಲ್ಲೆಯ (Yadgir News) ನಗರದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು (9th student) ವಸತಿ ಶಾಲೆಯ ಶೌಚಾಲಯದಲ್ಲಿ (School toilet) ಗಂಡು ಮಗುವಿಗೆ ಜನ್ಮ (Delivery) ನೀಡಿದ ಘಟನೆ ಇನ್ನೂ ಮಸಕಾಗಿಲ್ಲದೇ ಇರುವಾಗ, ಶಿವಮೊಗ್ಗದಲ್ಲೂ ಇದೇ ರೀತಿಯ ಆಘಾತಕಾರಿ ಪ್ರಕರಣ ಹೊರಬಿದ್ದಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 15 ವರ್ಷದ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ಪ್ರಸವ…

72 ಗಂಟೆಗಳ ಶೋಧದ ಬಳಿಕ ಸಿಕ್ಕಿದ ಬೆಂಗಳೂರಿನ ಮಹಿಳೆಯ ಮೃತದೇಹ – ಮೂಕಾಂಬಿಕಾ ಭಕ್ತೆಯ ಅಂತಿಮ ಆಸೆ ನೆರವೇರಿಸಿಮಾನವೀಯತೆ ಮೆರೆದ ಸ್ಥಳೀಯರು
72 ಗಂಟೆಗಳ ಶೋಧದ ಬಳಿಕ ಸಿಕ್ಕಿದ ಬೆಂಗಳೂರಿನ ಮಹಿಳೆಯ ಮೃತದೇಹ – ಮೂಕಾಂಬಿಕಾ ಭಕ್ತೆಯ ಅಂತಿಮ ಆಸೆ ನೆರವೇರಿಸಿಮಾನವೀಯತೆ ಮೆರೆದ ಸ್ಥಳೀಯರು ಕೊಲ್ಲೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಸೌಪರ್ಣಿಕಾ ನದಿಯಲ್ಲಿ ಪತ್ತೆ – ಮಹಿಳೆಯ ಕೊನೆಯಾಸೆಯಂತೆ ಕೊಲ್ಲೂರಿನಲ್ಲಿಯೇ ಅಂತ್ಯಕ್ರಿಯೆ – ಮಾನವೀಯತೆ ಮೆರೆದ ಸ್ಥಳೀಯರು ಕೊಲ್ಲೂರು : ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ವಸುಧಾ ಚಕ್ರವರ್ತಿ (46) ಅವರ ಮೃತದೇಹ ಶನಿವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸರಹದ್ದಿನ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ. ಅವರು ಮೂಕಾಂಬಿಕಾ ದೇವಿಯ…

ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕ – ಆನೆ ಟ್ರಂಚ್ನಲ್ಲಿ ಶವವಾಗಿ ಪತ್ತೆ
ಗಣಪತಿ ವಿಸರ್ಜನೆಗೆ ತೆರಳಿದ ಯುವಕ – ಆನೆ ಟ್ರಂಚ್ನಲ್ಲಿ ಶವವಾಗಿ ಪತ್ತೆ ಶಿವಮೊಗ್ಗ : ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕನು ಆನೆ ಟ್ರಂಚ್ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಗೆರೆ ಅಂಚೆಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಮೃತನನ್ನು ನಾಗರಾಜ್ (34) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆದಿದ್ದು, ನಿನ್ನೆ ವಿಸರ್ಜನೆ ನೆರವೇರಿಸಲಾಯಿತು. ಈ ವೇಳೆ ಟ್ರಂಚ್ ಬಳಿ ಕಾಲು ಜಾರಿ ಬಿದ್ದು ದುರ್ಘಟನೆ…

ಕೊಲ್ಲೂರಿಗೆ ಆಗಮಿಸಿದ್ದ ಬೆಂಗಳೂರಿನ ವಿವಾಹಿತ ಮಹಿಳೆ ನಾಪತ್ತೆ
ಕೊಲ್ಲೂರಿಗೆ ಆಗಮಿಸಿದ್ದ ಬೆಂಗಳೂರಿನ ವಿವಾಹಿತ ಮಹಿಳೆ ನಾಪತ್ತೆ ಕೊಲ್ಲೂರು : ಕೊಲ್ಲೂರಿಗೆ ಆಗಮಿಸಿದ್ದ ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಪುತ್ರಿ ವಸುಧಾ ಚಕ್ರವರ್ತಿ (46) ನಾಪತ್ತೆಯಾದ ಮಹಿಳೆ. ಅವರು ಅಗಸ್ಟ್ 28 ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿದೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು. ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ…

ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ
ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ ಶಿವಮೊಗ್ಗ, ಆಗಸ್ಟ್ : ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿ, ಗೊಗ್ಗದ ರಾಜ್ಯ ಅರಣ್ಯದ ಸರ್ವೆ ನಂ.197ರಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ. ಎಂಪಿಎಂ ನಡುತೋಪಿನಲ್ಲಿ ಪತ್ತೆಯಾದ ಈ ಚಿರತೆಯ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳ ಪ್ರಕಾರ, ಸುಮಾರು ಮೂರು ವರ್ಷದ ಗಂಡು ಚಿರತೆಯ ಮೃತದೇಹ ಇದಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬರುವವರೆಗೆ ಸಾವಿನ ಕಾರಣ ಸ್ಪಷ್ಟವಾಗುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯರಿಂದ…