21 ವರ್ಷದ ಯುವತಿ ಕಾಣೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಗ್ರಾಮದ ಹೆಗಲತ್ತಿ ವಾಸಿ ಗುರುಪ್ರಸಾದ ಅವರ ಮಗಳು ನಾಗಶ್ರೀ (21) ಅವರು ನವೆಂಬರ್ 11ರಂದು ರಾತ್ರಿ ಮನೆಯಿಂದ ಹೊರಟು ಹೋದ ಬಳಿಕ ಈವರೆಗೆ ವಾಪಾಸಾಗಿಲ್ಲ.
ಕಾಣೆಯಾದ ನಾಗಶ್ರೀ ಅವರು ಸುಮಾರು 5 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೊರಟಾಗ ಲೈಟ್ ಪಿಂಕ್ ಟೀ ಶರ್ಟ್ ಮತ್ತು ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಈ ಯುವತಿಯ ಕುರಿತು ಯಾವುದೇ ಸುಳಿವು ದೊರೆತಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಮಾಹಿತಿ ನೀಡುವಂತೆ ಮಾಳೂರು ಪೊಲೀಸ್ ಠಾಣೆ ಮನವಿ ಮಾಡಿದೆ:
08181-235142 / 9480803353 / 08181-228310 / 9480803333 / 08182-261413 / 9480803300.
ಪೊಲೀಸರು ನಾಗರಿಕರ ಸಹಕಾರವನ್ನು ಕೋರಿದ್ದಾರೆ.


