Headlines

ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ರಿಪ್ಪನ್‌ಪೇಟೆ ವಿನಾಯಕ ಸರ್ಕಲ್‌ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಪಟ್ಟಣ ಪಂಚಾಯಿತಿ ಮಾದರಿಯಲ್ಲಿ ಅಭಿವೃದ್ಧಿ – ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ

ರಿಪ್ಪನ್‌ಪೇಟೆ, ನ.13 – ಪಟ್ಟಣದ ವಿನಾಯಕ ಸರ್ಕಲ್‌ನ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗಳಿಗೆ ಇಂದು ಸಂಜೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, “ಪಟ್ಟಣ ಪಂಚಾಯಿತಿ ಮಾದರಿಯಲ್ಲಿ ರಿಪ್ಪನ್‌ಪೇಟೆಯ ಅಭಿವೃದ್ಧಿ ಮಾಡಲಾಗುವುದು. ನಾಲ್ಕು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ವಿನಾಯಕ ಸರ್ಕಲ್‌ಗೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ,” ಎಂದು ಹೇಳಿದರು.

ಅವರು ಮುಂದುವರೆದು, “ರಾಜ್ಯ ಸರ್ಕಾರ ಪಟ್ಟಣ ಪಂಚಾಯಿತಿ ಘೋಷಣೆಗೆ ಪ್ರಸ್ತಾಪ ಮಾಡಿದಲ್ಲಿ ಮೊದಲ ಪಟ್ಟಣವಾಗಿ ರಿಪ್ಪನ್‌ಪೇಟೆಯನ್ನೇ ಘೋಷಿಸಲಾಗುವುದು. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ನಾನು ಸ್ವತಃ ಆಸಕ್ತಿ ವಹಿಸುತ್ತಿದ್ದೇನೆ,” ಎಂದು ಹೇಳಿದರು.

ಆನಂದಪುರ–ರಿಪ್ಪನ್‌ಪೇಟೆ ಮಾರ್ಗದ 10 ಕಿ.ಮೀ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಳೆಗಾಲದ ಅಡಚಣೆಯಿಂದ ಕಾಮಗಾರಿ ನಿಧಾನಗೊಂಡಿದ್ದರೂ ಇದೀಗ ಪುನರಾರಂಭಗೊಂಡಿದೆ.ವಿನಾಯಕ ಸರ್ಕಲ್ ಕಾಮಗಾರಿ ನಾಳೆಯಿಂದಲೇ ಆರಂಭವಾಗಲಿದ್ದು, ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು.

ಅದರ ಜೊತೆಗೆ ಶಿವಮೊಗ್ಗ–ಹೊಸನಗರ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದ ಪರಿಣಾಮವಾಗಿ ಉಂಟಾದ ಹೊಂಡ–ಗುಂಡಿಗಳ ದುರಸ್ತಿ ಕಾಮಗಾರಿಗೂ 20 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಹಂತ ಹಂತವಾಗಿ ಹೊಸ ರಸ್ತೆ ನಿರ್ಮಾಣ ನಡೆಯಲಿದೆ ಎಂದರು.

ಈ ಸಂಧರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಎಪಿಎಂಸಿ.ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಸಾಕಮ್ಮ ಹರತಾಳು,ಕೆಡಿಪಿ ಸದಸ್ಯರಾದ ಚಂದ್ರೇಶ್ , ಆಸೀಫ಼್ ಭಾಷಾ ,ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ , ಉಪಾಧ್ಯಕ್ಷರಾದ ಸುಧೀಂದ್ರ ಪೂಜಾರಿ ,ಮುಖಂಡರಾದ ಎಂ.ಬಿ.ಲಕ್ಷ್ಮಣ ಗೌಡ, ರವೀಂದ್ರ ಕೆರೆಹಳ್ಳಿ, ಹಾಗೂ ಗ್ರಾಪಂ  ಸದಸ್ಯರಾದ ಮಧುಸೂಧನ್, ನಿರೂಪ್ ಕುಮಾರ್, ಗಣಪತಿ, ಟಿ.ಚಂದ್ರೇಶ್, ನಿರೂಪಮ ರಾಕೇಶ್, ಸಾರಾಭಿ, ಕೆ.ಪ್ರಕಾಶ್ ಪಾಲೇಕರ್, ವೇದಾವತಿ, ಮಹಾಲಕ್ಷ್ಮಿ, ವಿನೋಧ, ವನಮಾಲ ಕೃಷ್ಣಪ್ಪ, ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಹಾಗೂ ಜೆಇ ಸೇರಿದಂತೆ ಗ್ರಾಮ ಪಂಚಾಯಿತ್ ಅಭಿವೃದ್ದಿ ಅಧಿಕಾರಿ ನಾಗರಾಜ್ ಪಂಚಾಯಿತ್ ಸಿಬ್ಬಂದಿ ವರ್ಗ ಹಾಜರಿದ್ದರು.