ಕ್ರೈಂ ಸುದ್ದಿ:
ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರ ಬಂಧನ – 14 ದ್ವಿಚಕ್ರ ವಾಹನಗಳು ವಶಕ್ಕೆ
ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರ ಬಂಧನ – 14 ದ್ವಿಚಕ್ರ ವಾಹನಗಳು ವಶಕ್ಕೆ ಶಿವಮೊಗ್ಗ : ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಲಾಗಿದ್ದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಟಿಪ್ಪುನಗರದ ನಿವಾಸಿ ಶಾದಾಬ್ ಖಾನ್ (23) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು, ನೆಲ್ಲೂರು ಗ್ರಾಮದ ನಿವಾಸಿ ಶಹಬಾಜ್ ಅಹ್ಮದ್(24) ಎಂಬ ಇಬ್ಬರು ಕಳ್ಳರನ್ನು ಬಂಧಿಸಿ 14 ದ್ವಿಚಕ್ರ ವಾಹನಗಳನ್ನು ಪೊಲೀಸರು…
ಕಾರು ತೆಗೆಯುವಂತೆ ಹಾರನ್ ಮಾಡಿದ್ದಕ್ಕೆ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ
ಕಾರು ತೆಗೆಯುವಂತೆ ಹಾರನ್ ಮಾಡಿದ್ದಕ್ಕೆ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ಶಿವಮೊಗ್ಗ : ಅಡ್ಡ ನಿಲ್ಲಿಸಿದ್ದ ಕಾರು ತೆಗೆಯುವಂತೆ ಹಾರನ್ಮಾಡಿದ್ದಕ್ಕೆ ನವದುರ್ಗ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಸಮೀಪ ಬ್ರೆಟ್ ಹೊಟೇಲ್ ಎದುರು ಘಟನೆ ನಡೆದಿದೆ. ನವದುರ್ಗ ಬಸ್ ಚಾಲಕ ಬಿ.ಎಸ್.ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಬಸ್ಸು ರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ನಿಲ್ದಾಣದಿಂದ ಹೊರ ಬಂದು ಬೈಟ್ ಹೊಟೇಲ್ ಮುಂಭಾಗ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ರವಿ ಬಸ್ ನಿಲ್ಲಿಸಿದ್ದರು….
ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ತೆರಳುತ್ತಿದ್ದ ಯುವತಿಯ ಸರ ಅಪಹರಣ
ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ತೆರಳುತ್ತಿದ್ದ ಯುವತಿಯ ಸರ ಅಪಹರಣ ಶಿವಮೊಗ್ಗ : ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬರ ಸರವನ್ನು ಕಳ್ಳನೊಬ್ಬ ಎಳೆದು ಕದ್ದೊಯ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಪೇಪರ್ ಫ್ಯಾಕ್ಟರಿಯ ಶಾರದ ನಗರ ನಿವಾಸಿಯಾದ ಯುವತಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಸವಾರ ಕಳ್ಳನೊಬ್ಬ ಆಕೆಯ ಕೊರಳಲ್ಲಿದ್ದ 9 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಕದ್ದೊಯ್ದಿದ್ದಾನೆ. ಅಕಸ್ಮಿಕ ಎಳೆಯಾಟದಿಂದ ಯುವತಿ ಬೈಕ್ನಿಂದ ಕೆಳಗೆ ಬಿದ್ದು…
ಸ್ವೀಟ್ ಬಾಕ್ಸ್ನಲ್ಲಿ ಗಾಂಜಾ ಅಡಗಿಸಿ ಜೈಲಿಗೆ ತರುವ ಯತ್ನ – ಯುವಕನ ಬಂಧನ
ಸ್ವೀಟ್ ಬಾಕ್ಸ್ನಲ್ಲಿ ಗಾಂಜಾ ಅಡಗಿಸಿ ಜೈಲಿಗೆ ತರುವ ಯತ್ನ – ಯುವಕನ ಬಂಧನ ಶಿವಮೊಗ್ಗ: ಖೈದಿಯೊಬ್ಬನಿಗೆ ಸಿಹಿ ನೀಡುವ ನೆಪದಲ್ಲಿ ಗಾಂಜಾ ತರುವ ಯತ್ನ ಮಾಡಿದ ಯುವಕನ ಕೃತ್ಯ ಬಹಿರಂಗಗೊಂಡಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದ ತಪಾಸಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸೋಮಿನಕೊಪ್ಪದ ನಿವಾಸಿ ಸೈಯದ್ ವಾಸೀಂ (25) ಬಂಧಿತನಾಗಿದ್ದಾನೆ. ಆತ ಸ್ಥಳೀಯ ಬೇಕರಿಯಿಂದ ತಂದಿದ್ದ ಸ್ವೀಟ್ ಬಾಕ್ಸ್ನಲ್ಲಿ ಗಾಂಜಾ ಅಡಗಿಸಿಕೊಂಡು ಖೈದಿ ಮೆಹಬೂಬ್ ಖಾನ್ಗೆ ತಲುಪಿಸಲು ಬಂದಿದ್ದ ಎಂದು ತಿಳಿದುಬಂದಿದೆ. ಜೈಲು ಪ್ರವೇಶದ್ವಾರದಲ್ಲಿ ನಿಯೋಜಿತರಾಗಿದ್ದ…
ಅಂಗನವಾಡಿಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ಮೊಟ್ಟೆ ತಿಂದು , ಧಾನ್ಯಗಳನ್ನು ಹಾಳುಗೆಡವಿದ ದುಷ್ಕರ್ಮಿಗಳು
ಅಂಗನವಾಡಿಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿ ಮೊಟ್ಟೆ , ಧಾನ್ಯ ಹಾಳುಗೆಡವಿದ ದುಷ್ಕರ್ಮಿಗಳು ಶಿವಮೊಗ್ಗ: ತಾಲೂಕಿನ ಕುಂಸಿ ಗ್ರಾಮದ ಅಂಗನವಾಡಿ ಕೇಂದ್ರ ಮತ್ತು ಮಹಿಳಾ ಒಕ್ಕೂಟದ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳ ಕೃತ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮದ್ಯಪಾನದಲ್ಲೇ ತೇಲಿದ ದುಷ್ಕರ್ಮಿಗಳು ಮೊದಲು ಕೊಠಡಿಗಳ ಬೀಗಗಳನ್ನು ಮುರಿದು ಒಳನುಗ್ಗಿದ್ದಾರೆ. ನಂತರ ಟೇಬಲ್ ಸುತ್ತಲು ಕುರ್ಚಿಗಳನ್ನು ಅಣಿಗೊಳಿಸಿ ಕುಳಿತು ಮದ್ಯ ಸೇವಿಸಿದ್ದು, ಸ್ಥಳದಲ್ಲಿ ಮದ್ಯದ ಬಾಟಲಿಗಳ ಕವರ್ಗಳು ಹಾಗೂ ಟವೆಲ್ಗಳು ಚೆಲ್ಲಾಪಿಲ್ಲಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಸರ್ಕಾರದಿಂದ ಅಂಗನವಾಡಿಗೆ ನೀಡಲಾಗಿದ್ದ ಆಹಾರ ಧಾನ್ಯಗಳನ್ನು…
ಮಹಿಳೆಯ ಖಾಸಗಿ ಫೊಟೊ ಕಳುಹಿಸಿ 10 ಲಕ್ಷ ರೂ. ಗೆ ಬೇಡಿಕೆ ಇಟ್ಟ ಭೂಪ – ಪ್ರಕರಣ ದಾಖಲು
ಮಹಿಳೆಯ ಖಾಸಗಿ ಫೊಟೊ ಕಳುಹಿಸಿ 10 ಲಕ್ಷ ರೂ. ಗೆ ಬೇಡಿಕೆ ಇಟ್ಟ ಭೂಪ – ಪ್ರಕರಣ ದಾಖಲು ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಬರೋಬ್ಬರಿ ₹10 ಲಕ್ಷ ಹಣವನ್ನು ಬೇಡಿಕೊಂಡ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಮಹಿಳೆ ಶಿವಮೊಗ್ಗದ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 31ರಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ…
ಹಾಸ್ಟೆಲ್ ಟೆರೇಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ
ಹಾಸ್ಟೆಲ್ ಟೆರೇಸ್ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಪತ್ತೆ ಶಿವಮೊಗ್ಗ: ಹಾಸ್ಟೆಲ್ನ ಟೆರೇಸ್ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ. ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತ ದುರ್ಧೈವಿಯಾಗಿದ್ದಾರೆ. ಹಾಸ್ಟೆಲ್ನ ಟೆರೇಸ್ನಲ್ಲಿರುವ ನೀರಿನ ಟ್ಯಾಂಕ್ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೆ ವಾರ್ಡನ್ಗೆ ಮಾಹಿತಿ ನೀಡಿದ್ದಾರೆ.ಘಟನೆಗೆ ನಿಖರವಾದ ಕಾರಣ…
ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!??
ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!?? ಶಿವಮೊಗ್ಗ: ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ನಡೆದಿದ್ದು, ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ವಾಮಾಚಾರದ ಕೃತ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಅಕ್ಟೋಬರ್ 31, 2025 ರಂದು ಮಧ್ಯಾಹ್ನ 1ರಿಂದ 2ರ ನಡುವಿನ ಸಮಯದಲ್ಲಿ ನಡೆದಿದೆ. ದೂರುದಾರ ಮಹಿಳೆಯು ಮನೆಯಲ್ಲಿ ಇರದ ಸಮಯದಲ್ಲಿ, ಕೆಲವರು ಬಾಗಿಲು ಮುರಿದು…
ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ — ಕಾರ್ಮಿಕನ ದುರ್ಮರಣ
ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ — ಕಾರ್ಮಿಕನ ದುರ್ಮರಣ ತೀರ್ಥಹಳ್ಳಿ: ತಾಲೂಕಿನ ಬಸವಾನಿ ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಅಡಿಕೆ ಗೊನೆ ಕೀಳುವಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಸಂಜೆ ನಡೆದಿದೆ. ಮೃತನನ್ನು ಕೊಪ್ಪ ತಾಲ್ಲೂಕಿನ ದೋರಗಲ್ಲು ಗ್ರಾಮದ ಸತೀಶ್ (50) ಎಂದು ಗುರುತಿಸಲಾಗಿದೆ. ಸತೀಶ್ ಹಲವು ವರ್ಷಗಳಿಂದ ಈ ಭಾಗದಲ್ಲಿ ಗೊನೆಗಾರನಾಗಿ ಕೆಲಸ ಮಾಡುತ್ತಿದ್ದು, ಲಕ್ಷ್ಮೀಪುರದ ರೈತರಿಬ್ಬರ ಅಡಿಕೆ ತೋಟದಲ್ಲಿ ಗೊನೆ ಕೀಳುವ ವೇಳೆ ಆತನ ಕೈಯಲ್ಲಿ ಇದ್ದ ದೋಟಿ…
ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ
ಮಾಲೀಕನ ಸಾವಿನ ದುಃಖ ತಾಳಲಾರದೆ ಪ್ರಾಣ ತ್ಯಜಿಸಿದ ಸಾಕು ನಾಯಿ ಭದ್ರಾವತಿ: ನಾಯಿ — ನಿಷ್ಠೆ, ಪ್ರೀತಿ ಮತ್ತು ಬದ್ಧತೆಯ ಪ್ರತೀಕ. ಮಾಲೀಕನಿಗಾಗಿ ಜೀವವನ್ನೇ ಪಣಕ್ಕಿಡುವ ಈ ಪ್ರಾಣಿ, ಕೆಲವೊಮ್ಮೆ ಅವನಿಂದ ದೂರವಾಗುವುದನ್ನೇ ಸಹಿಸಲಾರದು. ಭದ್ರಾವತಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಅದಕ್ಕೆ ಜೀವಂತ ಉದಾಹರಣೆ. ನಗರದ ಹುತ್ತಾಕಾಲನಿಯ ಜಿಂಕ್ಲೈನ್ ಪ್ರದೇಶದ ನಿವಾಸಿ ಲಾರೆನ್ಸ್ (61) ಪೈಂಟರ್ ಕೆಲಸ ಮಾಡುತ್ತಿದ್ದು, ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ನಿಧನರಾದರು. ಆಸ್ಪತ್ರೆಯಿಂದ ಅವರ ಮೃತದೇಹವನ್ನು ಮನೆಗೆ ತರಲಾಗುತ್ತಿದ್ದಂತೆಯೇ, ಮನೆಯ…