ಕ್ರೈಂ ಸುದ್ದಿ:
ಅಕ್ರಮ ಮರಳು ಸಾಗಾಟದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದ ಹೊಸನಗರ ಪೊಲೀಸರು :
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿದ್ದಾರೆ. ನೆನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್ ಬಿ ಸಿ ಹಾಗೂ ಪಿಎಸ್ ಐ ನಿಂಗರಾಜ್ ಬಿ ನರಲಾರ ರವರು ಭರ್ಜರಿ ಕಾರ್ಯಚರಣೆ ಮಾಡುವ ಮೂಲಕ ತಾಲೂಕಿನ ಮರಳು ಮಾಫ಼ಿಯಾ ದೊರೆಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಅಕ್ರಮ ಮರಳು ಸಾಗಾಣಿಕೆಯ ಖಚಿತ ಮಾಹಿತಿ ಆಧಾರದ ಮೇರೆಗೆ 4 ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.ಕಾರ್ಯಾಚರಣೆ ವೇಳೆ ನಾಲ್ಕು ವಾಹನಗಳ ಚಾಲಕರು ವಾಹನ…
ಚನ್ನಗಿರಿಯ ಯುವಕ ಆಗುಂಬೆ ಸ್ಮಶಾನದ ಶೆಡ್ ನಲ್ಲಿ ಶವವಾಗಿ ಪತ್ತೆ :
ಆಗುಂಬೆ : ಕಳೆದ ವಾರ ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಸ್ಮಶಾನದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಡೆದಿದೆ. ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಮೃತಪಟ್ಟಿರುವ ದುರ್ಧೈವಿಯಾಗಿದ್ದಾನೆ.ಆಗುಂಬೆ ಗ್ರಾಮದ ಸ್ಮಶಾನದ ಶೆಡ್ನಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಮೇ 24ರಂದು ಸ್ವಾಮಿ ನಾಪತ್ತೆಯಾಗಿದ್ದ. ಮಗ ಕಾಣೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಯುವಕನ ಮೊಬೈಲ್ ನೆಟ್ವರ್ಕ್ ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆಗುಂಬೆಯ ಸ್ಮಶಾನದಲ್ಲಿ ಡೆತ್ನೋಟ್ ಬರೆದಿಟ್ಟು ದುರಂತ ಅಂತ್ಯಕಂಡಿದ್ದಾನೆ. …
ತೀರ್ಥಹಳ್ಳಿ ತುಂಗಾ ನದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ :
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಅಪರಿಚಿತ ಯುವಕನೋರ್ವನ ಶವವೊಂದು ಪತ್ತೆಯಾಗಿದೆ. ಇಂದು ರಾಮೇಶ್ವರ ದೇವಸ್ಥಾನದ ಹಿಂಭಾಗದ ನದಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಯುವಕನೊಬ್ಬ ಭಾನುವಾರ ತನ್ನ ಚಪ್ಪಲಿ, ಶರ್ಟ್, ಪ್ಯಾಂಟ್ ಬಿಚ್ಚಿಟ್ಟು ಸ್ನಾನ ಮಾಡಲು ನದಿಗೆ ಇಳಿದಿದ್ದನು ಎನ್ನಲಾಗಿದೆ. ಸ್ಥಳೀಯ ಸಾರ್ವಜನಿಕರ ಮಾಹಿತಿ ಮೇರೆಗೆ ಕುರುವಳ್ಳಿಯ ಸಮಾಜ ಸೇವಕ ಪ್ರಮೋದ್ ಪೂಜಾರಿ ಮತ್ತು ತಂಡ ಹಾಗೂ ಅಗ್ನಿಶಾಮಕದಳದವರು ಶವವನ್ನು ಹುಡುಕಲು ಮುಂದಾಗಿದ್ದರು. ಇಂದು ತುಂಗಾ ಸೇತುವೆ ಸಮೀಪ ಶವ ಪತ್ತೆಯಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ವೇಳೆ ಕಾರ್ಮಿಕ ಸಾವು :
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೇಳೆ ನಡೆದ ಅವಘಡ ದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಮಲ್ಲಿಕಾರ್ಜುನ (28) ಎಂದು ಗುರುತಿಸಲಾಗಿದೆ. ಮಣ್ಣನ್ನು ಸಮತ್ತಟ್ಟು ಮಾಡುವ ವೇಳೆ ಮಣ್ಣು ಕಂಪ್ರೆಸ್ ಮಾಡುವ ಬುಲ್ಡೋಜರ್ ನಂತಹ ಮಿಷಿನ್ ಆತನ ಮೇಲೆ ಹರಿದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಕಾರ್ಮಿಕ ಮಲ್ಲಿಕಾರ್ಜುನ ನಿರ್ಲಕ್ಷ ತನದಿಂದ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದ್ದು. ಮಲ್ಲಿಕಾರ್ಜುನ ಮೂಲತಃ ಹಾವೇರಿ ಜಿಲ್ಲೆಯವನಾಗಿದ್ದು ತನ್ನ ತಂದೆಯ ಜೊತೆ ಶಿವಮೊಗ್ಗದ ವಿಮಾನ…
ಕೋಳಿ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು :
ಕೋಳಿ ಫುಡ್ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಹಾರ ಮಿಕ್ಸ್ ಮಾಡುವ ಮಿಷಿನ್ ನಲ್ಲಿ ಕಸ ಸಿಕ್ಕಿಕೊಂಡಿದೆ ಎಂದು ಸ್ವಚ್ಛತೆಗೆ ಮುಂದಾದ ಕಾರ್ಮಿಕ ಮಿಷಿನ್ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮಿಷಿನ್ ನಿನ ಸ್ವಿಚ್ ಆನ್ ಮಾಡಿ ಹಾರೆಯಿಂದ ತಿವಿದು ಸ್ವಚ್ಛತೆ ಮಾಡುವಾಗ ಆಯತಪ್ಪಿ ಮಿಷಿನ್ ಮೇಲೆ ಬಿದ್ದಿದ್ದಾನೆ. ಆತನ ಹೊಟ್ಟೆಯ ಭಾಗವನ್ನ ಯಂತ್ರ ಇಬ್ಭಾಗ ಮಾಡಿದೆ. ಆತ ಸಾವನ್ನಪ್ಪಿದ್ದಾನೆ. ಭದ್ರಾವತಿಯ ಲೋಯರ್ ಹುತ್ತಾ ಸಮೀಪದ ಆರ್ ಎ ಎಸ್ ಪ್ಯಾರಾ ಸಿಟಿಕಲ್ ಫ್ಯಾಕ್ಟರಿಯಲ್ಲಿ…
ಸಾಗರದಲ್ಲಿ ಡ್ರೈನೇಜ್ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಸಾವು :
ಸಾಗರ : ನಗರಸಭೆಯ ನಿರ್ಲಕ್ಷ್ಯಕ್ಕೆ ಡ್ರೈನೇಜ್ ಚರಂಡಿಗೆ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಗರ ನಗರದ ಲಿಮ್ರಾ ಟ್ರಾನ್ಸ್ ಪೋರ್ಟ್ ಮಾಲಿಕ ನವಾಬ್ ಜಾನ್(62) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ. ಬುಧವಾರ ಮದ್ಯಾಹ್ನ ಮಾರ್ಕೆಟ್ ನಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ಮೀನು ಮಾರ್ಕೇಟ್ ಬಳಿ ಇರುವ ಚರಂಡಿಗೆ ಬಿದ್ದು ಅವಘಢ ಸಂಭವಿಸಿದೆ. ನವಾಬ್ ಜಾನ್ ತಮ್ಮ ದ್ವಿಚಕ್ರ ವಾಹನ ಸಮೇತ ಈ ಚರಂಡಿಗೆ ಬಿದ್ದು,ತಲೆಗೆ ತೀವ್ರತರವಾದ ಗಾಯಮಾಡಿಕೊಂಡಿದ್ದರು.ತಕ್ಷಣ ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿಲಾಗಿತ್ತು ಆದರೆ ಚಿಕಿತ್ಸೆ…
ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್ : ಯುವಕ ಸಾವು….
ಯುವಕನೊಬ್ಬ ಬೈಕಿನಲ್ಲಿ ತೆರಳುತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ರಾಮಕೃಷ್ಣಪುರದ ಬಳಿಯ ಕಾಸರವಳ್ಳಿ ಗ್ರಾಮದ ಕೋಟೆ ತೋಟ ಬಳಿ ನಡೆದಿದೆ. ಬುಧವಾರ ಸಂಜೆ ಬಂಡಿಗಡಿಯ ಚಾವಲ್ಮನೆ ರಂಜನ್ ಕೆ(32)ಎಂಬ ಯುವಕ ತೀರ್ಥಹಳ್ಳಿಯಿಂದ ಮದುವೆ ಕಾರ್ಯಕ್ರಮ ಮುಗಿಸಿ ಊರಿಗೆ ಹೋಗುತ್ತಿದ್ದ ವೇಳೆ ರಾಮಕೃಷ್ಣಪುರದ ಬಳಿ ಬೈಕ್ ನಿಯಂತ್ರಣ ತಪ್ಪಿದ ಕಾರಣ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯವಾಗಿತ್ತು. ಸ್ಥಳೀಯ ಸಾರ್ವಜನಿಕ ಆಂಬುಲೆನ್ಸ್ ಮೂಲಕ…
ತೀರ್ಥಹಳ್ಳಿಯಲ್ಲಿ ಹಾಡಹಗಲೇ ಮನೆ ಬೀಗ ಮುರಿದು ಕಳ್ಳತನ :
ತೀರ್ಥಹಳ್ಳಿ : ಹಾಡುಹಗಲೇ ಮನೆಯ ಬೀಗ ಮುರಿದು ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿದ ಘಟನೆ ತಾಲೂಕಿನ ಸಾಲೂರು ಗ್ರಾಪಂ ವ್ಯಾಪ್ತಿಯ ಮಾರಿಗುಣಿ ಸಮೀಪದ ಹೊನ್ನೆಕಟ್ಟೆಯ ಮಂಜುನಾಥ ಎಂಬುವವರ ಮನೆಯಲ್ಲಿ ಮಂಗಳವಾರ ನೆಡೆದಿದೆ. ಈ ಘಟನೆಯಲ್ಲಿ 90 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ಸೇರಿದಂತೆ 7 ಸಾವಿರ ನಗದು ಹಣ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಇವರ ಮನೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಎರಡೂ ಭಾಗದಲ್ಲಿ ಅಕ್ಕಪಕ್ಕ…
ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ :
ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗ ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ತುಂಗಾ ನಗರ ನಿವಾಸಿ ಮಹಮ್ಮದ್ ತಬಾರಕ್ ವುಲ್ಲಾ ಎಂಬ ವ್ಯಕ್ತಿಯು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪುನಗರದ ಕೆಕೆ ಶೆಡ್ ನ ಹತ್ತಿರ ಖಾಲಿ ಸ್ಥಳದಲ್ಲಿ ತಾನು ಸಂಗ್ರಹಿಸಿ ಇಟ್ಟಿದ್ದ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದಾರೆ….
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು:
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಕಳ್ಳತನದ ಆರೋಪಿ ಪ್ರತಾಪ್ ನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ ಹೊಸನಗರ ಮಾರ್ಗವಾಗಿ ಮಂಗಳೂರಿಗೆ ತೆರಳುತಿದ್ದ ಆರೋಪಿ ಪ್ರತಾಪ್ ನನ್ನು ಪೊಲೀಸರು ಹೊಸನಗರ ಪಟ್ಟಣದಲ್ಲಿ ಹಿಡಿದು ಹೆಡೆಮುರಿ ಕಟ್ಟಿದ್ದಾರೆ. ಠಾಣೆಯಿಂದ ತಪ್ಪಿಸಿಕೊಂಡ ದಿನದಿಂದ ಆರೋಪಿ ಪ್ರತಾಪ್ ನ ಬೆನ್ನು ಬಿದ್ದಿದ್ದ ಪೊಲೀಸರು ಇಂದು ಹೊಸನಗರ ಮೂಲಕ ಮಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಮೇರೆಗೆ ಹೊಸನಗರ ಪಟ್ಟಣದಲ್ಲಿ ಬಂಧಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಶಾಂತವೀರ ಹಾಗೂ ಸಿಪಿಐ ಗಿರೀಶ್ ಮಾರ್ಗದರ್ಶನದಲ್ಲಿ ಪಿಎಸ್…