POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ – ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಮದೀನಾ ಕಾಲೋನಿಯ ಯುವಕನ ಬಂಧನ|Ripponpet

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಸಂತೆ ಮಾರ್ಕೆಟ್ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಮದೀನಾ ಕಾಲೋನಿ ನಿವಾಸಿ ತನ್ವೀರ್ ಬಂಧಿತ ಆರೋಪಿಯಾಗಿದ್ದಾನೆ.ಈತನಿಗೆ ಇತ್ತೀಚೆಗೆ ಗಾಂಜಾ ಸೇವನೆ ಆರೋಪದಡಿಯಲ್ಲಿ ಬಂಧಿಸಲಾಗಿದ್ದ ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಗಾಂಜಾ ನೀಡಿರುವುದಾಗಿ ತನಿಖೆ ವೇಳೆಯಲ್ಲಿ ಆರೋಪಿ ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಸಿದ್ದೇಶ್ ಮೇಲೆ ಪ್ರಕರಣ ದಾಖಲಾಗಿದೆ.

ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆಯ ಹಿನ್ನಲೆ :

ನಿನ್ನೆಯ ದಿನ  ಸಂತೆ ಮಾರ್ಕೆಟ್ ಬಳಿ ರಿಪ್ಪನ್‌ಪೇಟೆ ಪೊಲೀಸರು ಗಸ್ತು ಸಂಚರಿಸುತ್ತಿರುವಾಗ ರಾತ್ರಿ 08-45 ಗಂಟೆ ವೇಳೆಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವನನ್ನು ಕಂಡು ಆತನ ಬಳಿ ಹೋಗಿ ಆತನನ್ನು ವಿಚಾರಿಸಿದ್ದಾರೆ.

ಈ ಸಮಯದಲ್ಲಿ ಆರೋಪಿಯ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಸಿದಾಗ ಆತನು ಬೀಡಿ ಜೊತೆ ಗಾಂಜಾ ಸೇರಿಸಿ ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಗಾಂಜಾ ಸೇದಲು ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಬಳಿ ಗಾಂಜಾ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕೂಡಲೇ  ಆತನನ್ನು ವೈದ್ಯಕೀಯ ತಪಾಸಣೆಗೆ ಮೆಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು, ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದಕೀಯ ಪರೀಕ್ಷೆಯಿಂದ ದೃಡಪಟ್ಟಿರುವುದರಿಂದ ಈತನ ವಿರುದ್ಧ ಮಾದಕ ದ್ರವ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.ಸಿದ್ದೇಶ್ ಮೇಲೂ ಮಾದಕ ದ್ರವ್ಯ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.


ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.