ಮಂಗಳೂರಿನ ಹೊರವಲಯದಲ್ಲಿ ನಡೆದ ಆಟೋ ಸ್ಪೋಟದ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ ಬೆನ್ನಲ್ಲೇ ಈ ಪ್ರಕರಣದಲ್ಲಿ ಶಿವಮೊಗ್ಗದ ವ್ಯಕ್ತಿಯ ಲಿಂಕ್ ಸಹ ಕೇಳಿ ಬರುತ್ತಿದೆ.
ಈ ರೀತಿಯ ಸುದ್ದಿಯ ಜಾಡನ್ನ ಬೆನ್ನು ಹತ್ತಿರುವ ಮಾಧ್ಯಮಗಳಿಗೆ ಹೆಸರು ಕೇಳಿ ಬರುತ್ತಿರುವ ಹೆಸರೆಂದರೆ ಶಾರೀಕ್ ಹೆಸರು. ಯಾರೂ ಈ ಶಾರೀಕ್ ಎಂದು ಕೇಳ್ತಾ ಹೋದರೆ ಸೆಪ್ಪಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ಪತ್ತೆಯಾದ ಮೂವರು ಶಂಕಿತರ ಹೆಸರಿನಲ್ಲಿ ಕೇಳಿ ಬಂದ ಪ್ರಮುಖ ಆರೋಪಿ ಈ ಶಾರೀಕ್.
ತೀರ್ಥಹಳ್ಳಿಯ ನಿವಾಸಿ ಶಾರೀಕ್ ಮತೀನ್ ಜೊತೆ ಸಂಪರ್ಕ ಹೊಂದಿ ಮಂಗಳೂರಿನೊಂದಿಗೆ ಲಿಂಕ್ ಇಟ್ಟುಕೊಂಡಿದ್ದನು. ಶಿವಮೊಗ್ಗದಲ್ಲಿ ಮಾಜ್ ಮತ್ತು ಯಾಸೀನ್ ಈ ಇಬ್ಬರ ಸಂಗಡದೊಂದಿದೆ ಬೆರತು ಬಾಂಬ್ ನ್ನು ನದಿಯಲ್ಲಿ ಬ್ಲಾಸ್ಟ್ ಮಾಡುವ ಪ್ರಯೋಗ ಮಾಡಿದ್ದನು.
ಈ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಾಜ್ ಸಹ ತೀರ್ಥಹಳ್ಳಿಯವನಾಗಿದ್ದು ಆತ ಮಂಗಳೂರಿನ ಬಿಇ ವಿದ್ಯಾರ್ಥಿಯಾಗಿದ್ದನು ಮತ್ತು ಯಾಸೀನ್ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿಯಾಗಿದ್ದಾನೆ. ಈ ಪ್ರಕರಣದಲ್ಲಿ ಶಾರೀಕ್ ತಲೆ ಮರೆಸಿಕೊಂಡಿದ್ದನು. ಶಾರೀಕ್ ಪತ್ತೆಯಲ್ಲಿ ಪೊಲೀಸರು ಯಶಸ್ವಿಯಾಗಿರಲಿಲ್ಲ. ಈಗ ಮಂಗಳೂರಿನ ಆಟೋ ಬ್ಲಾಸ್ಟ್ ನಲ್ಲಿ ಶಾರೀಕ್ ಹೆಸರು ಕೇಳಿ ಬರುತ್ತಿದೆ.
ಆಟೋ ನಿಗೂಢ ಸ್ಪೋಟ ಪ್ರಕರಣ ದಿನಕ್ಕೊಂದು ಚುರುಕುಗೊಳಿಸುತ್ತಿದೆ. ಸ್ಪೋಟದ ಸ್ಥಳದಲ್ಲಿ ಕಂಕನಾಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಕೇಂದ್ರ ತನಿಖಾ ಸಂಸ್ಥೆಗಳಾದ RAW ಮತ್ತು IB ಈಗಾಗಲೇ ಮಾಹಿತಿಯನ್ನು ಕಲೆ ಹಾಕಿದೆ. ಇನ್ನೊಂದೆಡೆಯಲ್ಲಿ ಎನ್ಐಎ ಅಧಿಕಾರಿಗಳ ತಂಡ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು, ತನಿಖೆಯನ್ನು ಆರಂಭಿಸಿದೆ.
ಮಂಗಳೂರು ಹೊರವಲಯದ ನಾಗುರಿಯಲ್ಲಿ ನಡೆದಿದ್ದ ಆಟೋ ಸ್ಪೋಟ ಪ್ರಕರಣದಲ್ಲಿ ಈಗಾಗಲೇ ಕುಕ್ಕರ್, ಬ್ಯಾಟರಿ, ಟೈಮರ್ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಂಗಳೂರು ನಗರದಲ್ಲಿ ಬಾಂಬ್ ತಯಾರಿ ನಡೆಯುತ್ತಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಬಾಂಬ್ ತಯಾರಿಸಿ ಬೇರೆಡೆಗೆ ಸ್ಥಳಾಂತರಿಸುವ ಕೃತ್ಯವನ್ನು ನಡೆಸಲಾಗುತ್ತಿತ್ತಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.