ಕ್ರೈಂ ಸುದ್ದಿ:
ಜಿಂಕೆ ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಮಾಲು ಸಮೇತ ಸೆರೆ :
ಅರಣ್ಯ ಸಂಚಾರಿ ದಳದ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರವಾಗಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟದಲ್ಲಿ ತೊಡಗಿದ್ದಂತಹ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಿರಿಗೆರೆ ರಸ್ತೆಯ ಆಯನೂರು ಕೆರೆ ಬಳಿ ಜಿಂಕೆ ಕೊಂಬುಗಳ ಸಾಗಾಟದಲ್ಲಿ ತೊಡಗಿದ್ದ ಸಿರಿಗೆರೆ ನಿವಾಸಿ ಇಸ್ಮಾಯಿಲ್,ಹಾರನಹಳ್ಳಿ ನಿವಾಸಿ ನಯಾಜುಲ್ಲಾ ರನ್ನು ಬಂಧಿಸಿ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯನ್ನು ಚಂದ್ರಕಾಂತ್ ಐಪಿಎಸ್ ಎಸ್ಪಿ ಸಿಐಡಿ ಅರಣ್ಯ ಘಟಕ ಮಡಿಕೇರಿ ಇವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್…
ಮೀನುಗಾರರ ಮೇಲೆ ಹಲ್ಲೆ ಮಾಡಿದ್ದ ನಿಹಾಲ್ ಕೋಬ್ರಾ & ಗ್ಯಾಂಗ್ ಬಂಧನ
ತೀರ್ಥಹಳ್ಳಿ : ತಾಲೂಕಿನ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಸರದಲ್ಲಿ ಮಂಡಗದ್ದೆ ಕ್ಯಾಂಪ್ ಮೀನುಗಾರರ ಮೇಲೆ ಕಳೆದ ಐದು ದಿನದ ಹಿಂದೆ ಹಲ್ಲೆ ನೆಡೆಸಿದ್ದ ನಿಹಾಲ್ ಕೋಬ್ರಾನಾ ಬಂಧನವಾಗಿದೆ. ಇತ್ತೀಚಿಗೆ ಅನೇಕ ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ನಿಹಾಲ್ ಕೋಬ್ರಾ ಮತ್ತು ಅವನ ಸಹಚರರು ಮಂಡಗದ್ದೆ ಕ್ಯಾಂಪ್ ಯುವಕರ ಮೇಲೆ ಹಲ್ಲೆ ನೆಡೆಸಿ ಕಣ್ತಪ್ಪಿಸಿಕೊಂಡಿದ್ದರು. ಕಳೆದ 5 ದಿನಗಳಿಂದ ಹಗಲು ರಾತ್ರಿ ನಿರಂತರವಾಗಿ ಕೋಬ್ರಾನಾ ಬೇಟೆಯಾಡಿದ ತೀರ್ಥಹಳ್ಳಿ ಪೊಲೀಸರು ಬೆಂಗಳೂರು ಸೇರಿದಂತೆ ನಾನಾ ಭಾಗದಲ್ಲಿ ಓಡಾಡಿಕೊಂಡು…
ಶಿವಮೊಗ್ಗದ ಗಾಂಧಿಬಜಾರ್ ನಲ್ಲಿ ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು :
ಶಿವಮೊಗ್ಗ : ಗಾಂಧಿ ಬಜಾರ್ನ ಮಾರ್ಕೆಟ್ನಲ್ಲಿ ಚಾಕುವಿನಿಂದ ಇರಿತಕ್ಕೆ ಒಳಗಾಗಿದ್ದ ಸೆಂಧಿಲ್ ಕುಮಾರ್ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಒಂಬತ್ತು ತಿಂಗಳ ಹಿಂದೆ ಸೆಂಧಿಲ್ ನ ಸ್ನೇಹಿತ ಸಂತೋಷ್ (ಜೋಗಿ ಸಂತು) ವಿನ ಜೊತೆಯಲ್ಲಿ ಹಣದ ವ್ಯವಹಾರದ ವಿಚಾರವಾಗಿ ಜಗಳವಾಗಿದ್ದು ಆ ಕಾರಣಕ್ಕೆ ಸೆಂಧಿಲ್ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಈ ಅಟ್ಯಾಕ್ ನಿಂದ ಗಾಯಗೊಂಡಿದ್ದ ಸೆಂಥಿಲ್ ನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕುಟುಂಬದವರು ಕರೆದುಕೊಂಡು ಹೋಗಿದ್ದರು….
ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣ : 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ ಪೊಲೀಸರು
ತೀರ್ಥಹಳ್ಳಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಮಾಳೂರು ಪೊಲೀಸರು 48 ಗಂಟೆಯಲ್ಲಿ ಪ್ರಕರಣದ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ಹಿನ್ನಲೆ : ತಮಿಳುನಾಡಿನ ಮೂಲದ ಯುವಕ, ಚೆನ್ನಗಿರಿ ಹೊನ್ನಾಳಿ ಭಾಗದ ನೆಂಟರ ಸಂಪರ್ಕ ಪಡೆದು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ತೀರ್ಥಹಳ್ಳಿಯ ಕುಡುಮಲ್ಲಿಗೆಯಲ್ಲಿ ಗಾರೆ ಕೆಲಸ ಮಾಡುವವರೊಬ್ಬರ ಪರಿಚಯವಾಗಿ ಅವರ ಜೊತೆಗೆ 15 ದಿನದಿಂದ ಕೆಲಸ ಮಾಡುತ್ತಿದ್ದ. ಆತ ತನಗೆ ಕೆಲಸ ಕೊಟ್ಟಿದ್ದವರ ಅಪ್ತಾಪ್ತ ವಯಸ್ಸಿನ ಮಗಳನ್ನ ಪುಸಲಾಯಿಸಿ, ತಮಿಳುನಾಡಿಗೆ ಕರೆದೊಯ್ದಿದ್ದ….
ಮಹಿಳೆಯೊಬ್ಬರ ಮೊಬೈಲ್ ಗೆ ಅಶ್ಲೀಲ ಚಿತ್ರ ರವಾನೆ ಮಾಡಿದ ಆರೋಪಿಯನ್ನು ಬಂಧಿಸಿದ ರಿಪ್ಪನ್‌ಪೇಟೆ ಪೊಲೀಸರು :
ರಿಪ್ಪನ್‌ಪೇಟೆಯ ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ದೇವಳ್ಳಿ ಗ್ರಾಮದ ಬಾಬು ಬೈರುಗವಳಿ ಬಿನ್ ಬೈರುಗವಳಿ ಎಂಬ (22) ವರ್ಷದ ಆರೋಪಿಯನ್ನು ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಿಪ್ಪನ್‌ಪೇಟೆಯ ಗವಟೂರು ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ…
ಆರಗ ಸಮೀಪ ಮಧ್ಯ ರಸ್ತೆಯಲ್ಲೇ ಯುವಕನ ಶವ ಪತ್ತೆ : ಸಾವಿನ ಸುತ್ತ ಅನುಮಾನದ ಹುತ್ತ..??????
ತೀರ್ಥಹಳ್ಳಿ : ಆರಗ ಸಮೀಪದ ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಳಗೇರಿ ಬಸ್ ನಿಲ್ದಾಣದ ಸಮೀಪ ರಸ್ತೆ ಮಧ್ಯದಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಮೂಡುವಳ್ಳಿಯ ಚೇತನ್ ( 27 ವರ್ಷ ) ಮೃತಪಟ್ಟ ವ್ಯಕ್ತಿಯಾಗಿದ್ದು,ರಸ್ತೆ ಮಧ್ಯದಲ್ಲಿಯೇ ಬೆಳಗಿನ ಜಾವ ಶವ ಪತ್ತೆಯಾಗಿದೆ. ಯುವಕನಿಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗುತಿದ್ದರೂ, ಬಸ್ ನಿಲ್ದಾಣ ಸಮೀಪ KA-15-L-0286 ಹೀರೋ ಹೊಂಡ ಸ್ಪೆಂಡರ್ ಬೈಕ್ ನಿಂತಿದ್ದು ಪಾದರಕ್ಷೆ ಸಹ ಅಲ್ಲೇ ಇದೆ ಎನ್ನಲಾಗಿದೆ. ಬೈಕ್…
ರಿಪ್ಪನ್‌ಪೇಟೆ ಸಮೀಪದ ಅಬ್ಬಿಗುಂಡಿಯಲ್ಲಿ ಕಾಲುಜಾರಿ ಹೊಳೆಯಲ್ಲಿ ಬಿದ್ದು ಪಿಯುಸಿ ವಿದ್ಯಾರ್ಥಿ ಸಾವು
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಶಾಂತಪುರ ಬಳಿ ಅಬ್ಬಿಗುಂಡಿ ಎಂಬ ಹೊಳೆಯಲ್ಲಿ ಕಾಲು ಜಾರಿ ನೀರಿನ ಸುಳಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಶಾಂತಪುರ ಸಮೀಪದ ಸಿದ್ಧಗಿರಿ ನಿವಾಸಿ ಕೋರೆ ಮಂಜಣ್ಣ ಇವರ ಪುತ್ರ ಕಿರಣ್(17) ಮೃತಪಟ್ಟ ದುರ್ದೈವಿಯಾಗಿದ್ದಾನೆ .ಈತನು ಹೊಸನಗರ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಇಂದು ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ಸ್ನೇಹಿತ ಯಶವಂತ್ ಎಂಬಾತನೊಂದಿಗೆ ಶಾಂತಪುರ ಸಮೀಪದ ಅಬ್ಬಿಗುಂಡಿ ಹೊಳೆಯ ಸಮೀಪ ಹೋದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ….
ಭೀಕರ ರಸ್ತೆ ಅಪಘಾತ : ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳ ಸಾವು
ಭದ್ರಾವತಿಯ ಹುಣಸೇಕಟ್ಟೆ ಜಂಕ್ಷನ್ ಬಳಿ ರಸ್ತೆ ಅಪಘಾತವಾಗಿದ್ದು ಕುವೆಂಪು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ 10-30 ರ ಸಮಯದಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉತ್ತಮ ಚಕ್ರವರ್ತಿ, ಮನೋಜ್ ಎಂಬ ಇಬ್ಬರು ಯುವಕರು ಶಂಕರಘಟ್ಟದಿಂದ ಭದ್ರಾವತಿಗೆ ಹೋಗುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉತ್ತಮ ಚಕ್ರವರ್ತಿ ಮತ್ತು ಮನೋಜ್ ಇಬ್ಬರು ಎನ್ ಆರ್ ಪುರದ ನಿವಾಸಿಗಳಾಗಿದ್ದು, ಉತ್ತಮ್ ಚಕ್ರವರ್ತಿ ಎಂಸಿಎ…
ತೀರ್ಥಹಳ್ಳಿಯಲ್ಲಿ ಸರಕಾರಿ ನೌಕರಿಯಲ್ಲಿರುವ ಯುವ ಪ್ರೇಮಿಗಳು ಆತ್ಮಹತ್ಯೆಗೆ ಯತ್ನ……! ಜಾತಿಯೆಂಬ ವಿಷಬೀಜ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವಾಯಿತೆ..? ಇಬ್ಬರೂ ಸರ್ಕಾರಿ ನೌಕರರು ಅವಳು ಪೊಲೀಸ್-ಇವನು ಫಾರೆಸ್ಟರ್..!!!!
ಪ್ರೀತಿಸಿ ಮದುವೆಯಾಗಲು ಮನೆಯವರು ಒಪ್ಪದೇ ಇರುವ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪೋಷಕರ ಆಶೀರ್ವಾದ ಪಡೆದು ಹೊಸ ಜೀವನವನ್ನು ಆರಂಭಿಸಬೇಕಾಗಿದ್ದ ಯುವ ಪ್ರೇಮಿಗಳ ಮದುವೆಯ ಪ್ರಸ್ತಾಪಕ್ಕೆ ಪೋಷಕರು ವಿರೋಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ ಘಟನೆಯ ಹಿನ್ನಲೆ : ತೀರ್ಥಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೇದೆ ಹಾಗೂ ಬೆಳಗಾವಿ ಮೂಲದ ಪ್ರವೀಣ್ ಎಂಬ ಅರಣ್ಯ ಫಾರೆಸ್ಟರ್ ಇಬ್ಬರು ಸುಮಾರು ವರ್ಷಗಳಿಂದ ಪ್ರೀತಿಸುತಿದ್ದು ಈಗ ಮನೆಯಲ್ಲಿ…
ಪತಿಯೊಂದಿಗಿನ ಜಗಳದಿಂದ ನೊಂದು ತನ್ನ ಆರು ಮಕ್ಕಳನ್ನು ಬಾವಿಗೆಸೆದು ಕೊಂದ ಪಾಪಿ ತಾಯಿ :
ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಐದು ಬಾಲಕಿಯರು ಸೇರಿದಂತೆ ಆರು ಸಣ್ಣ ಮಕ್ಕಳು ಸಾವನ್ನಪ್ಪಿದ್ದಾರೆ.ಆದರೆ, ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಾವಿಯಲ್ಲಿದ್ದ ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಮಾಹಿತಿ ಪ್ರಕಾರ,…