Headlines

ಹೊಸನಗರದ ಕೊಡಚಾದ್ರಿ ಕಾಲೇಜು,ಗರ್ತಿಕೆರೆ ಕಾಲೇಜಿನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ – ಕುಖ್ಯಾತ ಅಂತರ್ ಜಿಲ್ಲಾ ಕಳ್ಳರು ಎಷ್ಟು ಶಾಲೆಯ ಬೀಗ ಮುರಿದಿದ್ದಾರೆ ಗೊತ್ತಾ.???? ಈ ಸುದ್ದಿ ನೋಡಿ|Arested

ಇತ್ತೀಚೆಗೆ ಮಲೆನಾಡಿನಾದ್ಯಂತ ಶಾಲಾ ಕಾಲೇಜುಗಳಲ್ಲಿ ಕಳ್ಳತನ ಮಾಡುತಿದ್ದ ನಟೋರಿಯಸ್ ಕಳ್ಳರನ್ನು ಉಡುಪಿ ಜಿಲ್ಲೆಯ ಕೋಟ ಪೊಲೀಸರು ಬಂಧಿಸಿದ್ದಾರೆ.



ಹೊಸನಗರದ ಕೊಡಚಾದ್ರಿ ಕಾಲೇಜು,ಗರ್ತಿಕೆರೆ ಕಾಲೇಜು,ಕೋಣಂದೂರು ಕಾಲೇಜು ,ನಗರ ಕಾಲೇಜಿನಲ್ಲಿ ಬೀಗ ಮುರಿದು ಕಳ್ಳತನ ಮಾಡಿದ್ದರು.



ಇಂದು ಉಡುಪಿ ಜಿಲ್ಲೆಯ ಕೋಟ ಠಾಣಾ ಸರಹದ್ದಿನ ಆವರ್ಸೆ ಗ್ರಾಮದ ಬಳಿ ಬೈಕ್ ನಲ್ಲಿ  ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಕಳ್ಳತನ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ.

ತಮಿಳುನಾಡಿನ ಸೇಲಂ ನಿವಾಸಿ ಕುಮಾರಸ್ವಾಮಿ(59),ಉಡುಪಿ ಜಿಲ್ಲೆಯ ಕಾಪು ನಿವಾಸಿ ಜಾಹಿದ್ ಸಿನಾನ್(32) ಬಂಧಿತ ಆರೋಪಿಗಳಾಗಿದ್ದಾರೆ.

ಉಡುಪಿ ಜಿಲ್ಲೆಯ ಪೊಲೀಸ್ ಪ್ರಕಟಣೆ :

ಉಡುಪಿ ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು  ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನವಾಗಿರುವ ಬಗ್ಗೆ ಸರಣಿ ಪ್ರಕರಣಗಳು ಉಡುಪಿ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿರುತ್ತದೆ. ಆರೋಪಿಗಳ ಪತ್ತೆಗೆ ಎಲ್ಲ ಶಾಲಾ ಕಾಲೇಜುಗಳ ಮಾಹಿತಿ , ಅಪರಾಧ ನಡೆದ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಆಧರಿಸಿ, ಸಿಸಿ ಕ್ಯಾಮೇರಾಗಳ ಪರಿಶೀಲನೆ, ಲಾಡ್ಜ್ ಪರಿಶೀಲನೆ, ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ.  ಹೊರ ರಾಜ್ಯ ಹಾಗೂ ಹೊರ ಜಿಲ್ಲೆ ಯಿಂದ ಬರುವ  ವ್ಯಕ್ತಿಗಳು ಹಾಗೂ ವಾಹನದ ಮಾಹಿತಿ  ಬಗ್ಗೆ ನಿಗಾವಹಿಸಿದ್ದರು.

ಈ ದಿನ ದಿನಾಂಕ 21/11/2022 ರಂದು ಕೋಟ ಠಾಣಾ ಸರಹದ್ದಿನ ಆವರ್ಸೆ ಗ್ರಾಮದ ಬಳಿ ಬೈಕ್ ನಲ್ಲಿ  ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ 

1. ಕುಮಾರಸ್ವಾಮಿ (59) ತಂದೆ ಮುರಗೇಶ ವಾಸ ಕಲ್ಲುಕುಡಚೀ,  ಸೇಲಂ, ತಮಿಳುನಾಡು ವಿಚಾರಿಸಲಾಗಿ ಈತನ  ಮೇಲೆ ಈ ಹಿಂದೆ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ ಪ್ರಕರಣ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣದಲ್ಲಿ ಹಳೆ ಆರೋಪಿಯಾಗಿದ್ದು .ಸದ್ರಿ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟು  2014 ರಿಂದ 2021 ರವರೆಗೆ  ಸುಮಾರು 7 ವರ್ಷಗಳ ಕಾಲ ಕಾರವಾರ  ಜೈಲ್ ನಲ್ಲಿದ್ದು ಶಿಕ್ಷೆಯನ್ನು ಅನುಭವಿಸಿರುತ್ತಾನೆ. 

2. ಜಾಹೀದ ಸಿನಾನ್ (32) ತಂದೆ: ಮಹಮ್ಮದ್, ವಾಸ 525(ಎ), ಹೆಚ್ ಕೆ ಮಂಜೀಲ್, ಎಸ್.ಎಸ್ ರೋಡ್ ಹೆಜಮಾಡಿ ಗ್ರಾಮ, ಕಾಪು ತಾಲೂಕು ಉಡುಪಿ ನಿವಾಸಿಯಾಗಿರುತ್ತಾನೆ.ಈತನು ಕಳ್ಳತನ ನಡೆಸಲು ಸಂತೆಕಟ್ಟೆ ಉಡುಪಿ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದು ಇನ್ನೊಬ್ಬ ತಮಿಳುನಾಡಿನ  ಆರೋಪಿ ಕುಮಾರ ಸ್ವಾಮಿಯನ್ನು ಕರೆಯಿಸಿಕೊಂಡು ಕಳ್ಳತನವನ್ನು ಮಾಡುತ್ತಿದ್ದನು. 
 ಕುಮಾರಸ್ವಾಮಿ 2021ರಲ್ಲಿಕಾರವಾರ ಜೈಲಿನಿಂದ ಬಿಡುಗಡೆಯಾದ ನಂತರ ಹೆಜಮಾಡಿಯ ಜಾಹೀದ್ ಸಿನಾನ್ ಜೊತೆ ಸೇರಿ ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 37 ಕಡೆ ರಾತ್ರಿ ಸಮಯ ಶಾಲಾ- ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಿರುತ್ತಾರೆ.


ಈ ಕುಖ್ಯಾತ ಕಳ್ಳರು ಉಡುಪಿ ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ಸರಹದ್ದಿನಲ್ಲಿ ಒಟ್ಟು 27 ಕಡೆ ಶಾಲಾ ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣೆಯಲ್ಲಿ 2 ಪ್ರಕರಣ, ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ, ಹೊಸನಗರ,ರಿಪ್ಪನಪೇಟೆ,ನಗರ ಠಾಣೆಗಳಲ್ಲಿ 6 ಪ್ರಕರಣ,  ಉತ್ತರ ಕನ್ನಡ ಜಿಲ್ಲೆಯ ಮುಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳನ್ನು ಪೊಲೀಸರು ಆರೋಪಿಗಳನ್ನು ಬಂಧಿಸಿ ಈ ಮೇಲಿನ  ಎಲ್ಲ ಪ್ರಕರಣಗಳನ್ನು ಭೇದಿಸಿರುತ್ತಾರೆ. ಈ ಆರೋಪಿಗಳಿಂದ  1 ಬೈಕು  2 ಮೊಬೈಲ್ ಪೋನ್  ಹಾಗೂ 10,000 ನಗದನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ. 


                 ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್  ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ  ಬ್ರಹ್ಮಾವರ,  ಕೋಟ ಠಾಣೆಯ ಪಿ.ಎಸ್.ಐ  ಮಧು ಬಿ.ಇ, ಕೋಟ  ಠಾಣೆಯ ತನಿಖಾ ವಿಭಾಗದ  ಪಿ.ಎಸ್‌‌‌‌‌‌.ಐ , ಪುಷ್ಪಾ, ಪ್ರೊ. ಪಿ.ಎಸ್‌‌‌‌.ಐ. ನೂತನ್ ಡಿ. ಈ , ಕೋಟ ಪೊಲೀಸ್ ಠಾಣಾ ಎ.ಎಸ್‌‌‌‌.ಐ. ರವಿ ಕುಮಾರ್‌‌‌, ಸಿಬ್ಬಂದಿಯವರಾದ ರಾಘವೇಂದ್ರ, ರಾಘವೇಂದ್ರ ಶೆಟ್ಟಿ ಪ್ರಸನ್ನ, ಮೋಹನ್ ಕೊತ್ವಾಲ್, ವಿಜೆಯೇಂದ್ರ ಮತ್ತು  ಬ್ರಹ್ಮಾವರ ವೃತ್ತ ಕಛೇರಿಯ ಪ್ರದೀಪ ನಾಯಕ  ಹಾಗೂ  ಪೊಲೀಸ್ ಅಧೀಕ್ಷಕರ ಕಛೇರಿಯ ತಾಂತ್ರಿಕ ವಿಭಾಗದ ಶಿವಾನಂದ , ದಿನೇಶ , ನಿತಿನ್  ರವರುಗಳು ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್  ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *