Headlines

ನವೆಂಬರ್ ತಿಂಗಳಿನಲ್ಲಿ ಅನ್ಯಭಾಷೆಗಳ ವೈಭವೀಕರಣ ಸಲ್ಲ – ಮೆಣಸೆ ಆನಂದ್|Ripponpet

ನವೆಂಬರ್ ತಿಂಗಳಲ್ಲಿ ಅನ್ಯ ಭಾಷೆಗಳ ವೈಭವೀಕರಣ ಸಲ್ಲ

ರಿಪ್ಪನ್‌ಪೇಟೆ : ಕನ್ನಡ ಕಲರವದ ತಿಂಗಳಾದ ನವೆಂಬರ್ ನಲ್ಲಿ ಕನ್ನಡದ ಕಂಪು ರಾಜ್ಯಾದ್ಯಂತ ಮೇಳೈಸುತ್ತಿರುತ್ತದೆ.ಇಂತಹ ಸಂಧರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಅನ್ಯ ಭಾಷೆಗಳ ವೈಭವಿಕರಿಸಿದರೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗುತ್ತದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆನಂದ್ ಮೆಣಸೆ ಹೇಳಿದರು.




ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೆಲ ಜಲ ಉಳಿವಿಗಾಗಿ ಹೋರಾಟ ಮಾಡುವುದು ಎಲ್ಲಾ ಕನ್ನಡ ಸಂಘಗಳ ಉದ್ದೇಶ. ಕಲಾ ಕೌಸ್ತುಭ ಕನ್ನಡ ಸಂಘ ಕಳೆದ 28 ವರ್ಷಗಳಿಂದ ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ನೆಲ ಜಲದ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದು ಸ್ವಾಗತಾರ್ಹವಾಗಿದ್ದು,ನ.27ರಂದು ನಡೆಯುವ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮಕ್ಕೆ ಸಹಯೋಗ ನೀಡಿರುವ ವಿಚಾರ ಮಾಧ್ಯಮದ ಮೂಲಕ ನಮಗೆ ತಿಳಿದಿದೆ. ವಿವಿಧ ಭಾಷೆಗಳನ್ನು ವೈಭವಿಕರಿಸುವ ವಿವಿಧ ಸಂಸ್ಕೃತಿಗಳನ್ನ ಬಿಂಬಿಸುವ ಕಾರ್ಯಕ್ರಮಕ್ಕೆ ನವೆಂಬರ್ ತಿಂಗಳಿನಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ಸಹಮತ ವ್ಯಕ್ತಪಡಿಸಿರುವುದು ಕನ್ನಡಕ್ಕೆ ಮಾಡಿರುವ ಅವಮಾನವಾಗಿದೆ ಎಂದರು.




ನವಂಬರ್ ಎಂದರೆ ಕನ್ನಡದ ಕಲರವ ಇಡೀ ತಿಂಗಳು ರಾಜ್ಯಾದ್ಯಂತ ಕನ್ನಡದ ಸಂಭ್ರಮ ನಡೆಯುತ್ತಿರುತ್ತದೆ. ಆದರೆ ನವೆಂಬರ್ 25 ಮತ್ತು 26 ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿದ್ದು ನಮ್ಮ ಸಂಘ ಯಾವುದೇ ಕನ್ನಡದ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸುತ್ತದೆ.ಆದರೆ ನವೆಂಬರ್ ತಿಂಗಳಿನಲ್ಲಿ ಕನ್ನಡ ನಾಡಿನಲ್ಲಿ ಅನ್ಯಭಾಷೆಗಳ ವೈಭವಿಕರಣ ಸಹಿಸಲು ಸಾಧ್ಯವೇ ಇಲ್ಲಾ,
ಈ ಬಗ್ಗೆ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಇಲ್ಲದಿದ್ದಲ್ಲಿ ಕಸ್ತೂರಿ ಕನ್ನಡ ಸಂಘದ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದರು.




ಪತ್ರಿಕಾಗೋಷ್ಠಿಯಲ್ಲಿ ಆರ್ ಎನ್‌ಮಂಜುನಾಥ್, ಕೆರೆಹಳ್ಳಿ ರವೀಂದ್ರ, ದೇವರಾಜ್ ಕುಷನ್ ,ಆಸೀಫ಼್ ಭಾಷಾಸಾಬ್, ಫ್ಯಾನ್ಸಿ ರಮೇಶ್,ಹಸನಬ್ಬ,ಚಿಗುರು ಶ್ರೀಧರ್, ಗಣಪತಿ,ಆರ್ ಡಿ ಶೀಲಾ, ಧನಲಕ್ಷ್ಮಿ,ಶ್ಯಾಮಲ,ಹೇಮಾವತಿ,ಸೀಮಾ, ಈಶ್ವರಪ್ಪಗೌಡ, ಅರವಿಂದ್ ಭಟ್, ಯೋಗೇಂದ್ರಪ್ಪ ಗೌಡ, ಇನ್ನು ಮುಂತಾದವರು ಉಪಸಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *