ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸುಗಂಧರಾಜ್ ಎಂಬುವವರಿಗೆ ಸೇರಿದ ಮನೆಯ ಸಮೀಪದಲ್ಲಿ ಅಕ್ರಮ ಕಡಿತಲೆ ಮಾಡಿ ಸಂಗ್ರಹಿಸಿಟ್ಟಿದ್ದ ಸುಮಾರು ರೂ. 2ಲಕ್ಷ ಮೌಲ್ಯದ ತೇಗದ ಮರದ ನಾಟ ಹಾಗೂ ಸೈಜ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಠಾಣೆ ವ್ಯಾಪ್ತಿಯಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಅಕ್ರಮವಾಗಿ ಕಡಿದು, ಸ್ಶೆಜ್‌ಗಳಾಗಿ ಪರಿವರ್ತಿಸಿದ್ದು, ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಲಯ ಅರಣ್ಯ ಅಧಿಕಾರಿ ಎಂ. ರಾಘವೇಂದ್ರ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಉಪವಲಯ ಅರಣ್ಯಾಧಿಕಾರಿ ಯುವರಾಜ್, ಅಕ್ಷಯ್ ಕುಮಾರ್,ಹರೀಶ,ತವರ್ಯ ನಾಯಕ್,ಅನಿಲ್,ಯುವರಾಜ್,
ಪ್ರಮೋದ್ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಮೋದ್ ದಾಳಿಯಲ್ಲಿ ಭಾಗವಹಿಸಿದ್ದರು.
ಕಡಿಸುವುದು ಅವರೇ ಹಿಡಿಯುವುದು ಅವರ ಕಡೆಯವರೇ…!!!!????
ಹೀಗೊಂದು ಮಾತು ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕೊಳವಳ್ಳಿ ಗ್ರಾಮದಲ್ಲಿ ಕೇಳಿಬರುತಿದ್ದು ಅರಣ್ಯ ಅಧಿಕಾರಿಯೊಬ್ಬರು ಕೊಳವಳ್ಳಿ ಗ್ರಾಮದ ಗ್ರಾಮಠಾಣ ಜಾಗದಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಡಿಯುವವರ ಬೆಂಬಲಕಿದ್ದು ಅದು ಗ್ರಾಮಸ್ಥರ ಗಮನಕ್ಕೆ ಹಲವಾರು ದಿನಗಳ ಹಿಂದೆಯೇ ಬಂದಿತ್ತು.
ಆದರೆ ಮೊನ್ನೆಯ ದಿನ ಗ್ರಾಮದ ವ್ಯಕ್ತಿಯೊಬ್ಬರು ನೇರವಾಗಿ ತಾಲೂಕಿನ ಹಿರಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಮಾಹಿತಿ ತಿಳಿಸಿದಾಗ ಆ ಅಧಿಕಾರಿ ಸಿಬ್ಬಂದಿಗಳನ್ನು ಯಾವುದೇ ಮಾಹಿತಿ ನೀಡದೇ 18ನೇ ಮೈಲಿಕಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ.ಆ ನಂತರ ಸ್ಥಳದ ಮಾಹಿತಿ ನೀಡಿ ಬುದ್ದಿವಂತಿಕೆ ತೋರಿಸಿದ್ದಾರೆ ಹಾಗಾಗಿ ಅಕ್ರಮ ನಾಟವನ್ನು ಪತ್ತೆಹಚ್ಚಲು ಸಾಧ್ಯವಾಯಿತಂತೆ ಎಂದು ಜನಸಾಮಾನ್ಯರು ಗುಸುಗುಸು ಮಾತನಾಡಿಕೊಳ್ಳುತಿದ್ದಾರೆ.
ಜನಸಾಮಾನ್ಯ ಕಟ್ಟಿಗೆ,ಸೊಪ್ಪು ಕಾಡಿನಿಂದ ತಂದಾಗ ಬೂಟುಕಾಲಲ್ಲಿ ಮನೆಗೆ ನುಗ್ಗಿ ಹಿಂಸಿಸಿ ದರ್ಪ ತೋರಿಸುವ ಅಧಿಕಾರಿ ಕಳ್ಳರ ಜೊತೆ ಶಾಮೀಲಾಗಿ ಕಾಡನ್ನು ಬರಿದು ಮಾಡಲು ಹೊರಟಿರುವುದು ಬೇಸರದ ಸಂಗತಿ ಎನ್ನುತ್ತಾರೆ ಕೊಳವಳ್ಳಿಯ ಜನತೆ.
ಒಟ್ಟಾರೆಯಾಗಿ ಈ ವಿಚಾರ ಹೊಸನಗರ ತಾಲೂಕಿನ ಅರಣ್ಯ ಇಲಾಖೆಯ ಸಭ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ ಎನ್ನಲಾಗುತ್ತಿದ್ದು ಏನು ಕ್ರಮ ಕೈಗೊಳ್ಳುತ್ತಾರೋ ಕಾದುನೋಡಬೇಕಾಗಿದೆ.