ಕ್ರೈಂ ಸುದ್ದಿ:
ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ :
ಶಿವಮೊಗ್ಗ : ನಗರದ ಮುಸ್ಲಿಂ ಸ್ಮಶಾನದ ಮುಂಭಾಗದ ಕಬ್ಬಿನ ಹಾಲಿನ ಮಶೀನ್ ಪಕ್ಕದ ಮರದಲ್ಲಿ ಸುಮಾರು 35 ವರ್ಷದ ಅನಾಮಧೇಯ ಪುರುಷನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ. ಅನಾಮಧೇಯ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು ಹಾಗೂ 01 ಇಂಚು ಉದ್ದದ ಕುರುಚಲು ಗಡ್ಡ ಮೀಸೆ ಇರುತ್ತದೆ. ಮೃತನು ಕಂದು ಕೆಂಪು…
ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ನಾಲ್ವರ ಸಾವು,ಒಬ್ಬರ ಸ್ಥಿತಿ ಗಂಭೀರ
ಶಿವಮೊಗ್ಗ : ನಗರದ ಸವಳಂಗ ಬ್ರಿಡ್ಜ್ ಬಳಿ ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಮೂರು ಮಹಿಳೆಯರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಾಲಕ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಒಬ್ಬರು ಸದ್ಯಕ್ಕೆ ಬಚಾವ್ ಆಗಿದ್ದು ಮೆಗ್ಗಾನ್ ಗೆ ದಾಖಲಿಸಿ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಳಂಗ ಬ್ರಿಡ್ಜ್ ಬಳಿ ಮರಳು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಯಲ್ಲಾಪುರ-ಬೆಂಗಳೂರು ಕೆಎಸ್ಆರ್ ಟಿ ಸಿ ಬಸ್…
ಸೊರಬದಲ್ಲಿ ಎತ್ತು ತೊಳೆಯುವಾಗ ಕಾಲುಜಾರಿ ಬಿದ್ದು ವ್ಯಕ್ತಿ ಸಾವು :
ಸೊರಬ : ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿ ಕಾಲು ಜಾರಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ತಾಲೂಕಿನ ಮೂಡಿ ಗ್ರಾಮದಲ್ಲಿ ನಡೆದಿದೆ. ಮೂಡಿ ಗ್ರಾಮದ ಶಶಿಧರ ಗೂಳೇರ್ (42) ಮೃತ ದುರ್ದೈವಿ. ಇಂದು ಬೆಳಗ್ಗೆ ಗ್ರಾಮದ ವರದಾ ನದಿಯಲ್ಲಿ ಎತ್ತುಗಳ ಮೈತೊಳೆಯಲು ಹೋದ ಸಂದರ್ಭದಲ್ಲಿ ಶಶಿಧರ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ….
ವಿಧಿಯಾಟಕ್ಕೆ ಹೊಸ ಟ್ರಾಕ್ಟರ್ ಬಲಿ ಪಡೆಯಿತೇ ಯುವ ರೈತನನ್ನು : ಹೊಸಕೊಪ್ಪದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವು: ವಿಧಿಯೇ ನೀನೆಷ್ಟು ಕ್ರೂರಿ
ಹೊಸ ಟ್ರಾಕ್ಟರ್ ನಲ್ಲಿ ಹೋಗುವಾಗ ವಿಧಿಯಾಟಕ್ಕೆ ಬಲಿಯಾಗಿ ಹೊಸಕೊಪ್ಪ ಗ್ರಾಮದ ಬಳಿ ಟ್ಯಾಕ್ಟರ್ ಪಲ್ಟಿಯಾಗಿ ಗುಂಡಿಗೆ ಬಿದ್ದಿದ್ದು ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಎನ್ ಟಿ ರಸ್ತೆಯಿಂದ ಹೊಸಕೊಪ್ಪದ ಕೆರೆ ಏರಿಗೆ ಬರುವಾಗ ಎದುರುಗಡೆ ಬಂದ ವಾಹನವನ್ನ ತಪ್ಪಿಸಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್ ನ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ್(30) ಎಂಬುವವರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಶಶಿನಾಯ್ಕ್ ನ ಮೈ ಮೇಲೆ ಟ್ರ್ಯಾಕ್ಟರ್…
ಸಾಗರದ ಗುಡ್ಡೆಕೌತಿ ಬಳಿ ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವತಿ ಸಾವು.!! ಇದು ಆತ್ಮಹತ್ಯೆಯೋ ?ಅಪಘಾತವೋ?
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗುಡ್ಡೆಕೌತಿ ಬಳಿ ಮಧ್ಯಾಹ್ನ 12:30 ರ ವೇಳೆಗೆ ಮೈಸೂರು- ತಾಳಗುಪ್ಪ ರೈಲಿಗೆ ಅಂದಾಜು 18 ವರ್ಷದ ಯುವತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನ ಸ್ಥಳದಲ್ಲಿ ರೈಲ್ವೆ ಇಲಾಖೆಯ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾಗರ ಗ್ರಾಮಾಂತರ ಪೊಲೀಸರು ಧಾವಿಸಿದ್ದಾರೆ. ಇನ್ನೂ ಯುವತಿಯ ಬಗ್ಗೆ ಮಾಹಿತಿ ತಿಳಿದಿಲ್ಲ ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬ ಪ್ರಶ್ನೆಗೆ ತನಿಖೆಯಿಂದ ಉತ್ತರ ದೊರೆಯಬೇಕಾಗಿದೆ. ಮೈಸೂರು to ತಾಳಗುಪ್ಪ ಗಾಡಿ ಸಂಖ್ಯೆ 16206 ರೈಲು Runover…
ತೀರ್ಥಹಳ್ಳಿಯಲ್ಲಿ ಗೋರಕ್ಷಕರ ಮೇಲೆ ವಾಹನಹತ್ತಿಸಿ ಹತ್ಯೆಗೆ ಯತ್ನಿಸಿದ್ದ ಆರೋಪಿಗಳಾದ ಅಪ್ರೋಜ್ ಮತ್ತು ಇರ್ಫಾನ್ ಬಂಧನ
ತೀರ್ಥಹಳ್ಳಿ : ಗೋರಕ್ಷಣೆ ಮಾಡಲು ತೆರಳಿದ್ದ ಇಬ್ಬರು ಯುವಕರ ಮೇಲೆ ವಾಹನ ಹತ್ತಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐದು ದಿನಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಸಮೀಪ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಲು ಇಬ್ಬರು ಯುವಕರು ಬೈಕಿನಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ಅಕ್ರಮ ಗೋಸಾಗಾಟಗಾರರು ಯುವಕರ ಮೇಲೆ ವಾಹನ ಹತ್ತಿಸಿ ಅವರನ್ನು ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಕುರಿತಾಗಿ ಜಿಲ್ಲೆಯಾದ್ಯಂತ ಹಿಂದೂ ಪರ ಸಂಘಟನೆಗಳು ತೀವ್ರ…
ಸಾಗರ ಬಳಿ ಭೀಕರ ಅಪಘಾತ : ಬೈಕ್ ಸವಾರ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ
ಸಾಗರ: ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಜೆ ಸುಮಾರಿಗೆ ದ್ವಿಚಕ್ರವಾಹನ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ಸಂಜೆ ಸಾಗರ ತಾಲೂಕಿನ ತಾಳಗುಪ್ಪದ ನಾಯರ್ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೋರ್ವ ವ್ಯಕ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಮೂಲದ…
ಸಾಗರದ ಹುಲಿದೇವರಬನದ ಎಂಪಿಎಂ ಅರಣ್ಯ ಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ : ಆಟವಾಡುತ್ತಿದ್ದ ಬಾಲಕಿ ಸಾವು
ಸಾಗರ : ಇಂದು ಸಂಜೆ ನಡೆದ ಅವಘಡದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮರದ ದಿಮ್ಮಿ ಹರಿದು ಸಾವನ್ನಪ್ಪಿರುವ ಘಟನೆ ಸಾಗರದ ಹುಲಿದೇವರ ಬನದಲ್ಲಿರುವ MPM ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇಂದು ಸಂಜೆ ಸುಮಾರು 4-30ರ ಸಮಯದಲ್ಲಿ ಮರಗಳನ್ನ ಕಡಿದು ಒಂದರ ಮೇಲೊಂದು ಮರದ ದಿಮ್ಮಿಗಳನ್ನ ಸಿಪ್ಪೆ ಸುಲಿದು ಜೋಡಿಸಿ ಇಡಲಾಗಿತ್ತು. ಮರದ ದಿಮ್ಮಿಯ ಕೆಳಗೆ 6 ವರ್ಷದ ಶ್ರಾವಣಿ ಎಂಬ ಹೆಣ್ಣು ಮಗು ಆಡುತ್ತಿದ್ದ ವೇಳೆ ಜೋಡಿಸಿದ ಮರದ ದಿಮ್ಮಿ ಚದುರಿಹೋಗಿದ್ದು ಮಗುವಿನ ಮೇಲೆ…
ಮನೆ ಕಳ್ಳರ ಹೆಡೆಮುರಿ ಕಟ್ಟಿದ ಮಾಳೂರು ಪೊಲೀಸರು ! ಐವರು ಅರೆಸ್ಟ್ !
ತೀರ್ಥಹಳ್ಳಿ : ತಾಲೂಕಿನ ಹಣಗೆರೆ ಕಟ್ಟೆಯ ಭೂತಪ್ಪ ಚೌಡಮ್ಮ ಸೌಯದ್ ಸೌದತ್ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ 2 ತಿಂಗಳ ಹಿಂದೆ ನಡೆದಿದ್ದ ಮನೆ ಕನ್ನತನ ಪ್ರಕರಣವನ್ನ ಪೊಲೀಸರು ಬೇಧಿಸಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಹಣಗೆರೆ ಕಟ್ಟೆಯ ಭೂತಪ್ಪ ಚೌಡಮ್ಮ ಸೌಯದ್ ಸೌದತ್ ದೇವಸ್ಥಾನದಲ್ಲಿ ಡಿ ದರ್ಜೆ ನೌಕರರಾದ ಸೀನಪ್ಪ ಎಂಬುವರು ಪುರದಾಳಿಗೆ ಹೋದಾಗ ಒಟ್ಟು 250 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಹಾಗೂ 2100 ನಗದು ಕಳವಾಗಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲು…
ಹೊಸಮನೆ ಪೊಲೀಸ್ ಠಾಣೆಯ ಪೇದೆಯ ವಿರುದ್ದ ಮಹಿಳೆಯಿಂದ ದೂರು ದಾಖಲು :
ಹೊಸಮನೆ ಪೊಲೀಸ್ ಠಾಣೆಯ ಪೇದೆಯೋರ್ವನ ವಿರುದ್ಧ ಮಹಿಳೆಯೋರ್ವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 10 ವರ್ಷದಿಂದ ನನ್ನೊಂದಿಗೆ ಮದುವೆ ಇಲ್ಲದೆ ಸಂಸಾರ ನಡೆಸಿ ಈಗ ಮತ್ತೊಂದು ಮಹಿಳೆಯನ್ನ ಮದುವೆಯಾಗುವುದಾಗಿ ಎಂಗೇಜ್ ಮೆಂಟ್ ಮಾಡಿಕೊಂಡು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್ ದಾಖಲಿಸಿದ್ದಾರೆ. ಹೊಸಮನೆ ಠಾಣೆಯ ಕೆಲಸ ಮಾಡುವ ಮಕ್ಸದ್ ಖಾನ್ ವಿರುದ್ಧ ಜಯಶ್ರೀ ವೃತ್ತದ ಮೊದಲನೇ ತಿರುವಿನ ನಿವಾಸಿ ಆಯೇಷಾ ಕೌಸರ್ ಎಂಬ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಬ್ದುಲ್…