Headlines

ರಿಪ್ಪನ್‌ಪೇಟೆ : ಅಕ್ರಮ ಜಾನುವಾರು ಸಾಗಾಟ : ಮೂವರ ಬಂಧನ

ರಿಪ್ಪನ್‌ಪೇಟೆ : ಅಕ್ರಮವಾಗಿ ಜಾನುವಾರು ಗಳನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ  ಜಯಕರ್ನಾಟಕ ಸಂಘಟನೆ ಹಾಗೂ ಹಿಂದೂಪರ ಸಂಘಟನೆಗಳು ಎರಡು ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 9 ಜಾನುವಾರುಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹೊಸನಗರ ತಾಲೂಕಿನ ನಿವಣೆ ಗ್ರಾಮದಲ್ಲಿ ನಡೆದಿದೆ.

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಮುಖ ಆರೋಪಿಗಳಾದ ಕಲ್ಲುಕೊಪ್ಪ ಗ್ರಾಮದ ಕೃಷ್ಣಮೂರ್ತಿ ಮತ್ತು ಎಣ್ಣೆನೋಡ್ಲು ಗ್ರಾಮದ ಮಹಮ್ಮದ್ ಇರ್ಫಾನ್ ಮತ್ತು ಮಹಮ್ಮದ್ ವಸೀಮ್ ನನ್ನು ಬಂಧಿಸಿ 9  ಜಾನುವಾರುಗಳನ್ನು ರಕ್ಷಿಸಲಾಗಿದೆ.


ಹುಂಚಾ ಕಡೆಯಿಂದ ಎರಡು ಗೂಡ್ಸ್ ಆಟೋ (KA -15-A 4206 ಮತ್ತು KA-27-C 1446)ಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸೊನಲೆ ಮಾರ್ಗವಾಗಿ ಸಾಗಟ ಮಾಡುವಾಗ ನಿವಣೆ ಬಳಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ಹಿಂದುಪರ ಸಂಘಟನೆಗಳು ವಾಹನ ತಡೆದು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.


ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು 9 ಜಾನುವಾರುಗಳನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.9 ಜಾನುವಾರುಗಳನ್ನು ಶಿವಮೊಗ್ಗದ ಗೋಶಾಲೆಗೆ ಕಳುಹಿಸಿಕೊಡಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ :

ಹಲವಾರು ದಿನಗಳಿಂದ ಹುಂಚಾ ಭಾಗದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಗೋವುಗಳು ಕಣ್ಮರೆಯಾಗುತಿದ್ದ ಹಿನ್ನಲೆಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕ್ ಅಧ್ಯಕ್ಷರಾದ ಚಂದನ್ ಮತ್ತು ಅವರ ತಂಡ ಅಕ್ರಮ ಗೋಸಾಗಾಟದ ಜಾಡು ಪತ್ತೆ ಹಚ್ಚಬೇಕೆಂದು ಹಗಲುರಾತ್ರಿ ಕಾಯುತ್ತಿದ್ದರು ಇಂದು ಬೆಳಿಗ್ಗೆ ಎರಡು ಆಟೋಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು  ಸಾಗಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದು ವಾಹನವನ್ನು ಅಡ್ಡಗಟ್ಟಿ 112 ಗೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜಾನುವಾರುಗಳನ್ನು ರಕ್ಷಿಸಿ ಮೂವರು ಆರೋಪಿಗಳನ್ನು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.

ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಬಜರಂಗದಳದ ಅಧ್ಯಕ್ಷರಾದ ದೇವರಾಜ್ ಕೆರೆಹಳ್ಳಿ ಜಯ ಕರ್ನಾಟಕ ಸಂಘಟನೆಯ ಸಿರಿ ಯಲ್ಲದಕೋಣೆ ,ಸುನೀಲ್ ಆನೆಗದ್ದೆ ,ಗಿರೀಶ್ ವಾಲೆಮನೆ,ಪ್ರವೀಣ್ ಶೆಟ್ಟಿ ಹಿಂದೂಪರ ಸಂಘಟನೆಯ ವಿನಾಯಕ್ ಶೆಟ್ಟಿ,ಅರ್ಜುನ್ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *