Headlines

ಯಾವುದೇ ಕಾರಣಕ್ಕೂ ಮುಸ್ಲಿಂ ಮತ ಕೇಳಲ್ಲ – ಕೆ ಎಸ್ ಈಶ್ವರಪ್ಪ

ಶಿವಮೊಗ್ಗ : ನಾನು ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಮುಸ್ಲೀಂ ಜನರ ಬಳಿ ಮತ ಕೇಳುವುದಿಲ್ಲವೆಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಮುಸ್ಲೀಂ ಮತಗಳ ಮೇಲೆ ಬಿಜೆಪಿ ಅವಲಂಬಿತವಾಗಿಲ್ಲ. ನಾನಂತು ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಮುಸ್ಲೀಂ ಜನರ  ಮತವನ್ನ ಕೇಳೊಲ್ಲ. 60 ಬೂತ್ ಗಳಲ್ಲಿ ಮುಸ್ಲೀಂ ಮತಗಳು ಬಿದ್ದಿವೆ. ಆದರೆ ವಿರೋಧ ಪಕ್ಷಗಳು ಮುಸ್ಲೀಂ ಮತಗಳ ಮೇಲೆ ಕಣ್ಣಿಟ್ಟು ಅವರನ್ನ ಓಲೈಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ನ್ನ‌ ಬೈದರೆ ಸ್ವರ್ಗಕ್ಕೆ ಹೋಗ್ತೀವಿ ಅಂತ ತಿಳಿದುಕೊಂಡಿದ್ದಾರೆ. ಹಾಗೆ ಸ್ವರ್ಗಕ್ಕೆ ಹೋಗಲಿ ಎಂದರು

ನಂತರ ಮಹಾರಾಷ್ಟ್ರ ವಿಷಯದಲ್ಲಿ ನಿಮ್ಮ ಶಾಸಕರನ್ನ ಶಿಸ್ತುಬದ್ಧವಾಗಿ ಇಟ್ಟುಕೊಂಡರೆ ನಿಮ್ಮನ ಬಿಟ್ಟು ಯಾಕೆ ಹೋಗ್ತಾರೆ? ಮಹಾರಾಷ್ಟ್ರದಲ್ಲಿ ಈ ಮೊದಲು ಶಾಸಕರು ಸಚಿವರ ಕೈಗೆ ಸಿಎಂ ಸಿಗ್ತಾ ಇರಲಿಲ್ಲವೆಂಬ ಆರೋಪವಿತ್ತು. ಈಗ ಅದನ್ನು ಸರಿಪಡಿಸಿಕೊಳ್ತೀವಿ ಎಂದು ಅವರೇ ಒಪ್ಪಿಕೊಂಡಿದ್ದಾರೆ ಅಂದರೆ ಮೊದಲು ತಪ್ಪು ಮಾಡಿದ್ದಾರೆ ಎಂದು ಮಹಾ ಸರ್ಕಾರ ಒಪ್ಪಿಕೊಂಡಂತೆ ಎಂದರು.

ಮುಖ್ಯಮಂತ್ರಿ ಸ್ಥಾನ ಇರೋದು ಒಂದೇ ಅದು ಬಿಜೆಪಿಗೆ  ಮೀಸಲು ಎಂದು ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಬಿಜೆಪಿಯಲ್ಲಿ ಮೊದಲು 4 ನೇ ಜನ ಇದ್ವಿ, 4 ರಿಂದ 40 ರಿಂದ 80 ಆಗಿ ಈಗ ಅಧಿಕಾರಕ್ಕೆ ಬಂದಿದ್ದೇವೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಬೇಕು. ಆದರೆ ಇಲ್ಲಿ ವಿಪಕ್ಷಗಳು ಇಲ್ಲವೆಂದರೆ ನಾವೇನು ಮಾಡೋಣ. ಕೆಲಸ ಮಾಡದೆ ಕೇವಲ ಆರ್ ಎಸ್ ಎಸ್ ಗೆ ಬೈದುಕೊಂಡು ಓಡಾಡುತ್ತಿದ್ದಾರೆ ಎಂದು ದೂರಿದರು.

ಆರ್ ಎಸ್ ಎಸ್ ಗೆ ಕಮಿಷನ್ ಹೋಗ್ತಾ‌ ಇದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯನವರ ದಾರಿಯಲ್ಲಿ ಕುಮಾರಸ್ವಾಮಿ  ಹೋಗಲು ಮುಂದಾಗಿದ್ದಾರೆ ಎಂದರು.

Leave a Reply

Your email address will not be published. Required fields are marked *