ಭದ್ರಾವತಿಯ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ದುರ್ಘನೆಯೊಂದು ನಡೆದಿದೆ.
ಭದ್ರಾವತಿ ನಗರಸಭೆ ವತಿಯಿಂದ ಕಾರ್ಮಿಕರು ಹಾಗು ಸಿಬ್ಬಂದಿಯವರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಡುವ ವೇಳೆ ದಿನೇಶ್‌ರಾವ್ (38) ಎಂಬುವವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿಯೇ ಇದ್ದ ಆರೋಗ್ಯ ಸಿಬ್ಬಂದಿಯಿಂದ ದಿನೇಶ್ ತಪಾಸಣೆ ನಡೆಸಲಾಗಿದ್ದರೂ, ಕುಸಿದು ಬಿದ್ದ ತಕ್ಷಣವೇ ದಿನೇಶ್ ಮೃತಪಟ್ಟ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿಯವರು ಸ್ಪಷ್ಟಪಡಿಸಿದ್ದಾರೆ.
ನಂತರ ಮೃತದೇಹವನ್ನು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.