ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಗ್ಗಳಿಕೆ ಪಡೆದುಕೊಂಡಿರುವ ರಿಪ್ಪನ್ ಪೇಟೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ 108 ಆಂಬ್ಯುಲೆನ್ಸ್ ಇಲ್ಲದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳು, ಮಹಿಳೆಯರು, ಅನಾರೋಗ್ಯವನ್ನು ಹೊಂದಿದ ಹಿರಿಯ ನಾಗರಿಕರುಗಳು ಹೈರಾಣಾಗಿ ಹೋಗಿದ್ದರು. ಹಲವಾರು ಬಾರಿ ಗ್ರಾಮಸ್ಥರು ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ 108 ವಾಹನ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದ್ದರು ಸಹ ವಾಹನದ ಸೌಲಭ್ಯವನ್ನು ನೀಡಿರಲಿಲ್ಲ.
ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಫಲ ಶ್ರುತಿ :
ಕಳೆದ ಮೂರು ದಿನಗಳ ಹಿಂದೆ ರಿಪ್ಪನ್ ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ನಡೆದ ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಬೈಕಿನಲ್ಲಿ ಸವಾರಿ ಮಾಡುತ್ತಿದ್ದ ತಂದೆ ಅಪಘಾತದಲ್ಲಿ ಮೃತಪಟ್ಟು ಮಗ ಹಾಗೂ ಇನ್ನೊಂದು ಬೈಕಿನ ಸವಾರ ತೀವ್ರತರ ಗಾಯದಿಂದ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾರ್ವಜನಿಕರು ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆಯನ್ನು ನೀಡಿ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು 108 ವಾಹನ ಇಲ್ಲದ ಕಾರಣ ಗಾಯಾಳುಗಳು ಸುಮಾರು ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿಯೇ ನರಳಾಡಿದ ಹೃದಯವಿದ್ರಾವಕ ಘಟನೆ ಕುರಿತು ಪೊಸ್ಟ್ ಮ್ಯಾನ್ ನ್ಯೂಸ್ ಸವಿಸ್ತಾರವಾಗಿ ವರದಿ ಮಾಡಿತ್ತು.
ಕೊನೆಗೂ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಬಂದ 108 ವಾಹನ:
ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಹಿನ್ನೆಲೆಯಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ 108 ವಾಹನದ ಸೌಲಭ್ಯವನ್ನು ಕಲ್ಪಿಸಲಾಗಿದೆ.