ಕ್ರೈಂ ಸುದ್ದಿ:
ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು
ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ನೆಲವಾಗಿಲು ಬಳಿ ಸಂಭವಿಸಿದೆ. ಬೆಳಿಗ್ಗೆ ಶಿಕಾರಿಪುರದಿಂದ ಮೂವರು ಯುವಕರು ನೆಲವಾಗಿಲು ಕಡೆ ತೆರಳಿದ್ದರು.ರಾತ್ರಿ ಅಲ್ಲಿಂದ ಹಿಂದಿರುಗುವ ವೇಳೆ ಎದುರಿನಿಂದ ಬಂದ ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಪಾರಿವಾಳ ಶಿವರಾಮಣ್ಣ ಎಂಬುವರ ಮಗ ಕೊಟ್ರೇಶ್(25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ ಇನ್ನಿಬ್ಬರು ಮತ್ತು ಎದುರಿನಿಂದ ಬಂದ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…
ಕುಂಸಿ ಸಮೀಪದ ಬಾಳೆಕೊಪ್ಪದಲ್ಲಿ ಭೀಕರ ಅಪಘಾತ : ಇಬ್ಬರು ಬೈಕ್ ಸವಾರರು ಸಾವು
ಬೊಲೆರೋ ಪಿಕಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಸಂಜೆ 7 ಗಂಟೆಗೆ ನಡೆದಿದೆ. ಸಾಗರದ ಮೂಲಕ ಹಾರನಹಳ್ಳಿ – ಸವಳಂಗ – ನ್ಯಾಮತಿ – ಹೊನ್ನಾಳಿ ಮೂಲಕ ರಾಣೇಬೆನ್ನೂರಿಗೆ ಮೀನು ತೆಗೆದುಕೊಂಡು ಹೋಗುತ್ತಿದ್ದ ಬೊಲೆರೋ ಪಿಕಪ್ ವಾಹನ ಮತ್ತು ಬಾಳೆಕೊಪ್ಪಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಉಂಟಾಗಿದ್ದು ಬೈಕ್ ಸವಾರರು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತಪಟ್ಟ ಯುವಕರನ್ನು ಬಾಳೆಕೊಪ್ಪದ ಗಿರೀಶ್ ( 23),…
ಅಕ್ರಮ ಗೋಮಾಂಸ ಅಂಗಡಿಯ ಮೇಲೆ ದಾಳಿ : ಓರ್ವನ ಬಂಧನ
ಅಕ್ರಮ ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಮಾಳೂರು ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಅಂಗಡಿ ನಡೆಸುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ತೀರ್ಥಹಳ್ಳಿಯ ಮಂಡಗದ್ದೇ ಸಮೀಪದ ಲಿಂಗಾಪುರ ಗ್ರಾಮದ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ವಧಿಸಲು ಸಿದ್ದವಾಗಿದ್ದ ಗೋವನ್ನು ನವೀನ್ ಕುಮಾರ್ ಮಠಪತಿ ನೇತ್ರತ್ವದಲ್ಲಿ ದಾಳಿ ನಡೆಸಿ ಹಸುವನ್ನು ರಕ್ಷಿಸಿದ್ದಾರೆ. ಗೋ ಮಾಂಸದ ಜೊತೆಗೆ ಜೀವಂತ ಹಸುವನ್ನು ರಕ್ಷಿದ ಪೊಲೀಸರು ಆರೋಪಿ ಇಜಾಜ್ ಪಾಶಾ ಎಂಬಾತನನ್ನು ಬಂಧಿಸಿದ್ದಾರೆ. ಈ ದಾಳಿಯಲ್ಲಿ ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ…
ಶಿವಮೊಗ್ಗದ ರಾಜಾಕಾಲುವೆಯಲ್ಲಿ ತೇಲಿ ಬಂತು ನವಜಾತ ಶಿಶುವಿನ ಮೃತದೇಹ :
ಶಿವಮೊಗ್ಗ ನಗರದಲ್ಲಿ ನಿನ್ನೆಯ ದಿನ ಸುರಿದ ಭಾರೀ ಮಳೆ ಸುರಿದಿತ್ತು.ಇಂದು ಆರ್ ಎಂಎಲ್ ನಗರದ ರಾಜಕಾಲುವೆಯಲ್ಲಿ ಒಂದು ನವಜಾತ ಶಿಶುವೊಂದರ ಮೃತದೇಹ ತೇಲಿಬಂದ ಘಟನೆ ನಡೆದಿದೆ. ಸ್ಥಳೀಯವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಕಸದ ರಾಶಿ ನಡುವೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಸುಮಾರು ಒಂದು ತಿಂಗಳ ನವಜಾತ ಶಿಶು ಇದಾಗಿದೆ. ನೆನ್ನೆಯ ದಿನ ಮಗುವೊಂದು ತೇಲಿ ಹೋಗಿರುವ ಬಗ್ಗೆ ಆರ್ ಎಂಎಲ್ ನಗರದ ಮಹಿಳೆಯೊಬ್ಬರು ಎಸ್ ಡಿಪಿಐ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಆ ಹಿನ್ನಲೆಯಲ್ಲಿ …
ಬೆಂಗಳೂರಿನಲ್ಲಿ ಪಾದಾಚಾರಿಗಳ ಮೇಲೆ ಹರಿದ ಕಾರು : ರಿಪ್ಪನ್‌ಪೇಟೆ ಮೂಲದ ಯುವಕ ಸಾವು
ಪಾದಾಚಾರಿಗಳ ಮೇಲೆ ಕಾರು ಹರಿದು ಹೋಗಿ ರಿಪ್ಪನ್‌ಪೇಟೆ ಮೂಲದ ವ್ಯಕ್ತಿಯೊಬ್ಬ ದುರ್ಮರಣ ಹೊಂದಿದ ಘಟನೆ ಬೆಂಗಳೂರು ನಗರದ ಕತ್ರಿಗುಪ್ಪೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗಳ ಮೇಲೆ ಹರಿದು ಹೋಗಿದ್ದಲ್ಲದೆ, ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮದ ಸುರೇಶ್ ಯಾನೆ ರುದ್ರಪ್ಪ (28) ಎಂಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಚಿನ್, ಸಿವರಾಜು, ಶೈಲೇಂದ್ರ ಅವರಿಗೆ…
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರಿಪ್ಪನ್‌ಪೇಟೆಯ ಯುವಕ ಸಚಿನ್ :
ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣು ಬಿಗಿದುಕೊಂಡಿರುವ ಘಟನೆ ರಿಪ್ಪನ್‌ಪೇಟೆಯ ನೆಹರು ಬಡಾವಣೆಯಲ್ಲಿ ನಡೆದಿದೆ. ರಿಪ್ಪನ್ ಪೇಟೆ ಗವಟೂರು ಗ್ರಾಮದ ನೆಹರು ಬಡಾವಣೆಯ ನಿವಾಸಿ ದಿ|| ಶ್ರೀನಿವಾಸ್ ರವರ ಪುತ್ರ ಯುವಕ ಸಚಿನ್(25) ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಾತ್ರಿ ಮನೆಯಲ್ಲಿ ತಾಯಿಯೊಂದಿಗೆ ಊಟ ಮುಗಿಸಿಕೊಂಡು ಪಕ್ಕದ ರೂಮಿನಲ್ಲಿ ಮಲಗಿದ್ದ ಸಚಿನ್ ಬೆಳಿಗ್ಗೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತನ ಮರಣೋತ್ತರ ಪರೀಕ್ಷೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ…
ಭಾರಿ ಮಳೆಗೆ ತೀರ್ಥಹಳ್ಳಿಯಲ್ಲಿ ಗದ್ದೆಗೆ ಹೋಗಿದ್ದ ವ್ಯಕ್ತಿ ಸಾವು
ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟಕ್ಕೆ ತೀರ್ಥಹಳ್ಳಿಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಮೃತಪಟ್ಟ ದುರ್ದೈವಿಯನ್ನು ತೂದೂರು ಗ್ರಾಮದ ಶಂಕರ್ ಬಿನ್ ಲಿಂಗ ನಾಯ್ಕ ಎಂದು ಗುರುತಿಸಲಾಗಿದೆ ತೀರ್ಥಹಳ್ಳಿಯ ಮೇಲಿನ ತೂದೂರು ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಶಂಕರ್ ಬಿನ್ ಲಿಂಗಾನಾಯ್ಕ್ ಗದ್ದೆಯ ಹೊಂಡದಲ್ಲಿ ಬಿದ್ದು, ಮೃತಪಟ್ಟ ದುರ್ದೈವಿಯಾಗಿದ್ದಾನೆ. ನಿನ್ನ ರಾತ್ರಿ ಗದ್ದೆಗೆ ತೆರಳಿದ್ದ ವೇಳೆ, ಕಾಲು ಜಾರಿ ಹೊಂಡಕ್ಕೆ ಶಂಕರ್ ಬಿದ್ದಿದ್ದರು. ಶಂಕರ್ ಬೆಳಿಗ್ಗೆ ಬರದಿದ್ದನ್ನು ಮನೆಯವರು ಗಮನಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ತೀರ್ಥಹಳ್ಳಿ…
ಕಾರ್ ಚಾಲಕನ ಎಡವಟ್ಟು, ಚರಂಡಿಗೆ ಇಳಿದ ಖಾಸಗಿ ಬಸ್ : ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ರಿಪ್ಪನ್ ಪೇಟೆ : ಕಾರ್ ಚಾಲಕನ ಎಡವಟ್ಟಿನಿಂದ ಸಂಭವಿಸಲಿದ್ದ ಭಾರಿ ಅಪಘಾತವೊಂದು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ರಿಪ್ಪನ್ ಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ಗುರುವಾರದ ಸೂಡೂರು ನಡೆದಿದೆ. ಎದುರಿನಿಂದ ಬಂದ ಕಾರು ಚಾಲಕನೋರ್ವ ತನ್ನ ಕಾರನ್ನು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ, ಅಪಘಾತವನ್ನು ತಪ್ಪಿಸಲು ಖಾಸಗಿ ಬಸ್ಸನ್ನು ರಸ್ತೆ ಬದಿಗೆ…
ರಿಪ್ಪನ್‌ಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಟ್ರಾಕ್ಟರ್ ಕಳ್ಳತನದ ಇಬ್ಬರು ಆರೋಪಿಗಳ ಬಂಧನ
ರಿಪ್ಪನ್‌ಪೇಟೆ :ಟ್ರ್ಯಾಕ್ಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪ್ಪನ್ ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿ ಇಬ್ಬರು ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಅರೋಪಿಗಳು ಆನಂದಪುರದ ದಾಸನಕೊಪ್ಪ ವಾಸಿ ಸಂದೀಪ (30) ಹಾಗೂ ಟ್ರ್ಯಾಕ್ಟರ್ ಚಾಲಕ ಹಾವೇರಿ ಜಿಲ್ಲೆಯ ಗುಡ್ಡಪ್ಪ (28) ಎನ್ನಲಾಗಿದೆ. ಶನಿವಾರದಂದು ಸಾಗರ ರಸ್ತೆಯ ವಡಗೆರೆಯ ವೆಂಕಪ್ಪ ಶೆಟ್ಟಿ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ವಡಗೆರೆ –ಚಂದಾಳದಿಂಬದ ವಾಸಿ ಪ್ರತಾಪ್‌ಸಿಂಗ್ ಮಂಗಳವಾರ…
ರಿಪ್ಪನ್ ಪೇಟೆ ಸಮೀಪದಲ್ಲಿ ಟಿಪ್ಪರ್ ಲಾರಿ ಅಪಘಾತ : ತಪ್ಪಿದ ಭಾರೀ ಅನಾಹುತ
ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಅಪಘಾತವಾದ ಘಟನೆ ರಿಪ್ಪನ್ ಪೇಟೆ ಸಮೀಪದ ಶೆಟ್ಟಿಬೀಡು ಗ್ರಾಮದಲ್ಲಿ ನಡೆದಿದೆ. ಹೊಸನಗರದಿಂದ ರಿಪ್ಪನ್ ಪೇಟೆಗೆ ತೆರಳುತ್ತಿದ್ದ KA55 3809 ಟಿಪ್ಪರ್ ಲಾರಿಯು ಶೆಟ್ಟಿಬೀಡು ಸಮೀಪದಲ್ಲಿ ಬ್ರೇಕ್ ಜಾಮ್ ಆಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ನ ಮುಂಭಾಗ ನಜ್ಜುಗುಜ್ಜಾಗಿದೆ.ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಶೆಟ್ಟಿಬೀಡು ಕ್ರಾಸ್ ನಲ್ಲಿ ಬ್ರೇಕ್ ಜಾಮ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯು…