ಶಿವಮೊಗ್ಗ : ಜಾಗದ ವಿಚಾರದಲ್ಲಿ ಗುಂಪು ಘರ್ಷಣೆ – ಉದ್ವಿಗ್ನ ವಾತವಾರಣ : ಒಂಬತ್ತು ಮಂದಿ ಪೊಲೀಸ್ ವಶಕ್ಕೆ|Group conflict

 ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಶಿವಮೊಗ್ಗ ತಾಲೂಕಿನ ಹಾರೊ ಬೆನವಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

 ಈ ಗ್ರಾಮದಲ್ಲಿ ಇರುವ ಜಾಗದ ವಿಚಾರದಲ್ಲಿ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ.

ಗ್ರಾಮಸ್ಥರು ಯುವಕರಿಗೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಲು ಹೋದಾಗ ಮಾತಿಗೆ ಮಾತು ಬೆಳೆದು ಘರ್ಷಣೆ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಹೊಳೆ ಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಗುಂಪು ಘರ್ಷಣೆಯನ್ನು ತಪ್ಪಿಸಿದ್ದಾರೆ.


 ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್ ಭೇಟಿ‌ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಡಿಎಆರ್ ಹಾಗೂ ಹೊಳೆಹೊನ್ನೂರು ಪೊಲೀಸರು ಮೊಕ್ಕಾಂ ಹೂಡಿದ್ದು, ಸದ್ಯ ಪರಿಸ್ಥಿತಿ ಶಾಂತಯುತವಾಗಿದೆ.

ಘಟನೆಯ ಹಿನ್ನಲೆ: 



ಹಾರೊ ಬೆನವಳ್ಳಿ ಗ್ರಾಮದ ಹಾಳೂರು ಎಂಬಲ್ಲಿ ಗ್ರಾಮದ ಪ್ರತಿಯೊಬ್ಬರಿಗೆ ಸೈಟ್ ನೀಡಲಾಗಿತ್ತು. ಕಾರ್ತಿಕ್ ಎಂಬುವರಿಗೆ ನೀಡಲಾಗಿದ್ದ ಜಾಗದಲ್ಲಿ ಫೈರೋಜ್ ಎಂಬುವರು ಅಡಿಕೆ ತಟ್ಟೆ ತಯಾರಿಕಾ ಘಟಕ ಮಾಡಿಕೊಂಡಿದ್ದರು. ಈ ವಿಚಾರವಾಗಿ ಕಾರ್ತಿಕ್ ತನ್ನ ಸೈಟ್​ನ್ನು ಬಿಟ್ಟು ಕೊಡುವಂತೆ ಫೈರೋಜ್​​ಗೆ ತಿಳಿಸಿದ್ದರು. ಆದರೆ ಫೈರೋಜ್ ತನ್ನ ಸಹೋದರ ಸಂಬಂಧಿಯನ್ನು ಕರೆಯಿಸಿ ಕಾರ್ತಿಕ್​​ಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ. 

ವಿಷಯ ತಿಳಿದ ಗ್ರಾಮಸ್ಥರು ಫೈರೋಜ್ ಬಳಿ ಹೋಗಿ ಮಾತುಕತೆ ನಡೆಸುವಾಗ ಗುಂಪು ಸೇರಿಕೊಂಡು ಗಲಾಟೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *