ಶಿವಮೊಗ್ಗ: ತಲೆ ಮೇಲೆ ಕಲ್ಲು ಎತ್ತಿಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಸಾದಿಕ್ ಕೊಲೆ!

ಶಿವಮೊಗ್ಗ: ನಗರದ ಕಲ್ಲೂರು ಮಂಡ್ಲಿಯ ಸಮೀಪ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಇಲಿಯಾಸ್ ನಗರದ ಸೈಯದ್ ಸಾದಿಕ್ (40) ಮೃತ ದುರ್ದೈವಿ. ಕಲ್ಲೂರು ಮಂಡ್ಲಿಯ ತೋಟದಲ್ಲಿ  ಕೊಲೆ ನಡೆದಿರುವ ಸಾಧ್ಯತೆಯಿದೆ. ಸಾದಿಕ್ ಅವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ಈ ವ್ಯವಹಾರಕ್ಕೆ ಸಂಬಂದಿಸಿದಂತೆಯೇ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ತುಂಗಾನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ತೆರಳಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.  

Read More

ಭಾರತ್ ಬಂದ್ ಗೆ ಶಿವಮೊಗ್ಗ ಸ್ಥಬ್ದವಾಗಲಿದೆ : ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ

ಶಿವಮೊಗ್ಗ : ಭಾರ‌ತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ, ಬಂದ್ ಯಶಸ್ವಿಗೊಳಿಸುವಲ್ಲಿ ಎಲ್ಲರೂ  ಸಹಕಾರ ನೀಡಬೇಕೆಂದು ಶಿವಮೊಗ್ಗದ ರೈತ  ಸಂಘದ ಅಧ್ಯಕ್ಷ  ಬಸವರಾಜಪ್ಪ  ತಿಳಿಸಿದರು. ಕೇಂದ್ರದ ಕೃಷಿ ಕಾಯ್ದೆಗಳನ್ನು ಮರಳಿ ಹಿಂಪಡೆಯುವಂತೆ  ಹಾಗೂ  ಸರ್ಕಾರಿ  ಕಂಪನಿಗಳನ್ನು  ಖಾಸಗೀಕರಣ ಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗವನ್ನು  ಸಹ ಬಂದ್ ಮಾಡಿ  ಬೆಂಬಲ  ಸೂಚಿಸಲಾಗುವುದು ಎಂದು ಗೌರವಾಧ್ಯಕ್ಷ ಹೆಚ್ ಬಸವರಾಜ್  ತಿಳಿಸಿದರು. ಕೇಂದ್ರ ಸರ್ಕಾರ ಕೃಷಿ ವಲಯವನ್ನೂ ಪರೋಕ್ಷವಾಗಿ ಖಾಸಗೀಕರಣ ಮಾಡಲು ಮುಂದಾಗಿದೆ ಎಲ್ಲರೂ  ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಈ …

Read More

ಕ್ಯಾತಿನಕೊಪ್ಪ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಶಿವಮೊಗ್ಗ: ಕಳೆದೊಂದು ವಾರದಿಂದ ಶಿವಮೊಗ್ಗ ತಾಲೂಕಿನ ಕ್ಯಾತಿನಕೊಪ್ಪದ ತೋಟ ಹಾಗೂ ಮನೆಗಳ ಬಳಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಗ್ರಾಮದ ಸಮೀಪದಲ್ಲಿರುವ ತೋಟದ ಮನೆಯಲ್ಲಿ ಮಂಜುನಾಥ್ ಎಂಬವರ ಕುಟುಂಬ ವಾಸವಿದೆ. ಕಳೆದ ನಾಲ್ಕೈದು ದಿನದ ಹಿಂದೆ ಮಂಜುನಾಥ್ ಅವರ ಸಾಕು ನಾಯಿಯನ್ನು ಚಿರತೆ ಬೇಟೆ ಆಡಿದ್ದನ್ನು ಗಮನಿಸಿದ್ದರು. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.  ಕಳೆದ ಐದು ದಿನದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮಂಜುನಾಥ್ ಅವರ ತೋಟದ ಮನೆ ಬಳಿ…

Read More

ಕ್ರೈಸ್ತ ಸಮುದಾಯದ ಮೇಲೆ ಅಪಪ್ರಚಾರ ಸಲ್ಲ : ಬಿ ರಾಜಶೇಖರ್

ಶಿವಮೊಗ್ಗ :  ಕ್ರೈಸ್ತ ಸಮುದಾಯವನ್ನ ನಿಯಂತ್ರಿಸಲು ಮತಾಂತರ ಕಾಯ್ದೆ ಜಾರಿಗೊಳಿಸಬೇಕೆಂಬ ಚರ್ಚೆ ಆಗುತ್ತಿದ್ದು ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ ಎಲ್ಲೂ ಮತಾಂತರ ಮಾಡುತ್ತಿಲ್ಲವೆಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸ್ಪಷ್ಟಪಡಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬಿ.ರಾಜಶೇಖರ್ ಮಾತನಾಡಿ, ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಮಾತನಾಡಿ, ಕ್ರೈಸ್ತ ಮಿಷನರಿಗಳಿಂದ ವ್ಯಾಪಕ ಮತಾಂತರಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಅತ್ಯಾಚಾರದ ಪ್ರಕರಣಗಳನ್ನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಸದನದಲ್ಲಿ ಮತಾಂತರ ಕಾಯ್ದೆ ಜಾರಿಗೆ…

Read More

ಈ ಬಾರಿ ಶಿವಮೊಗ್ಗದಲ್ಲಿ ವೈಭವದ ದಸರಾಕ್ಕೆ ಮಹಾನಗರ ಪಾಲಿಕೆ ನಿರ್ಧಾರ !

ಶಿವಮೊಗ್ಗ : ಈ ಬಾರಿ ಮೈಸೂರು ದಸರಾ ನೆಡಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿಯೂ ಅದ್ದೂರಿ ದಸರಾ ನಡೆಸಲು ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಸರ್ಕಾರ ಅನುದಾನ ನೀಡಿದರೆ 9 ದಿನವೂ ವೈಭವದ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದ್ದು ಒಂದು ವೇಳೆ ಅನುದಾನ ನೀಡದಿದ್ದರೆ 50 ಲಕ್ಷ ಪಾಲಿಕೆ ಬಜೆಟ್ ನಲ್ಲಿ ಆಚರಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.  ದಸರಾ ವಿಷಯದಲ್ಲಿ ಮೊದಲು ಮಾತನಾಡಿದ ಹೆಚ್ ಸಿ ಯೋಗೇಶ್ ದಸರಾಕ್ಕೆ ಈvಬಾರಿ ಅನುದಾನವೆಷ್ಟು ಎಂಬುದು ಘೋಷಣೆ ಆದರೆ…

Read More

ಆಚಾರ್ಯ ತುಳಸಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ: ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು

ಶಿವಮೊಗ್ಗ: ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳು ಸಂಭ್ರಮದಿಂದ ಸಿನೆಮಾ ಹಾಡುಗಳಿಗೆ ಭರ್ಜರಿ ಸ್ಟೆಪ್​ ಹಾಕಿ ಸಂಭ್ರಮಿಸಿದರು. ಕಳೆದ ವರ್ಷದಿಂದ ಕೊರೊನಾ ಮಹಾಮಾರಿಯಿಂದಾಗಿ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಂದ ದೂರ ಉಳಿದಿದ್ದರು. ಕೊರೊನಾ ಸ್ವಲ್ಪ ಮಟ್ಟಿಗೆ ನಿಯಂತ್ರಣಗೊಂಡ ಹಿನ್ನೆಲೆ, ಸರ್ಕಾರ ಶಾಲಾ – ಕಾಲೇಜುಗಳನ್ನು ಪ್ರಾರಂಭಿಸಿದೆ. ಹಾಗಾಗಿ ವಿದ್ಯಾರ್ಥಿಗಳು – ಕಾಲೇಜಿನವರು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಿನೆಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ….

Read More

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಸವಾರ ಸಾವು:

ಶಿವಮೊಗ್ಗ: ಹೊಳೆಹೊನ್ನೂರು ಸಮೀಪ ಆಗರದಳ್ಳಿ ಸಿದ್ದರ ಕಾಲೊನಿ ಬಳಿ ನಿನ್ನೆ ಸಂಜೆ ಬೈಕ್ ಒಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ‌ ಹೊಡೆದ ಪರಿಣಾಮ ಸವಾರ ಸಾವು ಕಂಡ ಘಟನೆ‌ವರದಿಯಾಗಿದೆ. ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ನಿವಾಸಿ ಪ್ರದೀಪ್ (33) ಮೃತ ದುರ್ದೃವಿ. ತನ್ನ ಸ್ನೇಹಿತನೊಂದಿಗೆ ಶಿವಮೊಗ್ಗಕ್ಕೆ ಬಂದು ಖಾಸಗಿ ಆಸ್ಪತ್ರಯಲ್ಲಿ ಚರ್ಮದ ಚಿಕಿತ್ಸೆ ಪಡೆದು ಚನ್ನಗಿರಿಗೆ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿದೆ. ಹಿಂಬಂದಿ ಸವಾರನಿಗೆ ಗಂಭೀರ ಗಾಯಗಾಳಾಗಿದ್ದು, ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕರ್ನಾಟಕ ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಇಬ್ಬರಿಗೆ ಅವಕಾಶ

ಶಿವಮೊಗ್ಗ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಶಿವಮೊಗ್ಗ ವಲಯದ ಮಿಥೇಶ್ ಕುಮಾರ್ ಹಾಗೂ 19 ವರ್ಷದೊಳಗಿನ ಮಹಿಳಾ ರಾಜ್ಯ ತಂಡಕ್ಕೆ ಶಿವಮೊಗ್ಗದ ನಿರ್ಮಿತ ಸಿ ಜೆ ಅವಕಾಶ ಪಡೆದಿದ್ದಾರೆ ಎಂದು ಕೆಎಸ್​ಸಿಎ ಶಿವಮೊಗ್ಗ ವಲಯದ ಸಂಚಾಲಕರಾದ ಡಿ ಎಸ್ ಅರುಣ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಡಿ ಎಸ್ ಅರುಣ್ ಶಿವಮೊಗ್ಗ ವಲಯಕ್ಕೆ ಇದೊಂದು ಹೆಮ್ಮೆಯ ವಿಷಯ. ಹಲವು ವರ್ಷಗಳಿಂದ ಇದ್ದ ಕೊರಗು ಈ ವರ್ಷ ನೀಗಿದೆ….

Read More

ಶಿವಮೊಗ್ಗ: ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಯಾಗ

ಶಿವಮೊಗ್ಗ : ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಚಾರ ಮಂಚ್ ಹಾಗೂ ಅರ್ಚಕರ ವೃಂದದಿಂದ ಪ್ರಧಾನಿ ಮೋದಿ ಅವರ 71 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಗಣಪತಿ ಯಾಗ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ, ಪ್ರಧಾನಿ ಮೋದಿ ಅವರು ಕೊರೋನ ಲಸಿಕೆ ಹಂಚಿಕೆಯನ್ನ ಗುರಿಯಾಗಿ ಇಟ್ಟುಕೊಂಡು ಮುಂದುವರಿದು ಇಂದು ಯಶಸ್ವಿಯಾಗಿ 80 ಕೋಟಿ ಜನರಿಗೆ ಲಸಿಕೆ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸೆ. 17 ರ ಅವರ ಹುಟ್ಟುಹಬ್ಬದ…

Read More

ಹಣಗೆರೆಕಟ್ಟೆ : ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರಿಂದಲೇ ವಾಹನ ತಪಾಸಣೆ

ತೀರ್ಥಹಳ್ಳಿ : ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನೀಡಲು ಬಂದ ಭಕ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಕ್ಷೇತ್ರದಲ್ಲಿ ನಡೆದಿದೆ. ಹಣಗೆರೆಗೆ ರಸ್ತೆಯಲ್ಲಿ ಗ್ರಾಮಸ್ಥರು ತಪಾಸಣೆ ಆರಂಭಿಸಿದ್ದಾರೆ. ಪ್ರತಿ ವಾಹನವನ್ನು ತಡೆದು ಪರಿಶೀಲಿಸುತ್ತಿದ್ದಾರೆ. ವಾಹನದಲ್ಲಿ ಅಡುಗೆ ವಸ್ತುಗಳು, ಕೋಳಿ, ಕುರಿ ಇದ್ದರೆ ಅವುಗಳನ್ನು ವಶಕ್ಕೆ ಪಡೆದು, ಭಕ್ತರನ್ನು ಮಾತ್ರ ದೇವಸ್ಥಾನಕ್ಕೆ ಬಿಡುತ್ತಿದ್ದಾರೆ. ದೇಗುಲಕ್ಕೆ ತೆರಳಿ ಹಿಂತಿರುಗಿದ ಬಳಿಕ…

Read More