Headlines

ಶಿವಮೊಗ್ಗ ಯುವ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ಪ್ರಯುಕ್ತ ಶ್ರಮದಾನ:

ಶಿವಮೊಗ್ಗ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ರವರ ಜನ್ಮದಿನಾಚರಣೆ , ಅಂಗವಾಗಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಇಂದು ಬೆಳಿಗ್ಗೆಯಿಂದ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಸುತ್ತಮುತ್ತಲಿನ ಲಕ್ಷ್ಮಿ ಟಾಕೀಸ್ ಪಕ್ಕದ ಚಾನಲ್ ಏರಿ ಮೇಲ್ಭಾಗ , ನಾಗಪ್ಪ ದೇವಸ್ಥಾನ ಮತ್ತು ಮಲೆ ಮಹದೇಶ್ವರ ದೇವಸ್ಥಾನದ ಮುಂಭಾಗ ಸ್ವಚ್ಛತಾ ಕಾರ್ಯ ಮಾಡುವ ಮುಖಾಂತರ ಶ್ರಮದಾನ ಕಾರ್ಯಕ್ರಮವನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಮಹಾನಗರ…

Read More

ವೇದಿಕೆಯ ಮೇಲೆ ಬಹಿರಂಗಗೊಂಡ ಕಿಮ್ಮನೆ ರತ್ನಾಕರ್ ಮತ್ತು ಆರ್‌ಎಂಎಂ ನಡುವಿನ ವೈಮನಸ್ಸು : ಸಭೆಯಿಂದ ಹೊರ ನಡೆದ ಕಿಮ್ಮನೆ :

ಶಿವಮೊಗ್ಗ : ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವೆ ಕಿತ್ತಾಟ ಮುಂದುವರೆದಿದ್ದು ಇಂದು ಸಹ ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಛೇರಿಯ ವೇದಿಕೆಯ ಮೇಲೆ ಬಹಿರಂಗವಾಗಿದೆ. ಇಂದು ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭಾಷಣ ಮಾಡಲು ಮುಂದಾಗಿದ್ದು ಭಾಷಣಕ್ಕೆ ಅಡ್ಡಿಪಡಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡಿರುವ ಆರ್ ಎಂ ಮಂಜುನಾಥ ಗೌಡ ಉಪಸ್ಥಿತರಿದ್ದು, ಅವರ ವಿರುದ್ಧ ಕಿಮ್ಮನೆ ರತ್ನಾಕರ್ ವಾಗ್ದಾಳಿ ಮುಂದುವರೆಸಿದ್ದಾರೆ. ನನಗೆ ಹಣ,…

Read More

ಸಿದ್ದುಗೆ ಹುಚ್ಚು ಹಿಡಿದಿದೆ, ಅದು ಯಾವಾಗ ಬಿಡುತ್ತೋ ಗೊತ್ತಿಲ್ಲ: ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ನವರಿಗೆ ಹುಚ್ಚು ಹಿಡಿದಿದೆ. ಅದು ಯಾವಾಗ ಬಿಡುತ್ತದೆ ಗೊತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್​ ಟೀಕೆ ಮಾಡಿದರೆ, ಭಾರತೀಯ ಸಂಸ್ಕೃತಿಯನ್ನೆ ಟೀಕೆ ಮಾಡಿದಂತೆ. ನೆಹರು ಮತ್ತು ಗಾಂಧೀಜಿಯವರು ಆರ್​ಎಸ್ಎಸ್​ ಬಗ್ಗೆ ಪ್ರೀತಿ ಹೊಂದಿದ್ದರು. ಗಾಂಧೀಜಿ, ನೆಹರು ಮುಂದೆ ಸಿದ್ದು ಯಾವ ಲೆಕ್ಕ? ಸಿದ್ದರಾಮಯ್ಯ ಟೀಕೆ ಮಾಡುವ ಮೂಲಕ ಹೀರೋ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು. ಉಪಚುನಾವಣೆ ಬಗ್ಗೆ ಮಾತನಾಡಿ, ಚುನಾವಣಾ ಆಯೋಗ ಎರಡು ಕ್ಷೇತ್ರಗಳ…

Read More

ಪ್ರಧಾನಿ ಕಚೇರಿಯಿಂದ ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ ರವರಿಗೆ ಆಹ್ವಾನ :

ಶಿವಮೊಗ್ಗ : ಸ್ವಚ್ಛ ಭಾರತ ಮಿಷನ್ ಹಾಗೂ ಅಮೃತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ನಾಳೆ ದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಲು ಮೇಯರ್ ಸುನಿತಾ ಅಣ್ಣಪ್ಪನವರಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದೆ. 2 ನೇ ಹಂತದ ಸ್ವಚ್ಛ ಭಾರತ್ ಮಿಷನ್ ಹಾಗೂ ಅಮೃತ ಯೋಜನೆಯ ಉದ್ಘಾಟನೆ ಜೊತೆಗೆ ಸ್ಥಳೀಯ ಸಂಸ್ಥೆಗಳ ನಿರ್ವಹಣೆಯ ಬಗ್ಗೆ ವಿಚಾರಣೆ ಸಂಕೀರ್ಣವನ್ನು ಸಹ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಶಿವಮೊಗ್ಗ ಮಹಾನಗರ ಪಾಲಿಕೆಯ…

Read More

ಶಿವಮೊಗ್ಗ : ನೇಣು ಬಿಗಿದುಕೊಂಡು ಶಿವಮೊಗ್ಗದ ATNCC ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ  : ಕಾಶೀಪುರದಲ್ಲಿ ಪದವಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹರ್ಷ ಎಟಿಎನ್ ಸಿಸಿ ಕಾಲೇಜಿನಲ್ಲಿ ಅಂತಿಮ‌ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಕಾಶೀಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿದ್ದಾರೆ.

Read More

ಶಿವಮೊಗ್ಗ : ಹುಣಸಗೋಡು ಸ್ಪೋಟ ಪ್ರಕರಣ ಸಿಬಿಐ ಗೆ ವಹಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ:

ಶಿವಮೊಗ್ಗ : ಹುಣಸೋಡು ಸ್ಪೋಟದ ಪ್ರಕರಣವನ್ನು ಸಿಬಿಐಗೆ ನೀಡಿ ಸಂತ್ರಸ್ತರಿಗೆಲ್ಲ ಕೂಡಲೇ ಪರಿಹಾರ ನೀಡಿ ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ದಿನಾಂಕ 21-01-2021ರ ರಾತ್ರಿ 10.30ರ ಸುಮಾರಿಗೆ ಕಲ್ಲು ಕೋರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಪೋಟಗೊಂಡು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಶಿವಮೊಗ್ಗ ಜಿಲ್ಲೆ ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಹ ಭೂಕಂಪದ ಅನುಭವವಾಗಿತ್ತು….

Read More

ಪುರಲೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ : ಒಬ್ಬನ ಸಾವು

 ಶಿವಮೊಗ್ಗ : ಪುರಲೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಪುರಲೆ ಕಡೆಯಿಂದ ಅಭಿಷೇಕ್ ರಾತ್ರಿ ಹೊಸಮನೆ ಬಡಾವಣೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎದುರಿನಿಂದ ಬಂದ ದ್ವಿಚಕ್ರ ವಾಹನವು ಅಭಿಷೇಕ್ ತೆರಳುತ್ತಿದ್ದ ಬೈಕ್’ಗೆ ಡಿಕ್ಕಿಯಾಗಿದ ಪರಿಣಾಮ  ಅಭಿಷೇಕ್ ತಲೆಗೆ ತೀವ್ರ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ಅಭಿಷೇಕ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತನ ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಹೊಸಮನೆ ಬಡಾವಣೆಯ ಅಭಿಷೇಕ್ (23)…

Read More

ಶಿವಮೊಗ್ಗ : ಡೆತ್​ನೋಟ್ ಬರೆದಿಟ್ಟು ಡಿಸಿ ಕಚೇರಿಯ ಎಫ್​ಡಿಎ ಅಧಿಕಾರಿ ನಾಪತ್ತೆ :

ಶಿವಮೊಗ್ಗ: ಕರ್ತವ್ಯದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್​ನೋಟ್ ಬರೆದಿಟ್ಟು ಜಿಲ್ಲಾಧಿಕಾರಿ ಕಚೇರಿಯ ಎಫ್​ಡಿಎ ಅಧಿಕಾರಿ ನಾಪತ್ತೆಯಾಗಿದ್ದಾರೆ. ಗಿರಿರಾಜ್ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾದವರು. ನನ್ನನ್ನು ಹುಡುಕಬೇಡಿ ಎಂದು ಡೆತ್‌ನೋಟ್​ನಲ್ಲಿ ಬರೆದು ಡಿಸಿ ಕಚೇರಿಯ ಸಹೋದ್ಯೋಗಿಗಳಿಗೆ ಕಳುಹಿಸಿ ನಾಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ 6 ಗಂಟೆಗೆ ಬಸವನಗುಡಿ ಕ್ವಾರ್ಟರ್ಸ್​ನಿಂದ ನಾಪತ್ತೆಯಾಗಿದ್ದು, ಜಿಲ್ಲಾಡಳಿತ ಹುಡುಕಾಟ ನಡೆಸುತ್ತಿದೆ. 

Read More

ಶಿವಮೊಗ್ಗ : ಉಚಿತ ಫ಼್ಯಾಷನ್ ಡಿಸೈನರ್ ತರಬೇತಿಗಾಗಿ ಅರ್ಜಿ ಆಹ್ವಾನ

ಶಿವಮೊಗ್ಗ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗು ಜೀವನೋಪಾಯ ಇಲಾಖೆ,  ಶ್ರೀಕಲಾ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಹಯೋಗದಲ್ಲಿ ಆರು ತಿಂಗಳ ಅವಧಿಯ ಉಚಿತ “ಅಸಿಸ್ಟೆಂಟ್ ಫ್ಯಾಷನ್ ಡಿಸೈನರ್ ತರಬೇತಿಗಾಗಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ ಅರ್ಹರನ್ನು ಮಾತ್ರ ಸಂದರ್ಶನದ ಮೂಲಕ ತರಬೇತಿಗೆ ಆಯ್ಕೆ ಮಾಡಲಾಗುವುದು. ಹದಿನೆಂಟು ವರ್ಷ ಮೇಲ್ಪಟ್ಟು ಮೂವತ್ತೈದು ವರ್ಷದೊಳಗಿನ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ನಂತರ ಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶ-ಬ್ಯಾಂಕ್…

Read More

ನಿಜವಾದ ರೈತರು ಪ್ರತಿಭಟನೆ ಮಾಡಿ ಭಾರತ್ ಬಂದ್​ಗೆ ಬೆಂಬಲ ನೀಡಿಲ್ಲ : ಸಚಿವ ನಾರಾಯಣಗೌಡ

ಶಿವಮೊಗ್ಗ : ನಿಜವಾದ ರೈತರು ಪ್ರತಿಭಟನೆ ಮಾಡಿ ಭಾರತ್ ಬಂದ್​ಗೆ ಬೆಂಬಲ ನೀಡಿಲ್ಲ. ಏಜೆಂಟ್​ಗಳು ಮಾರ್ಕೆಟಿಂಗ್ ಕ್ರೆಡಿಟ್ ಮಾಡೋದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವ ನಾರಾಯಣಗೌಡ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೇನು ಈ ಕಾಯ್ದೆಗಳಿಂದ ತೊಂದರೆಯಾಗುತ್ತಿದೆ? ಪ್ರಧಾನಿ ಮೋದಿ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ. ಬೆಲೆ ಏರಿಕೆ ಮಾಡಿದ್ದಾರೆ ಎಂದರು. ಬಂದ್ ಮಾಡುವ ಅಗತ್ಯ ಇರಲಿಲ್ಲ. ಎಪಿಎಂಸಿ ಕಾಯ್ದೆ ರೈತರಿಗೇನು ನಷ್ಟ ಮಾಡಿಲ್ಲ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಸುಧಾರಣೆ ಆಗಿದೆ. ರೈತರಿಗೆ…

Read More