Headlines

ಯುವತಿ ನಾಪತ್ತೆ: ಪರ್ವೀನ್ ಪತ್ತೆಗೆ ಪೊಲೀಸರ ಮನವಿ |MISSING

A 25-year-old woman, Almas Parveen NR, has gone missing from home. Police have appealed to the public to share any information regarding her whereabouts.

ಶಿವಮೊಗ್ಗ, ಜನವರಿ 9: ಭದ್ರಾವತಿ ತಾಲೂಕಿನಿಂದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಅಲ್ಮಾಸ್ ಪರ್ವೀನ್ ಎನ್.ಆರ್ (25) ಎಂಬ ಯುವತಿ ಜ.06 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು, ಇದುವರೆಗೆ ಮನೆಗೆ ಹಿಂತಿರುಗಿಲ್ಲ.

ನಾಪತ್ತೆಯಾಗಿರುವ ಅಲ್ಮಾಸ್ ಪರ್ವೀನ್ ಭದ್ರಾವತಿಯ ಸಿಗೇಬಾಗಿಯಲ್ಲಿರುವ ರಾಜೀವ್‌ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅಲ್ಮಾಸ್ ಪರ್ವೀನ್ ಅವರ ಗುರುತು ವಿವರಗಳು ಹೀಗಿವೆ: ಸುಮಾರು 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದಾರೆ. ಉರ್ದು, ಹಿಂದಿ, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡಬಲ್ಲರು. ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಟಾಪ್, ಪಿಂಕ್ ಬಣ್ಣದ ಲೆಗಿನ್ಸ್ ಪ್ಯಾಂಟು, ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಬುರ್ಖಾ ಹಾಗೂ ಕಾಫಿ ಬಣ್ಣದ ವೇಲ್ ಧರಿಸಿದ್ದರು.

ಯುವತಿಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ತಕ್ಷಣವೇ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.