ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಶಿವಮೊಗ್ಗದ ಯುವಕನ ಕೊಲೆ:
ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಇಂದು ಹಾಡುಹಗಲೇ ಭೀಕರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಈ ಕೊಲೆ ಮಾಡಲಾಗಿದ್ದು, ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ರಾಹಿಲ್(20) ಕೊಲೆಯಾದ ಯುವಕನಾಗಿದ್ದು, ಅಜ್ಗರ್(19) ಕೊಲೆಮಾಡಿರುವ ಯುವಕನಾಗಿದ್ದಾನೆ.ನಿನ್ನೆ ಸಂಜೆ ಕೊಲೆ ಆರೋಪಿ ಅಜ್ಗರ್ ತಂದೆಯು ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೈಕಲ್ ನಲ್ಲಿ ಬರುತ್ತಿದ್ದ ವೇಳೆ, ರಾಹಿಲ್ ನ ಬೈಕ್ ಡಿಕ್ಕಿ ಹೊಡೆದಿತ್ತು. ಈ ವಿಚಾರದಲ್ಲಿ ತನ್ನ ತಂದೆಯ ಸೈಕಲ್ ರಿಪೇರಿ ಮಾಡಿಕೊಡುವಂತೆ ಅಜ್ಗರ್ ತಿಳಿಸಿದ್ದನಂತೆ. ಈ ವೇಳೆ ಮಾತಿಗೆ ಮಾತು…