January 11, 2026

ಕರ್ನಾಟಕ ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಇಬ್ಬರಿಗೆ ಅವಕಾಶ

ಶಿವಮೊಗ್ಗ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 19 ವರ್ಷದೊಳಗಿನ ರಾಜ್ಯ ತಂಡಕ್ಕೆ ಶಿವಮೊಗ್ಗ ವಲಯದ ಮಿಥೇಶ್ ಕುಮಾರ್ ಹಾಗೂ 19 ವರ್ಷದೊಳಗಿನ ಮಹಿಳಾ ರಾಜ್ಯ ತಂಡಕ್ಕೆ ಶಿವಮೊಗ್ಗದ ನಿರ್ಮಿತ ಸಿ ಜೆ ಅವಕಾಶ ಪಡೆದಿದ್ದಾರೆ ಎಂದು ಕೆಎಸ್​ಸಿಎ ಶಿವಮೊಗ್ಗ ವಲಯದ ಸಂಚಾಲಕರಾದ ಡಿ ಎಸ್ ಅರುಣ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಡಿ ಎಸ್ ಅರುಣ್ ಶಿವಮೊಗ್ಗ ವಲಯಕ್ಕೆ ಇದೊಂದು ಹೆಮ್ಮೆಯ ವಿಷಯ. ಹಲವು ವರ್ಷಗಳಿಂದ ಇದ್ದ ಕೊರಗು ಈ ವರ್ಷ ನೀಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗಕ್ಕೆ ಸಾಕಷ್ಟು ಸೌಲಭ್ಯ ಒದಗಿಸಿಕೊಟ್ಟಿದೆ.

ಹಾಗಾಗಿ, ಈ ವರ್ಷ ಶಿವಮೊಗ್ಗ ವಲಯದಿಂದ 19 ವರ್ಷದೊಳಗಿನ ಮಹಿಳಾ ತಂಡಕ್ಕೆ ನಿರ್ಮಿತಿ ಹಾಗೂ 19 ವರ್ಷದೊಳಗಿನ ಯುವಕರ ತಂಡಕ್ಕೆ ಮಿಥೇಶ್ ಕುಮಾರ್ ಆಯ್ಕೆ ಆಗಿರುವುದು ಸಂತಸದ ಸಂಗತಿ.

ಸಾಕಷ್ಟು ಪ್ರರಿಶ್ರಮ ಪಟ್ಟು ಲೀಗ್ ಮ್ಯಾಚ್ ಸೇರಿ ಹಲವು ಪಂದ್ಯಗಳಲ್ಲಿ ಹೆಚ್ಚು ವಿಕೆಟ್‌ ಪಡೆಯುವ ಮೂಲಕ ಮಿಥೇಶ್ ಕುಮಾರ್ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಇಬ್ಬರು ಕ್ರೀಡಾಪಟುಗಳು ಆದಷ್ಟು ಬೇಗ ಭಾರತೀಯ ತಂಡ ಪ್ರತಿನಿಧಿಸುವಂತಾಗಲಿ. ಈ ಇಬ್ಬರ ಆಯ್ಕೆ ಶಿವಮೊಗ್ಗಕ್ಕೆ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *