ಪೋಸ್ಟ್ ಮ್ಯಾನ್ ನ್ಯೂಸ್ ನ ಬಿಗ್ ಇಂಪ್ಯಾಕ್ಟ್:

ಆನಂದಪುರ: ಮೂರು ದಿನಗಳ ಹಿಂದೆ ಪೋಸ್ಟ್ ಮ್ಯಾನ್ ನ್ಯೂಸ್   ಸಾಗರ ತಾಲ್ಲೂಕು ಆನಂದಪುರದ ಪೊಲೀಸ್ ವಸತಿ ಗೃಹಗಳು  ಪಾಳುಬಿದ್ದಿವೆ ಎಂದು ಸುದ್ದಿ ಪ್ರಸಾರ ಮಾಡಿತ್ತು.ಈ ಜಾಗ ಅಕ್ರಮ ಚಟುವಟಿಕೆಗಳ ತಾಣವೂ ಆಗಿತ್ತು .ಬಾನೆತ್ತರಕ್ಕೆ ಗಿಡಗಂಟಿಗಳು ಬೆಳೆದಿತ್ತು ಎಂದು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಇದೀಗ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೀಗ ಜಾಗವನ್ನು ಸ್ವಚ್ಛಗೊಳಿಸಿ ಗಿಡಗಂಟಿಗಳನ್ನು ಕಡಿದು ಇದೀಗ ಆ ಜಾಗಕ್ಕೆ ಹೊಸ ಕಳೆ ನೀಡುತ್ತಿದ್ದಾರೆ. ವಸತಿ ಗೃಹದ ಒಳಗಡೆಯೂ ಸಹ ಸ್ವಚ್ಚಗೊಳಿಸಿ ಹೊರಗಡೆಯಿಂದ…

Read More

ಸೇವಾ ನಿವೃತ್ತಿ ಹೊಂದಿದ ಆರ್. ಉಮೇಶ್ ರವರ ಸೇವೆ ಎಲ್ಲರಿಗೂ ಪ್ರೇರಣೆ : ಜೇನಿ ಗ್ರಾ.ಪಂ ಅಧ್ಯಕ್ಷೆ ಶಾರದಾ

ರಿಪ್ಪನ್ ಪೇಟೆ : ಇಲ್ಲಿನ ಚಿಕ್ಕಜೇನಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ ಉತ್ತಮ ಕರ್ತವ್ಯ ನಿರ್ವಹಿಸಿ, ವಯೋನಿವೃತ್ತಿ  ಹೊಂದಿದ  ಆರ್ ಉಮೇಶ ರವರ ಸೇವೆ ಪ್ರಶಂಸನೀಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಶಾರದಾ ರವರು ಹೇಳಿದರು. ಅವರು ಶುಕ್ರವಾರ ಇಲ್ಲಿಗೆ ಸಮೀಪದ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ ನಿವೃತ್ತರಾದ ಆರ್. ಉಮೇಶ್ ರವರಿಗೆ ಸನ್ಮಾನಿಸಿ ನೀಡಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಹೇಳಿದರು.  ತಾಲ್ಲೂಕಿನಲ್ಲಿಯೇ ಪ್ರೌಢಶಾಲೆಗೆ ಒಳ್ಳೆಯ ಹೆಸರು ತರುವಲ್ಲಿ ಉಮೇಶ್ ಅವರ ಪಾತ್ರ ಮಹತ್ವದ್ದು ಎಂದು ಹೇಳಿದರು.  ಕ್ಷೇತ್ರ…

Read More

ಭ್ರಷ್ಟಾಚಾರದಿಂದ ತುಂಬಿತುಳುಕುತ್ತಿರುವ ರಿಪ್ಪನ್ ಪೇಟೆಯ ನಾಡಕಚೇರಿ! ಗ್ರಾಮಸ್ಥರ ಆಕ್ರೋಶ.

ರಿಪ್ಪನ್ ಪೇಟೆ :ಇಲ್ಲಿನ ನಾಡಕಛೇರಿ ರೈತಸ್ನೇಹಿಯಾಗಿರದೇ ಸುಲಿಗೆಕೋರರ ತಾಣವಾಗಿದೆ ಎಂದು ರಿಪ್ಪನ್ ಪೇಟೆಯ ಗ್ರಾಮಸ್ಥರು ಪಟ್ಟಣದ ನಾಡಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದರು. ಗವಟೂರು ಗ್ರಾಮದ ಸರ್ವೇ ನಂಬರ್ 413 ರ 11ಈ ನಕ್ಷೆ ನಾವಿಕರಣ ಕ್ಕೆ 30000 ಸಾವಿರ ರೂಪಾಯಿಗಳನ್ನು ಲಂಚ ತೆಗೆದುಕೊಂಡ ಸರ್ವೆ ಸುಪ್ರವೈಸರ್ ಅಧಿಕಾರಿ ಮಲ್ಲಿಕಾರ್ಜುನ್ ನವೀಕರಣ ಮಾಡದೇ ಮೋಸ ಮಾಡಿದ್ದಾರೆ ಎಂದು ರೈತ ಈಶ್ವರಪ್ಪ ಆರೋಪಿಸಿದ್ದಾರೆ. ನಾಡಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಆರ್ ಎನ್ ಮಂಜುನಾಥ್ ರಿಪ್ಪನ್…

Read More

ಅವೈಜ್ಞಾನಿಕ ಚರಂಡಿ ಕಾಮಗಾರಿ: ನಾಲ್ಕು ರಸ್ತೆಯ ನೀರು,ಹೊಟೇಲ್ ತ್ಯಾಜ್ಯ ರೈತರ ಜಮೀನಿಗೆ::

ರಿಪ್ಪನ್ ಪೇಟೆ :ಅವೈಜ್ಞಾನಿಕ ಚರಂಡಿಯಿಂದ ಪಟ್ಟಣ ದ ನಾಲ್ಕು ರಸ್ತೆಯ ನೀರು,ಹೋಟೆಲ್ ನ ತ್ಯಾಜ್ಯಗಳು ಹೊಸನಗರ ರಸ್ತೆಯಲ್ಲಿರುವ ಚಿಪ್ಪಿಗರ ಕೆರೆಯ ಎದುರಿನ ರೈತರ ಜಮೀನಿಗೆ ಹೋಗುತ್ತಿದೆ.ಸ್ಥಳೀಯ ನಿವಾಸಿಗಳು ಹಾಗೂ ರೈತರು ಹಲವಾರು ಬಾರಿ ದೂರು ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಪರದಾಡುವಂತಾಗಿದೆ. ಚರಂಡಿಯಿಂದ ಹರಿಯುತ್ತಿರುವ, ಮಳೆ ನೀರು,ಹೋಟೆಲ್ ಗಳ ತ್ಯಾಜ್ಯ, ಮಧ್ಯದ ಬಾಟಲಿಗಳು ಸಂಪೂರ್ಣವಾಗಿ ಕೃಷಿ ಭೂಮಿ ಸೇರುತ್ತಿವೆ.ರಿಪ್ಪನ್ ಪೇಟೆ ಹೊಸನಗರ ರಸ್ತೆಯ ಕೂಗಳತೆ ದೂರದಲ್ಲಿ ಇರುವ ಚಿಪ್ಪಿಗರ ಕೆರೆಯ ಸಮೀಪ ಈ ಚರಂಡಿಯ…

Read More

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ,ಜನರ ಪರದಾಟ…!

ರಿಪ್ಪನ್ ಪೇಟೆ :: ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ಒಂದು ವಾರಗಳಿಂದ ಪಡಿತರ ಪಡೆಯಲು ಸಾಧ್ಯವಾಗದೇ ಕಾರ್ಡುದಾರರು ಪರದಾಡುತ್ತಿದ್ದಾರೆ.ನ್ಯಾಯಬೆಲೆ ಅಂಗಡಿ ಮುಂದೆ ದಿನವಿಡೀ ಕಾದರೂ ಪಡಿತರ ಸಿಗದೇ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.  ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ತಡೆಯಲು ಲೆಡ್ಜರ್ ವಿತರಣಾ ವ್ಯವಸ್ಥೆ ಬದಲಾಗಿ  ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಾರ್ಡುದಾರರ ಹೆಬ್ಬೆರಳ ಗುರುತು ಪತ್ತೆ ಮಾಡಿ ಆಹಾರ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಮೇಲೆ ಒತ್ತಡ ಬಿದ್ದು ಪದೇ…

Read More

ಗಬ್ಬು ನಾರುತ್ತಿದೆ ರಿಪ್ಪನ್ ಪೇಟೆಯ ಸಾರ್ವಜನಿಕ ಶೌಚಾಲಯ:

ರಿಪ್ಪನ್ ಪೇಟೆ: ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಸುತ್ತ ಮುತ್ತ ನೂರಾರು ಹಳ್ಳಿಗಳ  ಕೇಂದ್ರಬಿಂದುವಾಗಿರುವ ರಿಪ್ಪನ್ ಪೇಟೆ ಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದ್ದು,ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.  …

Read More

ರಿಪ್ಪನ್ ಪೇಟೆಯ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ವ್ಯಕ್ತಿ ಸಾವು:

ರಿಪ್ಪನ್ ಪೇಟೆ:ಇಂದು ಮಧ್ಯಾಹ್ನ ಮೂಗೂಡ್ತಿ ಸಮೀಪ  ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ  ಓರ್ವ ಮಹಿಳೆ ಮೃತ ಪಟ್ಟಿದ್ದರು.ಉಳಿದ ಮೂವರ ಸ್ಥಿತಿ ಗಂಭೀರವಾಗಿತ್ತು, ಇದೀಗ ಶಿವಮೊಗ್ಗದ  ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊರ್ವ ವ್ಯಕ್ತಿ ವಿಜೇಂದ್ರ ಭಂಡಾರಿ (60) ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಜೇಂದ್ರ ಭಂಡಾರಿ (60) ರಿಪ್ಪನ್ ಪೇಟೆಯ ಸಮೀಪದ ದೂನ ಮೂಲದ ನಿವಾಸಿಯಾಗಿದ್ದಾರೆ. ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ…

Read More

ರಿಪ್ಪನ್ ಪೇಟೆಯಲ್ಲಿ ಭೀಕರ ಅಪಘಾತ: ಮಹಿಳೆ ಸಾವು

ರಿಪ್ಪನ್ ಪೇಟೆ: ಸಮೀಪ  ವರನಹೊಂಡ ಎಂಬಲ್ಲಿ ಭೀಕರ ಅಪಘಾತ.ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒರ್ವ ಮಹಿಳೆ ಸಾವನ್ನಪ್ಪಿದ್ದಾರೆ.ಉಳಿದ ಮೂವರ ಸ್ಥಿತಿ ಗಂಭೀರ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು.ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆ ಗೆ ಆಗಮಿಸುತ್ತಿತ್ತು.ಮೃತ ಮಹಿಳೆ ನೀಲಮ್ಮ (60) ಎಂದು ಹೇಳಲಾಗುತ್ತಿದೆ.ಚಾಲಕ ಕೌಶಿಕ್ ಎನ್ನಲಾಗುತ್ತಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ರಿಪ್ಪನ್ ಪೇಟೆ…

Read More

ರಿಪ್ಪನ್ ಪೇಟೆ ತಾಪಂ ಕ್ಷೇತ್ರಕ್ಕೆ ಟಿಕೆಟ್ ಗಾಗಿ ಭಾರಿ ಪೈಪೋಟಿ:

ರಿಪ್ಪನ್ ಪೇಟೆ: ಕೊರೋನಾ ಕಾರಣಕ್ಕೆ ಮುಂದಿನ ಆರು ತಿಂಗಳ ಕಾಲ ಯಾವುದೇ ಚುನಾವಣೆ ಇಲ್ಲ ಎಂದು ರಾಜ್ಯ ಸರ್ಕಾರ ಘೋಷಿಸಿದೆ.ಆದರೆ ರಾಜ್ಯ ಚುನಾವಣಾ ಆಯೋಗ ಈ ಆದೇಶ ನಮಗೆ ಅನ್ವಯಿಸದು ಎನ್ನುವ ಮೂಲಕ ಯಾವುದೇ ಸಮಯದಲ್ಲಾದರೂ ಚುನಾವಣೆ ದಿನಾಂಕ ಪ್ರಕಟಿಸುವ ಸ್ಪಷ್ಟ ಸುಳಿವು ನೀಡಿದೆ.ಹಾಗಾಗಿ ರಾಜಕೀಯ ಪಕ್ಷಗಳು ಕೂಡ ಸದ್ದಿಲ್ಲದೇ ಚುನಾವಣೆಗೆ ಸಿದ್ದತೆ ನಡೆಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಾಗಿದ್ದ ಪ್ರತಿಷ್ಟೆಯ ಕಣ ರಿಪ್ಪನ್ ಪೇಟೆ ತಾಲೂಕ್ ಪಂಚಾಯತ್ ಕ್ಷೇತ್ರವು ಈ ಬಾರಿ ಸಾಮಾನ್ಯ ಮಹಿಳೆ ಮೀಸಲಾತಿ…

Read More

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ:

     ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಗಾಜಿನಗೋಡು ಗ್ರಾಮದ ನಿವಾಸಿ, ಹೊಸನಗರ ತಾಲೂಕು ಗಂಗಾಮತಸ್ಥ ಸಂಘದ ಮಾಜಿ ನಿರ್ದೇಶಕ ಕೊಲ್ಲಪ್ಪ ಇವರು ಕೂಲಿ ಕೆಲಸಕ್ಕೆಂದು ಮೂರು ದಿನಗಳ ಹಿಂದೆ ಹೋದವರು ಇಂದು ಗಾಜಿನಗೋಡು ಸಮೀಪ ಕುಮದ್ವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಕಳೆದ ಮೂರು ನಾಲ್ಕು ದಿನದಿಂದ ಬರುತ್ತಿರುವ ಅತಿಯಾದ ಮಳೆಗೆ ಕುಮದ್ವತಿ ನದಿ ಹರಿಯುತ್ತಿದ್ದು ಕಾಲುಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಗಾಜಿನ ಗೋಡು ಮತ್ತು  ಹಾರಂಬಳ್ಳಿ ಮಧ್ಯೆ ಹರಿಯುತ್ತಿರುವ ನದಿ ಇದಾಗಿದ್ದು ಕೂಲಿಯೂ ಸೇರಿದಂತೆ ಬೇರೆ…

Read More