w
Headlines
Home » ರಿಪ್ಪನ್ ಪೇಟೆಯ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ವ್ಯಕ್ತಿ ಸಾವು:

ರಿಪ್ಪನ್ ಪೇಟೆಯ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ವ್ಯಕ್ತಿ ಸಾವು:

ರಿಪ್ಪನ್ ಪೇಟೆ:ಇಂದು ಮಧ್ಯಾಹ್ನ ಮೂಗೂಡ್ತಿ ಸಮೀಪ  ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ  ಓರ್ವ ಮಹಿಳೆ ಮೃತ ಪಟ್ಟಿದ್ದರು.ಉಳಿದ ಮೂವರ ಸ್ಥಿತಿ ಗಂಭೀರವಾಗಿತ್ತು, ಇದೀಗ ಶಿವಮೊಗ್ಗದ  ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊರ್ವ ವ್ಯಕ್ತಿ ವಿಜೇಂದ್ರ ಭಂಡಾರಿ (60) ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿಜೇಂದ್ರ ಭಂಡಾರಿ (60) ರಿಪ್ಪನ್ ಪೇಟೆಯ ಸಮೀಪದ ದೂನ ಮೂಲದ ನಿವಾಸಿಯಾಗಿದ್ದಾರೆ.

ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆ ಗೆ ಆಗಮಿಸುವಾಗ ಆಟೋ ಹಿಂದಿಕ್ಕುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿತ್ತು.


ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವರದಿ;ದೇವರಾಜ್ ರಿಪ್ಪನ್ ಪೇಟೆ


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.