ರಿಪ್ಪನ್ ಪೇಟೆ :ಇಲ್ಲಿನ ನಾಡಕಛೇರಿ ರೈತಸ್ನೇಹಿಯಾಗಿರದೇ ಸುಲಿಗೆಕೋರರ ತಾಣವಾಗಿದೆ ಎಂದು ರಿಪ್ಪನ್ ಪೇಟೆಯ ಗ್ರಾಮಸ್ಥರು ಪಟ್ಟಣದ ನಾಡಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಗವಟೂರು ಗ್ರಾಮದ ಸರ್ವೇ ನಂಬರ್ 413 ರ 11ಈ ನಕ್ಷೆ ನಾವಿಕರಣ ಕ್ಕೆ 30000 ಸಾವಿರ ರೂಪಾಯಿಗಳನ್ನು ಲಂಚ ತೆಗೆದುಕೊಂಡ ಸರ್ವೆ ಸುಪ್ರವೈಸರ್ ಅಧಿಕಾರಿ ಮಲ್ಲಿಕಾರ್ಜುನ್ ನವೀಕರಣ ಮಾಡದೇ ಮೋಸ ಮಾಡಿದ್ದಾರೆ ಎಂದು ರೈತ ಈಶ್ವರಪ್ಪ ಆರೋಪಿಸಿದ್ದಾರೆ.
ನಾಡಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಆರ್ ಎನ್ ಮಂಜುನಾಥ್ ರಿಪ್ಪನ್ ಪೇಟೆ ನಾಡ ಕಚೇರಿ ರೈತರ ಸ್ನೇಹಿ ಯಾಗಿಲ್ಲ ಸುಲಿಗೆಕೋರಾರಾಗಿದ್ದಾರೆ ಬಡವರ ರಕ್ತ ಹೀರುವ ಇಂತಹ ಅಧಿಕಾರಿ ಗಳನ್ನು ಈ ಕೂಡಲೇ ಅಮಾನಾತು ಮಾಡಬೇಕೆಂದು ಒತ್ತಾಯಿಸಿದರು ಹಾಗೂ ರೈತರ ಕೆಲಸ ಗಳಿಗೆ ಅಧಿಕಾರಿಗಳು ತುರ್ತು ಸ್ಪಂದನೆ ಮಾಡಬೇಕೆಂದು ಹೇಳಿದರು..
ಸರ್ವೆ ಇಲಾಖೆ ಭ್ರಷ್ಟಾಚಾರದಿಂದ ಕೂಡಿದ್ದು ರೈತರ ಯಾವ ಕೆಲಸವೂ ಲಂಚವಿಲ್ಲದೆ ನಡೆಯುವುದಿಲ್ಲ ಸಾಮಾನ್ಯರ ಸ್ಥಿತಿ ಶೋಚನೀಯವಾಗಿದೆ, ರೈತರ ಅರ್ಜಿ ಕಸದಬುಟ್ಟಿ ಸೇರುತ್ತಿದೆ ಸರ್ವೆ ಅಧಿಕಾರಿಗಳು ಲಂಚವಿಲ್ಲದೆ ರೈತರ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಆರೋಪಿಸಿದ್ದಾರೆ.
ಭ್ರಷ್ಟ ಸರ್ವೆ ಅಧಿಕಾರಿ ಮಲ್ಲಿಕಾರ್ಜುನ ರನ್ನು ಕೂಡಲೇ ಅಮಾನತು ಮಾಡಬೇಕು ಎಂದು ತಹಸೀಲ್ದಾರರಿಗೆ ಪ್ರತಿಭಟನಾಕಾರರು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಜಂಬಳ್ಳಿ ಗಿರೀಶ್ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.
ವರದಿ: ರಾಮನಾಥ್
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..