ರಿಪ್ಪನ್ ಪೇಟೆ : ಇಲ್ಲಿನ ಚಿಕ್ಕಜೇನಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ ಉತ್ತಮ ಕರ್ತವ್ಯ ನಿರ್ವಹಿಸಿ, ವಯೋನಿವೃತ್ತಿ ಹೊಂದಿದ
ಆರ್ ಉಮೇಶ ರವರ ಸೇವೆ ಪ್ರಶಂಸನೀಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಾ ರವರು ಹೇಳಿದರು.
ಅವರು ಶುಕ್ರವಾರ ಇಲ್ಲಿಗೆ ಸಮೀಪದ ಚಿಕ್ಕಜೇನಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ ನಿವೃತ್ತರಾದ ಆರ್. ಉಮೇಶ್ ರವರಿಗೆ ಸನ್ಮಾನಿಸಿ ನೀಡಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಹೇಳಿದರು. ತಾಲ್ಲೂಕಿನಲ್ಲಿಯೇ ಪ್ರೌಢಶಾಲೆಗೆ ಒಳ್ಳೆಯ ಹೆಸರು ತರುವಲ್ಲಿ ಉಮೇಶ್ ಅವರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪನವರು ಮಾತನಾಡಿ ಸುಮಾರು ಎಂಟು ವರ್ಷಗಳ ಕಾಲ ಚಿಕ್ಕಜೇನಿ ಪ್ರೌಢಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮವಹಿಸಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈಯುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ಬಹುಮುಖ ಪ್ರತಿಭೆ ಹೊಂದಿರುವ ಆರ್ .ಉಮೇಶ್ ರವರ ಸಾಧನೆಯಲ್ಲಿ ಬೋಧನಾ ಕ್ರಮ ,ಕರ್ತವ್ಯನಿಷ್ಠೆ,ದಕ್ಷತೆ, ಸಹ ಶಿಕ್ಷಕರ ಜೊತೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕೆಲಸ ಮಾಡಿಸಿಕೊಳ್ಳುವ ಕ್ಷಮತೆ ಅವರಲ್ಲಿ ಕಂಡಿದ್ದೇನೆ ಎಂದು ಪ್ರಶಂಸಿಸಿದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಆರ್. ಉಮೇಶ್ ದಂಪತಿ ಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪರೀಕ್ಷೆಗೆ ಅಣಿಯಾಗುತ್ತಿರುವ 10ನೇ ತರಗತಿ ಮಕ್ಕಳನ್ನು ಬೀಳ್ಕೊಡುಗೆ ಮಾಡಲಾಯಿತು.
ಸನ್ಮಾನಿತರಾದ ಆರ್. ಉಮೇಶ್ ಮಾತನಾಡಿ ಎಲ್ಲರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ಸೇವೆಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರಬಾಬು ಮತ್ತು ಬಿ ಆರ್ ಸಿ ಮುಖ್ಯಸ್ಥ ನಾಗರಾಜ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟಾಚಲ, ಅಣ್ಣಪ್ಪಶೆಟ್ಟಿ, ಶ್ರೀಮತಿ ನಳಿನ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಮೇಘರಾಜ್, ಕೃಷ್ಣಮೂರ್ತಿ, ಲಿಂಗರಾಜ್, ವಿಎಲ್ ಮಧು, ಶ್ರೀಮತಿ ಆಶಾ ನರಸಿಂಹ, ಶ್ರೀಮತಿ ಜಯಶೀಲ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಕುಮಾರಿ, ಸಹ ಶಿಕ್ಷಕರಾದ ಎನ.ಡಿ.ಹೆಗಡೆ, ಶೇಖರಪ್ಪ ,ವೀರನಗೌಡ, ಶ್ರೀಮತಿ ಸವಿತಾ, ಶ್ರೀಮತಿ ನಿರ್ಮಲ, ಶಿಕ್ಷಕರಾದ ಗುರುಶಾಂತಪ್ಪ, ನಾಗರಾಜ್, ಶ್ರೀಮತಿ ಅನಿತಾ, ಪ್ರಮುಖರಾದ ಗವಟೂರು ಗಣಪತಿ, ಪತ್ರಕರ್ತ ತ.ಮ. ನರಸಿಂಹ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಐತಾಳ್ ವಹಿಸಿದ್ದರು. ಸರ್ವರನ್ನು ಶೇಖರಪ್ಪ ಸ್ವಾಗತಿಸಿದರು. ಕಾರ್ಯಕ್ರಮವನ್ನು ಎನ.ಡಿ ಹೆಗಡೆ ನಿರೂಪಿಸಿದರು ಕೊನೆಯಲ್ಲಿ ವೀರನಗೌಡ ವಂದಿಸಿದರು.
ವರದಿ: ರಾಮನಾಥ್
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..