ರಿಪ್ಪನ್ ಪೇಟೆ: ಕೊರೋನಾ ಕಾರಣಕ್ಕೆ ಮುಂದಿನ ಆರು ತಿಂಗಳ ಕಾಲ ಯಾವುದೇ ಚುನಾವಣೆ ಇಲ್ಲ ಎಂದು ರಾಜ್ಯ ಸರ್ಕಾರ ಘೋಷಿಸಿದೆ.ಆದರೆ ರಾಜ್ಯ ಚುನಾವಣಾ ಆಯೋಗ ಈ ಆದೇಶ ನಮಗೆ ಅನ್ವಯಿಸದು ಎನ್ನುವ ಮೂಲಕ ಯಾವುದೇ ಸಮಯದಲ್ಲಾದರೂ ಚುನಾವಣೆ ದಿನಾಂಕ ಪ್ರಕಟಿಸುವ ಸ್ಪಷ್ಟ ಸುಳಿವು ನೀಡಿದೆ.ಹಾಗಾಗಿ ರಾಜಕೀಯ ಪಕ್ಷಗಳು ಕೂಡ ಸದ್ದಿಲ್ಲದೇ ಚುನಾವಣೆಗೆ ಸಿದ್ದತೆ ನಡೆಸಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದ್ದ ಪ್ರತಿಷ್ಟೆಯ ಕಣ ರಿಪ್ಪನ್ ಪೇಟೆ ತಾಲೂಕ್ ಪಂಚಾಯತ್ ಕ್ಷೇತ್ರವು ಈ ಬಾರಿ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿ ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಗಾಗಿ ಸ್ಪರ್ದೆ ಏರ್ಪಟ್ಟಿದೆ.ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಹಂಬಲದಲ್ಲಿದ್ದರೆ,ಬಿಜೆಪಿ ಈ ಬಾರಿ ಶತಾಯಗತಾಯ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪಣತೊಟ್ಟಿದೆ ಏತನ್ಮಧ್ಯೆ ಜೆಡಿಎಸ್ ಉಳಿದ ಪಕ್ಷಗಳ ಅಭ್ಯರ್ಥಿ ಘೋಷಣೆಯ ನಂತರದ ಲಾಭದ ನಿರೀಕ್ಷೆಯಲ್ಲಿದೆ.
ಕಾಂಗ್ರೆಸ್ ಪಕ್ಷದಿಂದ ಶ್ವೇತಾ ರಮೇಶ್ ರವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.ರಿಪ್ಪನ್ ಪೇಟೆಯ ಚಿರಪರಿಚಿತ ವ್ಯಕ್ತಿಯಾಗಿರುವ ರಮೇಶ್ ಫ಼್ಯಾನ್ಸಿ ರವರ ಪತ್ನಿ ಶ್ವೇತಾ ರಮೇಶ್ ಸದ್ಯದ ವಾತವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಕುದುರೆಯಾಗಿದ್ದಾರೆ.ಟಿಕೆಟ್ ಖಾತರಿಯ ಬಗ್ಗೆ ಸ್ಥಳಿಯ ಹಾಗೂ ಜಿಲ್ಲಾ ಮುಖಂಡರು ಸಹಮತ ವ್ಯಕ್ತಪಡಿಸಿರುವ ಕಾರಣ ಈಗಾಗಲೇ ಚುನಾವಣೆಗೆ ಭಾರಿ ಸಿದ್ದತೆ ಮಾಡಿಕೊಂಡು ಪ್ರಚಾರ ನಿರತರಾಗಿದ್ದಾರೆ.
-ಶ್ವೇತಾ ರಮೇಶ್
ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ದದಾಗಿಯೇ ಇದೆ.ಮುಂಚೂಣಿಯಲ್ಲಿ ಪ್ರಮೀಳಾ ಲಕ್ಷ್ಮಣಗೌಡ, ಇಂದಿರಮ್ಮ, ವಾಣಿ ಗೋವಿಂದಪ್ಪ , ಧನಲಕ್ಷ್ಮಿ, ಸಾಜೀದಾ ಹನೀಫ಼್,ವೇದಾವತಿ ಪರಮೇಶ್ ಹಾಗೂ ಇನ್ನಿತರ ಪ್ರಬಲ ಆಕಾಂಕ್ಷಿಗಳಿದ್ದಾರೆ.
ಬಿಜೆಪಿಯಲ್ಲಿ ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ನಾಗರತ್ನ ದೇವರಾಜ್ ಹೆಸರು ಮುಂಚೂಣಿಯಲ್ಲಿದೆ.ಈ ಹಿಂದೆ ತಾಲೂಕ್ ಪಂಚಾಯತ್ ಸದಸ್ಯರಾಗಿ ಮಾಡಿದ ಅಭಿವೃದ್ಧಿ ಕಾಮಗಾರಿಗಳೇ ಶ್ರೀರಕ್ಷೇ ಎಂಬ ನಿಲುವಿನಲ್ಲಿ ಈ ಬಾರಿ ಚುನಾವಣೆಗೆ ಸಿದ್ದರಾಗಿದ್ದಾರೆ.ಮತ್ತೋಮ್ಮೆ ಗೆಲ್ಲುವ ನಿರೀಕ್ಷೇಯಲ್ಲಿ ಚುನಾವಣೆಗೆ ಸಿದ್ದತೆ ಮಾಡಿಕೊಂಡು ಮನೆ ಮನೆ ಪ್ರಚಾರ ನಿರತರಾಗಿದ್ದಾರೆ.
ಬಿಜೆಪಿಯು ಕ್ಷೇತ್ರವನ್ನು ಪಡೆದೇ ತೀರುವ ಉದ್ದೇಶದಿಂದ ನಾಗರತ್ನ ದೇವರಾಜ್ ರವರಿಗೆ ಮಣೆ ಹಾಕುವ ಸಾಧ್ಯತೆಯೇ ಹೆಚ್ಚು.
– ನಾಗರತ್ನ ದೇವರಾಜ್
ಬಿಜೆಪಿಯಲ್ಲೂ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ಇದೆ. ರಿಪ್ಪನ್ ಪೇಟೆಯ ಆಶಾ ಸತೀಶ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾ ಆರ್ ಶಂಕರ್ ರವರ ಹೆಸರು ಕೂಡ ಕೇಳಿಬರುತ್ತಿದೆ.
ಜೆಡಿಎಸ್ ಪಕ್ಷವು ಎರಡು ಪಕ್ಷಗಳ ಅಭ್ಯರ್ಥಿಗಳ ಘೋಷಣೆಯ ನಂತರದ ಲಾಭದ ಲೆಕ್ಕಚಾರದಲ್ಲಿದೆ.
ಯಾವುದೇ ರಾಜಕೀಯ ಪಕ್ಷದ ಬುಡ ಭದ್ರವಾಗಿದ್ದರೆ ಮೇಲ್ಮಟ್ಟದ ಚುನಾವಣೆಗಳಲ್ಲಿ ಉತ್ತಮ ಸಾಧನೆ ಸಾಧ್ಯ ಎಂಬುವುದು ಸಹಜ ಚಿಂತನೆ.ಹಾಗಾಗಿ ರಿಪ್ಪನ್ ಪೇಟೆಯ ತಾಲೂಕ್ ಪಂಚಾಯತ್ ಕ್ಷೇತ್ರವನ್ನು ಎಲ್ಲಾ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡಿವೆ.
– ವೇದಾವತಿ ಪರಮೇಶ
ರಿಪ್ಪನ್ ಪೇಟೆ ವರದಿ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್