ಜಿಲ್ಲಾ ಸುದ್ದಿ:
ಮಾರನಗದ್ದೆ-ಹೆಂಡೆಗದ್ದೆ ಸಂಪರ್ಕಿಸುವ ಶಂಕರಹಳ್ಳ ಕಾಲುಸಂಕಕ್ಕೆ ಶಾಸಕರಿಂದ ಶಂಕುಸ್ಥಾಪನೆ
ಮಾರನಗದ್ದೆ-ಹೆಂಡೆಗದ್ದೆ ಸಂಪರ್ಕಿಸುವ ಶಂಕರಹಳ್ಳ ಕಾಲುಸಂಕಕ್ಕೆ ಶಾಸಕರಿಂದ ಶಂಕುಸ್ಥಾಪನೆ ರಿಪ್ಪನ್‌ಪೇಟೆ;-ಸಮೀಪದ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರನಗದ್ದೆ-ಹೆಂಡೆಗದ್ದೆ ಸಂಪರ್ಕಿಸುವ ಶಂಕರಹಳ್ಳ ಕಾಲುಸಂಕ ನಿರ್ಮಾಣಕ್ಕೆ ಸರ್ಕಾರದಿಂದ ೧೭ ಲಕ್ಷ ರೂ ಅನುದಾನಬಿಡುಗಡೆಯಾಗಿದ್ದು ಈ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೀಡಿದರು. ಮುಳುಗಡೆ ರೈತರೆ ಹೆಚ್ಚು ವಾಸಿಸುತ್ತಿರುವ ಈ ಗ್ರಾಮಗಳಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಹಳ್ಳ ದಾಟಿಕೊಂಡು ಬರುವುದು ಕಷ್ಟಕರವಾಗಿತು ಶಾಲಾ ಕಾಲೇಜ್ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ದೂರದ ಬೆಳ್ಳೂರು ರಿಪ್ಪನ್‌ಪೇಟೆ ಆರಸಾಳು ಶಿವಮೊಗ್ಗ ಹೋಗಿಬರಲು ಈ ಹಳ್ಳದಲ್ಲಿ…
RIPPONPETE | ಬೋರ್ವೆಲ್ ಕೊರೆಯುವಾಗ ಬಿರುಕು ಬಿಟ್ಟ ಭೂಮಿ – ರಸ್ತೆ ಹಾಗೂ ಮನೆಗಳಿಗೆ ಡ್ಯಾಮೇಜ್ ಆರೋಪ
RIPPONPETE | ಬೋರ್ವೆಲ್ ಕೊರೆಯುವಾಗ ಬಿರುಕು ಬಿಟ್ಟ ಭೂಮಿ – ರಸ್ತೆ ಹಾಗೂ ಮನೆಗಳಿಗೆ ಡ್ಯಾಮೇಜ್ ಆರೋಪ ನೀರಿಗಾಗಿ ಕಾದು ಕುಳಿತಿದ್ರು. ಎಷ್ಟೊತ್ತಿಗೆ ಅಂತಾ ಕಾದುಕುಳಿತ್ತಿದ್ದರಿಗೆ ಶಾಕ್ ಅಗಿದ್ದು ಏಕಾಏಕಿ ಬೋರ್ ವೇಲ್ ಕೊರೆಯೋ ಜಾಗದ ಸುತ್ತ ಕಾಣಿಸಿಕೊಂಡ ಬಿರುಕು. ಕೆಲವ್ರು ಶಬ್ದ ಬಂತು ಅಂತಿದ್ರೆ ಇನ್ನೂ ಕೆಲವ್ರು ಇಲ್ಲ ಅಂತಿದ್ದಾರೆ. ಅದ್ರೂ ಡ್ಯಾಮೇಜ್ ಗೆ ಅತಂಕವಂತೂ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮಸ್ಥರಿಗೆ ಮೂಡಿದೆ. ಹೌದು ಕೆರೆಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆ…
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅಂಜನಿ ಹುಲಿ ಸಾವು
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅಂಜನಿ ಹುಲಿ ಸಾವು ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಅಂಜನಿ ಎಂಬ ಹೆಣ್ಣು ಹುಲಿ ಅನಾರೋಗ್ಯ ಕಾರಣದಿಂದ ಬುಧವಾರ (ಜ.08) ರಾತ್ರಿ ಮೃತಪಟ್ಟಿದೆ. ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹ ಧಾಮದ ಹುಲಿ ಅಂಜನಿ, ಬಹು ಅಂಗಾಗ ವೈಫಲ್ಯದಿಂದ ನಿನ್ನೆ ರಾತ್ರಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ. ಅಂಜನಿ ವಯೋ ಸಹಜ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಪಶುವೈದ್ಯಕೀಯ…
RIPPONPETE | ಬೆಳ್ಳೂರಿನಲ್ಲಿ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
RIPPONPETE | ಬೆಳ್ಳೂರಿನಲ್ಲಿ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆ ಬಾಗಿಲು ಸಮೀಪವೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ನಾಯಿಗಳು ಬೊಗಳಿದಾಗ ಮನೆಯವರು ಅಷ್ಟಾಗಿ…
ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (09-01-2025) ಕೃಷಿ ಪಂಪ್ ಸೆಟ್ ಗೆ 3 ಫೇಸ್ ವಿದ್ಯುತ್ ಇರಲ್ಲ
ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (09-01-2025) 3 ಫೇಸ್ ವಿದ್ಯುತ್ ಇರಲ್ಲ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 09/01/25 ರಂದು ಬೆಳಿಗ್ಗೆ 09-00 ರಿಂದ ಸಂಜೆ 06.00 ಗಂಟೆಯವರೆಗೆ “3 ಫೇಸ್” ವಿದ್ಯುತ್ ಸರಬರಾಜು ಇರುವುದಿಲ್ಲ. ಶಿವಮೊಗ್ಗದ ಎಂ ಆರ್ ಎಸ್ ನಲ್ಲಿ ತುರ್ತು ದುರಸ್ತಿ ಕಾರ್ಯವಿರುವುದರಿಂದ ರೈತರ ಪಂಪ್ ಸೆಟ್ , ಹಾಗೂ ಯಂತ್ರೋಪಕರಣಗಳ ಬಳಕೆಗೆ ಪೂರಕವಾಗುವ 3 ಫೇಸ್ ವಿದ್ಯುತ್ ಇರುವುದಿಲ್ಲ ಉಳಿದಂತೆ ವಿದ್ಯುತ್ ಸರಬರಾಜಿನಲ್ಲಿ…
HOSANAGARA | ನಗರದ ಜುಮ್ಮಾ ಮಸೀದಿಯಲ್ಲಿ ರಕ್ತದಾನ ಶಿಬಿರ
HOSANAGARA | ನಗರದ ಜುಮ್ಮಾ ಮಸೀದಿಯಲ್ಲಿ ರಕ್ತದಾನ ಶಿಬಿರ ಶ್ರೇಷ್ಠ ವಾದ ಕಾರ್ಯಕ್ರಮವಾಗಿರುವ ರಕ್ತದಾನ ಶಿಬಿರಗಳು ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚಾಗಿ ನಡೆಯಬೇಕು. ಜನ ಮೆಚ್ಚಿದ ಕಾರ್ಯಕ್ರಮಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ.ಅದೇ ರೀತಿ ಶಿಕ್ಷಣಕ್ಕೂ ನಾವು ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಧರ್ಮಗುರುಗಳಾದ ಅಶ್ರಫ್ ಇಮಾಮಿ ಹೇಳುದರು. ಹೊಸನಗರ ತಾಲೂಕು ಬಿದನೂರು ನಗರದ ಸುಲ್ತಾನ್ ಜುಮ್ಮಾ ಮಸೀದಿ ವತಿಯಿಂದ ಮೊಹಮ್ಮದ್ ಪೈಗಂಬರ್ ಹುಟ್ಟುಹಬ್ಬದ ಅಂಗವಾಗಿ ಸತತ 4ನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನ…
ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಬೇಡಿ – ಶಾಸಕ ಬೇಳೂರು
ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಬೇಡಿ – ಶಾಸಕ ಬೇಳೂರು ರಿಪ್ಪನ್‌ಪೇಟೆ;-ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುವ ಮೂಲಕ ಕಡ್ಡಾಯ ಶಿಕ್ಷಣ ನೀಡುವುದು ಮತ್ತು ಸಾಕಷ್ಟು ಉಪಯುಕ್ತವಾದಂತಹ ಯೋಜನೆಗಳ ಮೂಲಕ ನಮ್ಮ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡದಂತೆ ಯೋಜನೆ ರೂಪಿಸಿದೆ ಇದನ್ನು ಬಳಸಿಕೊಂಡು ಪೋಷಕರು ಶಿಕ್ಷಕ ಸಮೂಹ ಮಕ್ಕಳಗೆ ಶಿಕ್ಷಣ ನೀಡುವಂತೆ ಮಾಡಬೇಕು ಎಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರೌಢಶಾಲಾ ವಿಭಾಗದ 2024-25…
20 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ
20 ಕೋಟಿ ರೂ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ರಿಪ್ಪನ್‌ಪೇಟೆ;-ಯಡೇಹಳ್ಳಿಯಿಂದ ರಿಪ್ಪನ್‌ಪೇಟೆಯ ವರಗಿನ ಸಂಪರ್ಕ ರಸ್ತೆಗೆ 20 ಕೋಟಿ ರೂ ವೆಚ್ಚದ 9 ಕಿ.ಮೀ.ದೂರದ ರಾಜ್ಯಹೆದ್ದಾರಿಯ ಆಗಲೀಕರಣ ಕಾಮಗಾರಿಗೆ ಶಾಸಕ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ನಂತರ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಶಂಕುಸ್ಥಾಪನಾ ಸಮಾರಂಭದ ಸಭೆಯಲ್ಲಿ ಮಾತನಾಡಿ ಟೀಕೆ ಟಿಪ್ಪಣಿಗಳು ಸತ್ತಹೋಗುತ್ತವೆ ಆದರೆ ಮಾಡಿದ ಅಭಿವೃದ್ದಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ.ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧಪಕ್ಷದವರು ಬಾಯಿ…
ಹಿರಿಯ ಸಾಹಿತಿ ನಾ ಡಿಸೋಜಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ
ಹಿರಿಯ ಸಾಹಿತಿ ನಾ ಡಿಸೋಜಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ ಭಾನುವಾರ ಅನಾರೋಗ್ಯದಿಂದ ನಿಧನರಾದಂತ ಹಿರಿಯ ಸಾಹಿತಿ ನಾ.ಡಿಸೋಜ(87) ಅವರ ಪಾರ್ಥೀವ ಶರೀರವನ್ನು ಸಾಗರಕ್ಕೆ ಮಂಗಳೂರಿನಿಂದ ತರಲಾಗಿತ್ತು. ಇಂತಹ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪಡೆದರು. ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದ ಸ್ವಗೃಹಕ್ಕೆ ನಿನ್ನೆ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ನಿಧನರಾದಂತ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ಪಾರ್ಥೀವ ಶರೀರವನ್ನು ತರಲಾಗಿತ್ತು….
ರಿಪ್ಪನ್‌ಪೇಟೆ : ಹಿರಿಯ ಸಾಹಿತಿ ನಾ ಡಿಸೋಜ ಅಂತಿಮ ದರ್ಶನ ಪಡೆದ ಅಭಿಮಾನಿಗಳು
ರಿಪ್ಪನ್‌ಪೇಟೆ : ಭಾನುವಾರ ಅಸ್ತಂಗತರಾದ ನಾಡಿನ ಹೆಸರಾಂತ ಸಾಹಿತಿ ,ಜನಪ್ರಿಯ ಕಾದಂಬರಿಕಾರ ಡಾ.ನಾ ಡಿಸೋಜಾ ಪಾರ್ಥಿವ ಶರೀರವನ್ನು ಪಟ್ಟಣದ ವಿನಾಯಕ ವೃತ್ತದಲ್ಲಿ ಅಭಿಮಾನಿಗಳು, ಹಿತೈಷಿಗಳು, ಅಂತಿಮ ದರ್ಶನ ಪಡೆದರು. ಮಂಗಳೂರಿನಿಂದ ಸಾಗರಕ್ಕೆ ಪ್ರಾರ್ಥೀವ ಶರೀರ ತೆರಳುತಿದ್ದ ಸಂಧರ್ಭದಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ,ಅಭಿಮಾನಿಗಳು ಹಾಗೂ ಹಿತೈಶಿಗಳು ನಾಡಿನ ಹೆಸರಾಂತ ಸಾಹಿತಿಯ ಅಂತಿಮ ದರ್ಶನ ಪಡೆದರು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಹ ಅ ಪಾಟೀಲ್ ನಾ ಡಿಸೋಜ ಹಾಗೂ ರಿಪ್ಪನ್‌ಪೇಟೆ ಪಟ್ಟಣಕ್ಕೂ ಅವಿನಾಭಾವ…