ಭದ್ರಾವತಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 573(91.56) ಅಂಕಗಳನ್ನು ಗಳಿಸಿ ಅದ್ವಿತೀಯ ಸಾಧನೆಗೈದ ಶ್ರೀ ಬಾಲಗಂಗಾಧರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಶಶಾಂಕ್ ರವರಿಗೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹಳೇನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಚನ್ನಕೇಶವ ಮತ್ತು ಲತಾಮಣಿ ದಂಪತಿಗಳ ಪುತ್ರನಾದ ಶಶಾಂಕ್ ರವರು ನ್ಯೂಟೌನ್ ನ ಶ್ರೀ ಬಾಲಗಂಗಾಧರ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು SSLC ಪರೀಕ್ಷೆಯಲ್ಲಿ 91.56% ಅಂಕ ಗಳಿಸುವ ಮೂಲಕ ಶಾಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿದ್ದಾರೆ.
ಗುರುವಾರ ಹಳೇನಗರ ಪೊಲೀಸ್ ಠಾಣೆಯಲ್ಲಿ ಶಶಾಂಕ್ ಮತ್ತು ಕುಟುಂಬದವರಿಗೆ ಪೊಲೀಸ್ ಠಾಣೆ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಹಳೇನಗರ ಪೊಲೀಸ್ ಠಾಣೆ ಪಿಎಸ್ ಐ ಶರಣಪ್ಪ ,ಪಿಎಸ್ ಐ ಶಿವಾನಂದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.