Headlines

ಸಾಗರದ ಮಾಜಿ ಶಾಸಕರ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ|Halappa

ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ ಧರ್ಮಪ್ಪ ರವರ ಆರೋಗ್ಯವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ವಿಚಾರಿಸಿದರು. ಇಂದು ರಾಮಯ್ಯ ಆಸ್ಪತ್ರೆಗೆ ತೆರಳಿ ಮಾಜಿ ಶಾಸಕ ಬಿ ಧರ್ಮಪ್ಪರವ ಆರೋಗ್ಯವನ್ನು ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಮಾಜಿ ಶಾಸಕ ಬಿ ಧರ್ಮಪ್ಪ ರವರು 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎಲ್ ಟಿ ತಿಮ್ಮಪ್ಪ ರವರ ವಿರುದ್ದ 1500 ಮತಗಳ ಅಂತರದಿಂದ ಜಯಗಳಿಸಿದ್ದರು. ಸಾಗರ ತಾಲೂಕಿನ ತಂಗಳವಾಡಿಯ ಬಿ ಧರ್ಮಪ್ಪ…

Read More

ಹುಲ್ಲಿನ ಪಿಂಡಿ ಕಟ್ಟುವ ಯಂತ್ರಕ್ಕೆ ಸಿಲುಕಿ ಯುವಕ ಸಾವು|Grass flour

ಹುಲ್ಲಿನ ಪಿಂಡಿ ಕಟ್ಟುವ ಯಂತ್ರಕ್ಕೆ ಸಿಲುಕಿ ಯುವಕ ಸಾವು ಶಿವಮೊಗ್ಗದ ಬೈಪಾಸ್ ನಲ್ಲಿರುವ ಟೊಯೋಟಾ ಶೋರೂಂ ಹಿಂಭಾಗದಲ್ಲಿನ ಭತ್ತದ ಜಮೀನಿನಲ್ಲಿ ಹುಲ್ಲಿನ ಪಿಂಡಿ ಕಟ್ಟುವ ಮಿಷನ್ ಗೆ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ. ಟೊಯೋಟಾ ಶೋರೂಂ ಹಿಂಭಾಗದ ವಡ್ಡಿನಕೊಪ್ಪದ ಉಜ್ಜಿನಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ತಮಿಳುನಾಡಿನಿಂದ ಬಂದಿದ್ದ ಸೂರ್ಯ ಎಂಬ ಯುವಕ ಹುಲ್ಲಿನ ಪಿಂಡಿ ಕಟ್ಟುವ ಮಿಷಿನ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಹುಲ್ಲಿನ ಪಿಂಡಿ ಕಟ್ಟುವ ಮಿಷನ್ ನೊಂದಿಗೆ ತಮಿಳುನಾಡಿನಿಂದ ಬಂದಿದ್ದ ಸೂರ್ಯ…

Read More

ಅಸ್ಪತ್ರೆಯ ಖರ್ಚಿಲ್ಲ- ಸೂಲಗಿತ್ತಿಯ ಕಾಟವಿಲ್ಲದೇ ಗರ್ಭೀಣಿಯರಿಗೆ ತಕ್ಷಣ ಹೆರಿಗೆ ಮಾಡಿಸುವ ಬೇಹಳ್ಳಿ ಸಂಪರ್ಕ ರಸ್ತೆ|behalli

ಅಸ್ಪತ್ರೆಯ ಖರ್ಚಿಲ್ಲ- ಸೂಲಗಿತ್ತಿಯ ಕಾಟವಿಲ್ಲದೇ ಗರ್ಭೀಣಿಯರಿಗೆ ತಕ್ಷಣ ಹೆರಿಗೆ ಮಾಡಿಸುವ ಬೇಹಳ್ಳಿ ಸಂಪರ್ಕ ರಸ್ತೆ’’ ರಿಪ್ಪನ್‌ಪೇಟೆ : ಆಸ್ಪತ್ರೆಯ ಖರ್ಚಿಲ್ಲ……….ಸೂಲಗಿತ್ತಿಯ ಕಾಟವಿಲ್ಲ……….ಗರ್ಭೀಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೇ ಸಾಕು 24ನೇ ಮೈಲಿಕಲ್ಲಿನಿಂದ ಬೇಹಳ್ಳಿ ಹೋಗುವ ರಸ್ತೆಯಲ್ಲಿ ಹೋದರೆ ಸಾಕು ಹೆರಿಗೆಯಾಗುತ್ತದೆ. ಹೃದಾಯಾಘಾತಕ್ಕೊಳಗಾದವರು ಮಾತ್ರ ಅಸ್ಪತ್ರೆಗೆ ಹೋಗುವ ಮೊದಲೇ ಇಹಲೋಕಕ್ಕೆ ಬೇಗ ಹೋಗಲು ಸಾಕು ಈ ರಸ್ತೆ ಹ್ಯಾಗಿದೇ ನೋಡಿ ಸ್ವಾಮಿ………….! ನಮ್ಮೂರ ರಸ್ತೆ ಎಂದು ಗ್ರಾಮಸ್ಥರುಗಳು ತಮ್ಮ ನೋವನ್ನು ಮಾಧ್ಯಮದವರಲ್ಲಿ ಹಂಚಿಕೊಂಡಿದ್ದು ಹೀಗೆ… ಡಬಲ್ ಇಂಜಿನ್ ಸರ್ಕಾರವಿದ್ದಾಗ ತೀರ್ಥಹಳ್ಳಿ…

Read More

ಸೊಸೆಯಿಂದ ಅತ್ತೆಯ ಚಿನ್ನಾಭರಣ ಮತ್ತು ಹಣ ಕಳುವು – ಇಬ್ಬರ ಬಂಧನ|theft

ಮೇ 13 ರಂದು ಶಿವಮೊಗ್ಗ ನಗರದ ಮಳಲಕೊಪ್ಪದ ಮನೆಯೊಂದರಲ್ಲಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳುವಾಗಿತ್ತು ಈ ಹಿನ್ನಲೆಯಲ್ಲಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮನೆಯ ಸದಸ್ಯೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಹಿನ್ನಲೆ : ಮೇ 13 ರಂದು ಮಳಲಕೊಪ್ಪದ ನಿವಾಸಿ ರೇಣುಕಮ್ಮ ಎಂಬುವರ ಮನೆಯಲ್ಲಿ 90 ಗ್ರಾಂ ಚಿನ್ನಾಭರಣ ಮತ್ತು 14 ಸಾವಿರ ರೂ. ಹಣ ನಗದು ಕಳುವಾಗಿತ್ತು.ಬೀರುವಿನಲ್ಲಿ ಇಟ್ಟ 4 ಲಕ್ಷದ 53 ಸಾವಿರ…

Read More

ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಒಳರೋಗಿ ಆಸ್ಪತ್ರೆ ಆವರಣದಲ್ಲಿ ಸಾವು|meggan

ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ನಡೆದ ಒಂದು ಘಟನೆ ಸದ್ಯ ಎಲ್ಲ ರೋಗಿ, ರೋಗಿಗಳ ಸಂಬಂಧಿಕರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಮೃತಪಟ್ಟಿದ್ದಾನೆ.  ಆಸ್ಪತ್ರೆ ಒಳಗೆ ಮೃತಪಟ್ಟಿದ್ದರೆ ಯಾರಿಗೂ ಅಚ್ಚರಿ ಆಗುತ್ತಿರಲಿಲ್ಲ. ಹೌದು ಇಲ್ಲಿ ಒಳ ರೋಗಿಯು ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿದ್ದಾನೆ. ಹೀಗೆ ಮೃತಪಟ್ಟಿರುವ ವ್ಯಕ್ತಿಯ ಹೆಸರು. ಮಂಜುನಾಥ್(32) ದಾವಣಗೆರೆ ಜಿಲ್ಲೆಯ ಚನ್ನಗರಿ ಪಟ್ಟಣದ ನಿವಾಸಿ.  ಮೇ. 19 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಇತನನ್ನು ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು….

Read More

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ|raksha university

ಶಿವಮೊಗ್ಗ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮತ್ತೊಂದು ಕ್ಯಾಂಪಸ್‌ ಶಿವಮೊಗ್ಗದಲ್ಲಿ ಈ ವರ್ಷದಿಂದ ಆರಂಭವಾಗುತ್ತಿದೆ. ಪೊಲೀಸಿಂಗ್ ಮತ್ತು ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡುವ ವಿಷಯಗಳನ್ನು ಈ ವಿಶ್ವವಿದ್ಯಾಲಯ ಒಳಗೊಂಡಿದ್ದು, ವಿವಿಧ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ವಿವಿಯ ಶಿವಮೊಗ್ಗ ಕ್ಯಾಂಪಸ್‌ನ ಕ್ರಿಮಿನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಶ್ರೀ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಯ ಕಟ್ಟಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಆರಂಭಿಸಲಾಗುತ್ತಿದೆ. ಈಗಾಗಲೇ…

Read More

ರಿಪ್ಪನ್‌ಪೇಟೆ ನಾಡಕಛೇರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ|beluru

“ಶಾಸಕ ಗೋಪಾಲಕೃಷ್ಣ ಬೇಳೂರು ನಾಡಕಛೇರಿ ದಿಢೀರ್ ಭೇಟಿ’’ ರಿಪ್ಪನ್‌ಪೇಟೆ;-ಕೆರೆಹಳ್ಳಿ ಹೋಬಳಿ ಕಛೇರಿಗೆ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಯಕ್ಕೆ ಸರಿಯಾಗಿ ಕಛೇರಿಗೆ ಅಧಿಕಾರಿಗಳು ಬರುತ್ತಿಲ್ಲ ಮತ್ತು ಗ್ರಾಮ ಸಹಾಯಕ ಪ್ರವೀಣ್ ಎಂಬಾತನ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ ಎಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ ಉಪತಹಶೀಲ್ದಾರ್ ಊಟಕ್ಕೆ ಹೋಗಿದ್ದಾನೆ ಬಂದಿಲ್ಲ ಎಂಬ ಉತ್ತರ ನಿಮ್ಮ ಊಟದ ಸಮಯ ಎಷ್ಟು ಈಗ ಎಷ್ಟು ಸಮಯ ಎಂದಾಗ ಗ್ರಾಮ ಲೆಕ್ಕಾಧಿಕಾರಿ ಹೊಸನಗರಕ್ಕೆ ಮುಟೇಷನ್ ದಾಖಲೆ ತರಲು…

Read More

ಗೆಳತಿಗೆ ಬೈಕ್‌ನಲ್ಲಿ ಡ್ರಾಪ್ ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ|moral police

ಶಿವಮೊಗ್ಗ: ಮುಸ್ಲಿಂ ಯುವತಿಯನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ನಗರದ ಹಿಂದೂ ಯುವಕ ಹಾಗೂ ಖಲಂದರ್ ನಗರದ ಮುಸ್ಲಿಂ ಯುವತಿ ಇಬ್ಬರೂ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಮುಸ್ಲಿಂ ವಿದ್ಯಾರ್ಥಿನಿಯ ಸಹೋದರಿಗೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ವಿಷಯ ತಿಳಿದ ನಂತರ ಆಕೆ ತನ್ನ ಸಹಪಾಠಿ ಹಿಂದೂ ಯುವಕನಿಂದ ಬೈಕ್‌ನಲ್ಲಿ ತನ್ನ ಮನೆಗೆ ಡ್ರಾಪ್ ಪಡೆದಿದ್ದಳು. ಡ್ರಾಪ್ ನೀಡಿ…

Read More

ಸಿಡಿಲು ಬಡಿದು ಮಹಿಳೆ ಸಾವು|lightning

ಜಿಲ್ಲೆಯಲ್ಲಿ ಇಂದು ಸಂಜೆ ಗುಡುಗು ಸಹಿತ ಭಾರೀ ಮಳೆಯಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಿವಮೊಗ್ಗ ನಗರದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗ ನಗರದ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ವಾಸಿಸುತ್ತಿದ್ದಂತ ಲಕ್ಷ್ಮೀಬಾಯಿ(28) ಎಂಬುವರು ಇಂದು ಕುರಿಗಳಿಗೆ ಮೇವು ತರಲು ಹೋಗಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಮರಗಳು ಬಿದ್ದು ರಸ್ತೆ ಸಂಚಾರ ಕೂಡ ಬಂದ್ ಆಗಿರುವಂತ ಘಟನೆ ನಡೆದಿದೆ. ಈ ವಿಷಯ ತಿಳಿದಂತ ವಿನೋಬ ನಗರ…

Read More

ಮೇ.31ರಂದು ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಮೇಳ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ-31 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪೆÇ್ಲಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ….

Read More