ರಿಪ್ಪನ್‌ಪೇಟೆ : ಜ್ಯೋತಿ ಮಾಂಗಲ್ಯ ಮಂದಿರದ ಭೂಪರಿವರ್ತನೆ ಆದೇಶ ರದ್ದುಗೊಳಿಸಿದ ಜಿಲ್ಲಾಧಿಕಾರಿ|Jyothi mangalya

ರಿಪ್ಪನ್‌ಪೇಟೆ : ಜ್ಯೋತಿಮಾಂಗಲ್ಯ ಮಂದಿರದ ಭೂಪರಿವರ್ತನೆ ಆದೇಶ ರದುಗೊಳಿಸಿದ್ದ ಜಿಲ್ಲಾಧಿಕಾರಿ ರಿಪ್ಪನ್‌ಪೇಟೆ : ಪಟ್ಟಣದ ಹೆಸರಾಂತ ಕಲ್ಯಾಣ ಮಂದಿರಗಳಲ್ಲಿ‌ ಒಂದಾದ ಜ್ಯೋತಿ ಮಾಂಗಲ್ಯ ಮಂದಿರದ ಭೂ ಪರಿವರ್ತನೆ ಆದೇಶವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಲ್ಲಿನ ಬರುವೆ ಗ್ರಾಮದ ಸರ್ವೆ ನಂಬರ್ 63/1ಬಿ ರಲ್ಲಿ 0-38 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಕೊಂಡು ಭೂಪರಿವರ್ತನೆಯ ಷರತ್ತು ಉಲ್ಲಂಘನೆ ಮಾಡಿಕೊಳ್ಳುವುದರೊಂದಿಗೆ ಆ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜಾಗದಲ್ಲಿ ಕಲ್ಯಾಣ ಮಂದಿರವನ್ನು ನಿರ್ಮಿಸಿರುವುದನ್ನು…

Read More

ಕಿಮ್ಮನೆ ರತ್ನಾಕರ್ ಗೆ ಪತ್ರ ಬರೆದ ಉಪ ಮುಖ್ಯಮಂತ್ರಿ ಡಿಕೆಶಿ|Congress

ಕಿಮ್ಮನೆ ರತ್ನಾಕರ್ ಗೆ ಪತ್ರ ಬರೆದ ಉಪ ಮುಖ್ಯಮಂತ್ರಿ ಡಿಕೆಶಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಿತಗೊಂಡ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪತ್ರ ಬತೆದಿದ್ದಾರೆ. ಡಿಕೆಶಿ ವಕುಮಾರ್ ರಿಂದ ಕಿಮ್ಮನೆ ರತ್ನಾಕರ್ ಗೆ ಪತ್ರದ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ ಡಿಕೆಶಿ ಪರಾಜಿತರಾದರು ಪಕ್ಷಕ್ಕಾಗಿ ಉತ್ತಮ ಕೆಲಸ ನಿರ್ವಹಿಸಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.   ಮುಂಬರುವ ದಿನಗಳಲ್ಲಿ ಎದುರಾಗುವ ಲೋಕಸಭಾ…

Read More

ರಿಪ್ಪನ್‌ಪೇಟೆ : ಗ್ರಾಪಂ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ತೆರೆದ ಬಾವಿಗೆ ಬಿದ್ದ ಹಸು – ಸ್ಥಳೀಯರಿಂದ ರಕ್ಷಣೆ|Rpet

ರಿಪ್ಪನ್‌ಪೇಟೆ : ಗ್ರಾಪಂ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದ ತೆರೆದ ಬಾವಿಗೆ ಬಿದ್ದ ಹಸು ರಿಪ್ಪನ್‌ಪೇಟೆ : ಗ್ರಾಪಂ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಹಸುವೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಚೌಡೇಶ್ವರಿ ಬಡಾವಣೆಯಲ್ಲಿ ನಡೆದಿದೆ. ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಸಭಾ ಭವನದ ಮುಂಭಾಗದಲ್ಲಿ ಗ್ರಾಪಂ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಚೌಡೇಶ್ವರಿ ಬೀದಿಯ ಅಂಬೇಡ್ಕರ್ ಸಭಾ ಭವನದ ಮುಂಭಾಗದಲ್ಲಿ ತೆರೆದ ಪ್ರದೇಶದಲ್ಲಿ ಬಾವಿ ನಿರ್ಮಿಸುವಾಗ…

Read More

ಹೊಸನಗರ ಮತ್ತು ಸಾಗರದಲ್ಲಿ ಕೃಷಿಕರ ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್” ಸಂಸ್ಥೆಯ ನೂತನ ಶಾಖೆ ಪ್ರಾರಂಭ|easy life

ಮಲೆನಾಡಿನ ಕೃಷಿಕರ ಮೊಗದಲ್ಲಿ ಮಂದಹಾಸ ಬೀರುವಂತಹ ಸೇವೆ ನೀಡಿಕೊಂಡು ಕೃಷಿಕ ಮಿತ್ರರ ನಂಬಿಕೆ, ಪ್ರೀತಿ, ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್ “ ಸಂಸ್ಥೆಯ ನೂತನ ಶಾಖೆಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಪ್ರಾರಂಭಿಸಲಾಗಿದೆ. ಹೊಸನಗರ ಪಟ್ಟಣದ ಕೊಡಚಾದ್ರಿ ಕಾಲೇಜು ಎದುರು ನೂತನ ಶಾಖೆ ದಿನಾಂಕ 22-05-23 ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಂಡಿದೆ. ಕಾರ್ಯಕ್ರಮದಲ್ಲಿ ಹೊಸನಗರ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕರಿ ಬಸವಯ್ಯ ಉಪಸ್ಥಿತರಿದ್ದರು.  ಅದೇ ದಿನ ಸಂಜೆ 4 ಗಂಟೆಗೆ ಸಾಗರದಲ್ಲಿ ಮತ್ತ್ತೊಂದು ನೂತನ ಶಾಖೆ ಶುಭಾರಂಭ ಗೊಂಡಿದ್ದು,…

Read More

ರಿಪ್ಪನ್‌ಪೇಟೆ : ನಾಪತ್ತೆಯಾಗಿದ್ದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ|missing

ರಿಪ್ಪನ್‌ಪೇಟೆ : ಕಳೆದ ಏಳು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಹಳ್ಳಿ ಗ್ರಾಮದ ಕೃಷಿಕ ವೀರಪ್ಪ(62) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಏಳು ದಿನಗಳಿಂದ ಕಾಣೆಯಾಗಿದ್ದ ವೀರಪ್ಪ ರವರನ್ನು ಕುಟುಂಬಸ್ಥರು ಎಲಾ ಕಡೆ ಹುಡುಕಾಡಿದ್ದಾರೆ ನಂತರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ಕೂಡಾ ದಾಖಲಿಸಿದ್ದರು. ಇಂದು ವೀರಪ್ಪ ರವರ ಮನೆ ಹಿಂಭಾಗ ದಟ್ಟ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ…

Read More

ರಿಪ್ಪನ್‌ಪೇಟೆ : ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿ ವಶಕ್ಕೆ|Illegal quarrying

ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿ ವಶಕ್ಕೆ ರಿಪ್ಪನ್‌ಪೇಟೆ : ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. ಹೊಸನಗರ ಮತ್ತು ರಿಪ್ಪನ್‌ಪೇಟೆ ರಾಜ್ಯ ಹೆದ್ದಾರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತಿದ್ದಾಗ ಚಿಕ್ಕಜೇನಿ ಸಮೀಪದಲ್ಲಿ ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಲಾರಿಯನ್ನು ಹೆಚ್ಚಿನ ತನಿಖೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Read More

ಎರಡು ಕಾರುಗಳ ನಡುವೆ ಅಪಘಾತ – ದುಬಾರಿ ಕಾರುಗಳು ಜಖಂ|Accident

ತೀರ್ಥಹಳ್ಳಿ : ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಘಟನೆ ಸಕ್ರೆಬೈಲ್​ ಬಳಿಯಲ್ಲಿ ನಡೆದಿದೆ.  ಶಿವಮೊಗ್ಗ-ತೀರ್ಥಹಳ್ಳಿ ಹೆದ್ಧಾರಿಯಲ್ಲಿ ನಡೆದ ಘಟನೆಯಲ್ಲಿ, ಯಾರಿಗೂ ಅಪಾಯ ಸಂಭವಿಸಿಲ್ಲ. ಫೋರ್ಡ್​ ಇಕೋ ಹಾಗೂ ಕಿಯಾ ಕಾರು  ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳ ಒಂದೊಂದು ಬದಿಗೆ ಹೋಗಿ ನಿಂತಿವೆ.  ಘಟನೆ ಬೆನ್ನಲ್ಲೆ ಸ್ಥಳೀಯರು ಬಂದು ಕಾರಿನಲ್ಲಿದ್ದವರಿಗೆ ಆರೈಕೆ ಮಾಡಿದ್ಧಾರೆ.

Read More

ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ – 6 ಯುವತಿಯರ ರಕ್ಷಣೆ, ದಂಪತಿ ಬಂಧನ

ಶಿವಮೊಗ್ಗ : ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಸಲೂನ್ ಮಾಲೀಕರನ್ನು ಬಂಧಿಸಿ, 6 ಜನ ಮಹಿಳೆಯರನ್ನು ಮಹಿಳಾ ಪೊಲೀಸರು ರಕ್ಷಿಸಿ, ದಂಧೆ ನಡೆಸುತ್ತಿದ್ದ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ನಗರದ ಕುವೆಂಪು ರಸ್ತೆಯ ಸಾಯಿ ಆರ್ಕೇಡ್ ಕಟ್ಟಡದ ರಾಯಲ್ ಆರ್ಚ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾನಲ್ಲಿ ಸ್ಪಾ ಹೆಸರಿನಲ್ಲಿ ಮಹಿಳೆಯನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಮಹಿಳಾ ಪೊಲೀಸರು ದಾಳಿ‌ ನಡೆಸಿದ್ದಾರೆ. ದಾಳಿಯ ವೇಳೆ ಸ್ಪಾ ನಲ್ಲಿ 6 ಜನ ಯುವತಿಯರನ್ನು…

Read More

ರಿಪ್ಪನ್‌ಪೇಟೆ : ವಿರೋದದ ನಡುವೆಯೂ ರಾತ್ರೋರಾತ್ರಿ ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಹುನ್ನಾರ|BAR

ರಿಪ್ಪನ್‌ಪೇಟೆ : ವಿರೋದದ ನಡುವೆಯೂ ರಾತ್ರೋರಾತ್ರಿ ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಹುನ್ನಾರ ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಲಾಡ್ಜ್ ವೊಂದರಲ್ಲಿ ವಿರೋಧದ ನಡುವೆಯೂ ಬಾರ್ ತೆರೆಯಲು ಹುನ್ನಾರ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜನವರಿ 30 ರಂದು ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿಗಳು ಏಕಾಏಕಿ ಮದ್ಯದಂಗಡಿಗೆ ಪರವಾನಿಗೆ ನೀಡುವ ಹುನ್ನಾರದಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಜುಮ್ಮಾ ಮಸೀದಿಗೂ ರಾಯಲ್ ಕಂಫರ್ಟ್ ಕಟ್ಟಡಕ್ಕೂ ಕೇವಲ 60 ಮೀಟರ್ ಅಂತರದಲ್ಲಿದ್ದರೂ ಅಬಕಾರಿ…

Read More

ಸ್ನೇಹಿತನೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ಸಾವು|Death by drowning

ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರುಪಾಲದ ಘಟನೆ ಇಂದು ಸಂಜೆ ವೇಳೆ ನೆಡೆದಿದೆ. ಪಟ್ಟಣದ ಛತ್ರಕೇರಿ ಹತ್ತಿರದ ಜಯಲಕ್ಷ್ಮಿ ಸಾಮಿಲ್ ಬಳಿ ನದಿಯಲ್ಲಿ ಈಜಲು ಹೋಗಿದ್ದ ಅಶ್ವಥ್ (16 ವರ್ಷ) ಸಾವನ್ನಪ್ಪಿದ್ದಾನೆ. ತನ್ನ ಸ್ನೇಹಿತನ ಜೊತೆ ಸಂಜೆ ವೇಳೆ ಈಜಲು ತೆರಳಿದಾಗ ಈ ಘಟನೆ ಜರುಗಿದೆ. ಅಗ್ನಿಶಾಮಕದಳ ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.  ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More