ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರುಪಾಲದ ಘಟನೆ ಇಂದು ಸಂಜೆ ವೇಳೆ ನೆಡೆದಿದೆ.
ಪಟ್ಟಣದ ಛತ್ರಕೇರಿ ಹತ್ತಿರದ ಜಯಲಕ್ಷ್ಮಿ ಸಾಮಿಲ್ ಬಳಿ ನದಿಯಲ್ಲಿ ಈಜಲು ಹೋಗಿದ್ದ ಅಶ್ವಥ್ (16 ವರ್ಷ) ಸಾವನ್ನಪ್ಪಿದ್ದಾನೆ.
ತನ್ನ ಸ್ನೇಹಿತನ ಜೊತೆ ಸಂಜೆ ವೇಳೆ ಈಜಲು ತೆರಳಿದಾಗ ಈ ಘಟನೆ ಜರುಗಿದೆ. ಅಗ್ನಿಶಾಮಕದಳ ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.