ಮಲೆನಾಡಿನ ಕೃಷಿಕರ ಮೊಗದಲ್ಲಿ ಮಂದಹಾಸ ಬೀರುವಂತಹ ಸೇವೆ ನೀಡಿಕೊಂಡು ಕೃಷಿಕ ಮಿತ್ರರ ನಂಬಿಕೆ, ಪ್ರೀತಿ, ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್ “ ಸಂಸ್ಥೆಯ ನೂತನ ಶಾಖೆಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಪ್ರಾರಂಭಿಸಲಾಗಿದೆ.
ಹೊಸನಗರ ಪಟ್ಟಣದ ಕೊಡಚಾದ್ರಿ ಕಾಲೇಜು ಎದುರು ನೂತನ ಶಾಖೆ ದಿನಾಂಕ 22-05-23 ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಂಡಿದೆ.
ಕಾರ್ಯಕ್ರಮದಲ್ಲಿ ಹೊಸನಗರ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕರಿ ಬಸವಯ್ಯ ಉಪಸ್ಥಿತರಿದ್ದರು.
ಅದೇ ದಿನ ಸಂಜೆ 4 ಗಂಟೆಗೆ ಸಾಗರದಲ್ಲಿ ಮತ್ತ್ತೊಂದು ನೂತನ ಶಾಖೆ ಶುಭಾರಂಭ ಗೊಂಡಿದ್ದು, ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ ಹೆಗ್ಡೆ , ಹಾಗೂ ಈಸೀ ಲೈಫ್ ಸಂಸ್ಥೆಯ ಮಾಲೀಕರಾದ ಗೋವಿಂದರಾಜ್ ಕಲಾಯಿ, ರವಿ ಕಲಾಯಿ, ಮ್ಯಾನೇಜರ್ ಕಾರ್ತಿಕ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ ಹೆಗ್ಡೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇದೀಗ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಜಿಲ್ಲಾದ್ಯಂತ ಗ್ರಾಹಕರ ಸೇವೆಗೆ ಈಸೀ ಲೈಫ್ ಸನ್ನದ್ಧವಾಗಿದೆ.
ಇಲ್ಲಿ ಕೃಷಿಕರಿಗೆ ಬೇಕಾದ ಎಲ್ಲಾ ರೀತಿಯ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯವಿದೆ.ಯಾವುದೇ ಕಂಪೆನಿಯ ಎಲ್ಲಾ ರೀತಿಯ ಕೃಷಿ ಯಂತ್ರೋಪಕರಣಗಳನ್ನು ರಿಪೇರಿ ಕೂಡಾ ಮಾಡಿ ಕೊಡಲಾಗುವುದು.