Headlines

ನಗರ : ಇತಿಹಾಸ ಪ್ರಸಿದ್ಧ ದರ್ಗಾ ಉರೂಸ್ ಗೆ ಚಾಲನೆ|Nagara

ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಅಕ್ಬರ್ ಅನ್ವರ್ ಮಾಷೂಂಷಾ ವಲಿಯುಲ್ಲಾ ದರ್ಗಾ ಇದರ ಉರೂಸ್‌ಗೆ ಚಾಲನೆ ನೀಡಲಾಗಿದೆ. ಸರ್ವ ಧರ್ಮಿಯರ ಪವಿತ್ರ ಕ್ಷೇತ್ರ ಬಿದನೂರು ನಗರ ದರ್ಗ ರಾಜ್ಯದ ಪ್ರಮುಖ ಪವಾಡ ಕ್ಷೇತ್ರಗಳ ಸಾಲಿನಲ್ಲಿ ಸೇರಿಕೊಂಡಿದ್ದು ಹಝರತ್ ಶೈಖುಲ್ ಇಕ್ಟರ್‌ ಅನ್ವರ್‌ ಮಾಸುಂಷಾ ವಯುಲ್ಲಾಹಿರವರ 49ನೇ ಉರೂಸ್ ಸಮಾರಂಭವನ್ನು ವಿಶೇಷ ವಾಗಿ ಆಚರಿಸಲಾಗುತ್ತದೆ ಎಂದು ದರ್ಗಾ ಕಮಿಟಿ ಉಪಾಧ್ಯಕ್ಷ ಆರ್ ಎ ಚಾಬುಸಾಬ್ ತಿಳಿಸಿದ್ದಾರೆ. ಇದೇ ಸಂಧರ್ಭದಲ್ಲಿ ದರ್ಗಾ ಕಮಿಟಿಯ…

Read More

ನೂತನ ಸರ್ಕಾರದ ಪದಗ್ರಹಣ – ಗ್ಯಾರಂಟಿ ಕಾರ್ಡ್ ಯೋಜನೆಗೆ ಸಂಪುಟ ಸಭೆಯ ತಾತ್ವಿಕ ಒಪ್ಪಿಗೆ ಹಿನ್ನಲೆಯಲ್ಲಿ ಸಂಭ್ರಮಾಚರಣೆ|congress

ರಿಪ್ಪನ್‌ಪೇಟೆ : ನೂತನ ಕಾಂಗ್ರೆಸ್ ಸರ್ಕಾರದ ಪದಗ್ರಹಣ ಹಾಗೂ ಮುಖ್ಯಮಂತ್ರಿಯಾಗಿ ಎಸ್. ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮತ್ತು ಗ್ಯಾರಂಟಿ ಕಾರ್ಡ್ ಯೋಜನೆಗೆ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟ್ಟಣದ ವಿನಾಯಕ ವೃತ್ತದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ನೂತನ ಸರ್ಕಾರ ಅಸ್ತಿತ್ವಕ್ಕೆ ಹಾಗೂ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ನೂತನ ಸಂಪುಟ ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ…

Read More

ಅಕ್ರಮ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ|encroachment

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಸರ್ವೆ ನಂಬರ್ 85 ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 2.5 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಲಾಯಿತು. ಮಳವಳ್ಳಿ ಗ್ರಾಮದ ಶ್ರೀಧರ ಬಿನ್ ತಿಮ್ಮನಾಯ್ಕ ಸರ್ವೆ ನಂ 85 ರಲ್ಲಿ ಸುಮಾರು ಎರಡೂವರೆ ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಅಡಿಕೆ ಸಸಿಗಳನ್ನು ನೆಡಲು ತಯಾರಿ ನಡೆಸಿದ್ದರು. ಇಂದು ಕೆರೆಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕರಾದ ಸೈಯದ್ ಅಪ್ರೋಜ್ ಅಹಮದ್ ರವರ ನೇತೃತ್ವದಲ್ಲಿ…

Read More

KSRTC ಬಸ್ ನಲ್ಲಿದ್ದ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸಿದ ಚಾಲಕ – ಪ್ರಯಾಣಿಕರ ಆಕ್ರೋಶ

ತಾಂತ್ರಿಕ ದೋಷದಿಂದ ಕೆಎಸ್‌ಆರ್‌ಟಿಸಿ ಬಸ್‌ ಕೆಟ್ಟು ನಿಂತು, ಪ್ರಯಾಣಿಕರು ಸುಮಾರು ಮೂರು ಗಂಟೆ ಪರದಾಡುವಂತಾಯಿತು. ಸಾಗರ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಪರ್ಯಾಯ ಬಸ್‌ ವ್ಯವಸ್ಥೆ ಮಾಡದ್ದಕ್ಕೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕಿದರು. ಶಿವಮೊಗ್ಗ – ಸಾಗರ – ಕಾರವಾರ ಮಾರ್ಗದ ಕೆಎಸ್‌ಅರ್‌ಟಿಸಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸಾಗರ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸನ್ನು ರಿಪೇರಿಗೆ ಕೊಂಡೊಯ್ಯಲಾಯಿತು. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಆ ಬಸ್ಸಿನಲ್ಲಿದ್ದರು. ಬೆಳಗ್ಗೆ 10.30ರ ಹೊತ್ತಿಗೆ ಸಾಗರ…

Read More

ಪತಿಯ ಅತಿಯಾದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.!!kuruvalli

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿಯ ಸಮೀಪ ಕೆರೆಗೆ ಹಾರಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಶೃತಿ (36) ಎಂಬ ಯುವತಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ತಿಳಿದುಬಂದಿದೆ. ಈಕೆ ಕುರುವಳ್ಳಿಯಲ್ಲಿ ಪುಟ್ಟದೊಂದು ಮನೆ ಮಾಡಿಕೊಂಡಿದ್ದು, ಈಕೆಗೆ ನಾಲ್ಕು ಮಂದಿ ಅವಳಿ ಜವಳಿ ಮಕ್ಕಳು ಇವೆ. ಪತಿಯ ಅತಿಯಾದ ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಶೃತಿ ಧರ್ಮಸ್ಥಳ ಸಂಘದ ಕಾರ್ಯಕರ್ತೆಯಾಗಿ ಮುತ್ತೂರು ಹೋಬಳಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಅತ್ಯಂತ…

Read More

ಚಲಾವಣೆಯಿಂದ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆದ RBI

ನೋಟು ಅಮಾನ್ಯೀಕರಣದ ನಂತ್ರ ಹೊಸ ನೋಟುಗಳಾಗಿ 2000 ರೂ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಪರಿಚಯಿಸಿತ್ತು. ಇದೀಗ ಚಲಾವಣೆಯಿಂದ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ ಬಿ ಐ ನಿರ್ಧಾರ ಕೈಗೊಂಡಿದೆ. ಚಲಾವಣೆಯಿಂದ 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ಬಿಐ ನಿರ್ಧಾರ ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ ಎಂದು ತಿಳಿಸಿದೆ.

Read More

ಹೊಸನಗರ : ಮೇಯಲು ಹೋದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು – ದೂರು ದಾಖಲು|hosanagara

ಹೊಸನಗರ ತಾಲೂಕಿನ ನಿಟ್ಟೂರಿನ ಗೌರಿಕೆರೆ  ಬಳಿಯಲ್ಲಿ ಹಸುವೊಂದರ ಕಾಲನ್ನು ಕಡಿದು ಹಾಕಿರುವ ಬಗ್ಗೆ ವರದಿಯಾಗಿದೆ.  ದುಷ್ಕರ್ಮಿಗಳ ಕೃತ್ಯ ಇದಾಗಿದ್ದು, ಸಿಡ್ಲಕುಣಿ ಸುಭಾಷ್ ಎಂಬುವವರಿಗೆ ಸೇರಿದ ಹಸುವು ಕಾಲಿಗೆ ಕತ್ತಿಯಿಂದ ಏಟು ತಿಂದು ನಡೆಯಲಾಗದೇ ನರಳಾಡುತ್ತಿದೆ. ಘಟನೆಯಲ್ಲಿ ಕಾಲಿನ ನರ ಕಟ್ ಆಗಿದ್ದರಿಂದ ದನ ನೆಲದಿಂದ ಏಳುತ್ತಿಲ್ಲ.  ಮಲೆನಾಡಲ್ಲಿ ರಾಸುಗಳನ್ನ ಬೆಳಗ್ಗೆ ಹೊರಗೆ ಅಟ್ಟಲಾಗುತ್ತದೆ. ಅವುಗಳು ಮೇವು ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತವೆ.ಸಂಜೆಯಾದರು ಹಸು ಹಟ್ಟಿಗೆ ವಾಪಾಸು ಬರದ ಹಿನ್ನೆಲೆಯಲ್ಲಿ ಸುಭಾಷ್​ರವರು ಅದನ್ನು ಹುಡುಕಿಕೊಂಡು ಹೋಗಿದ್ದಾರೆ. ಈ…

Read More

ಕಾರು ಡಿಕ್ಕಿಯಾಗಿ ಪಾದಚಾರಿ ಸಾವು – ಚಾಲಕ ಪರಾರಿ|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಶಿವಕುಮಾರ್ (56) ಮೃತ ದುರ್ದೈವಿ. ಪೊಲೀಸರು ಹಿಟ್ ಅಂಡ್ ರನ್‌ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶಿವಕುಮಾರ್‌ ಅವರು ಆನಂದಪುರದಿಂದ ಹೊರಟು ಯಡೆಹಳ್ಳಿಯ ಪೆಟ್ರೋಲ್ ಬಂಕ್‌ನಿಂದ ಸ್ವಲ್ಪವೇ ದೂರದಲ್ಲಿದ್ದ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಶಿವಕುಮಾರ್‌ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಗಾಯಗೊಂಡಿದ್ದ ಶಿವಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು….

Read More

ರಾತ್ರಿ ಅಡಿಗೆ ಯಾಕೆ ಮಾಡಲಿಲ್ಲವೆಂದು ಇಬ್ಬರಿಂದ ಹಲ್ಲೆ – ಕುಪಿತಗೊಂಡ ಅಡಿಗೆಯವ ಮಧ್ಯರಾತ್ರಿ ಇಬ್ಬರ ತಲೆ ಒಡೆದು ಕೊಂದೇ ಬಿಟ್ಟ!!!!!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ ಜೋಡಿ‌ ಕೊಲೆಯಾಗಿದ್ದು ಹಣಕ್ಕಾಗಿ ಕೊಲೆಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಘಟನೆ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೀಡಿದ ಮಾಹಿತಿ ಅಚ್ಚರಿಗೆ ಕಾರಣವಾಗಿದೆ ಮಧ್ಯಾಹ್ನದ ಅಡಿಗೆಯನ್ನು ಸಂಜೆ ನೀಡಿದ್ದಕ್ಕೆ ರಾಜಣ್ಣ ಎಂಬಾತನಿಗೆ ಇಬ್ಬರು ವ್ಯಕ್ತಿಗಳು ಮನಸ್ಸೊ ಇಚ್ಚೆ ಥಳಿಸಿದ್ದಾರೆ ಇದರಿಂದ ಕುಪಿತಗೊಂಡ ಆರೋಪಿ ರಾಜಣ್ಣ ಮಧ್ಯರಾತ್ರಿ ಹಲ್ಲೆ ಮಾಡಿದ್ದ ಇಬ್ಬರನ್ನು ಅಮಾನುಷವಾಗಿ ಹತ್ಯೆಗೈದಿದ್ದಾನೆ. ಘಟನೆಯ ವಿವರ :  ತೀರ್ಥಹಳ್ಳಿಯ ವಿಶ್ವಕರ್ಮ ಭವನ ನಿರ್ಮಾಣ…

Read More

ತೀರ್ಥಹಳ್ಳಿಯಲ್ಲಿ ಜೋಡಿ ಕೊಲೆ – ಓರ್ವನ ಬಂಧನ|murder

ತೀರ್ಥಹಳ್ಳಿ ತಾಲ್ಲೂಕಿನ, ಕುರುವಳ್ಳಿ ಪುತ್ತಿಗೆ ಮಠದ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ಧಾರೆ.  ಮೂಲಗಳ ಪ್ರಕಾರ, ಕೊಲೆಯಾದವರು ದಾವಣಗೆರೆ ಜಿಲ್ಲೆ ಕಾರ್ಮಿಕರು ಎನ್ನಲಾಗಿದೆ.   ನಿನ್ನೆ ರಾತ್ರಿ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು,   ಕೆಲವೇ ದಿನದಲ್ಲಿ ಸಮುದಾಯ ಭವನ ಉದ್ಘಾಟನೆಯಾಗಬೇಕಿದ್ದು, ಅದರ ನಡುವೆ ಸಮುದಾಯದ ಭವನದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ  ಕುಡಿದ ಮತ್ತಿನಲ್ಲಿ ಮೂವರು ಕಾರ್ಮಿಕರ…

Read More