Headlines

ನಾಳೆ ನೂತನ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಂದ ಮೊದಲ ಪ್ರಗತಿ ಪರಿಶೀಲನಾ ಸಭೆ|Beluru

ಸಾಗರ-ಹೊಸನಗರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಗೋಪಾಲಕೃಷ್ಣ ಬೇಳೂರು ರವರ ನೇತೃತ್ವದಲ್ಲಿ ನಾಳೆ(ಗುರುವಾರ) ತಾಲ್ಲೂಕಿನ ತಮ್ಮ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿದೆ. ಈ ಬಗ್ಗೆ ಸಾಗರ ತಾಲೂಕು ಪಂಚಾಯತ್ ಕಾರ್ಯಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಾಗರದ ಬಿಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರವರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ತಮ್ಮ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮೊದಲ ಪ್ರಗತಿ ಪರಿಶೀಲನಾ…

Read More

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆರ್ ಎಂ ಮಂಜುನಾಥ್ ಗೌಡ|RMM

ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮುಂದುವರಿಯುವಂತೆ ರಾಜ್ಯ ರಿಜಿಸ್ಟರ್ ಕೋರ್ಟ್ ಹೈ ಕೋರ್ಟ್ ಅದೇಶಿಸಿದೆ.  ಈ ಮೂಲಕ ಸಹಕಾರಿ ನಾಯಕ ಆರ್. ಎಂ. ಮಂಜುನಾಥ ಗೌಡ ಮತ್ತೆ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಅನರ್ಹತೆ ಅನ್ಯಾಯ ವಿರುದ್ಧ ಕಾನೂನು ಹೋರಾಟ ಮುಂದುವರಿಸಿದ್ದ ಮಂಜುನಾಥ ಗೌಡರಿಗೆ ಇದೀಗ ನ್ಯಾಯ ಸಿಕ್ಕಿದೆ.  2020ರಲ್ಲಿ ಚುನಾವಣೆ ನಡೆದು 2025ರವರೆಗೆ ಸೇವಾ ಅವಧಿ ಇತ್ತು. ರಾಜಕೀಯ ದುರುದ್ದೇಶದಿಂದ ಮಾಡಿರುವ ಅನ್ಯಾಯಕ್ಕೆ ಈಗ ಜಯ ಸಿಕ್ಕಿದೆ.ಮುಂದೆ ಕೋರ್ಟ್ ಆದೇಶದಂತೆ ಸೇವೆ ಸಲ್ಲಿಸುತ್ತೇನೆ. ಸಹಕಾರ…

Read More

ಮಲಗಿದ್ದಾಗ ಹಾವು ಕಚ್ಚಿದೆ ಎಂದರು ಎಚ್ಚೆತ್ತುಕೊಳ್ಳದ ಪೋಷಕರು – ಪಿಯುಸಿ ವಿದ್ಯಾರ್ಥಿನಿ ಸಾವು|Snake bite

ಸೊರಬ : ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮಲಗಿದ್ದಾಗ ದಿಡೀರನೇ ಎದ್ದು ಕೂತು ನನಗೆ ಹಾವು ಕಚ್ಚಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದರೆ, ಕರೆಂಟ್‌ ಹಾಕಿ ನೋಡಿದಾಗ ಹಾವು ಕಾಣದ ಹಿನ್ನೆಲೆಯಲ್ಲಿ ಮನೆಯವರು ಆಸ್ಪತ್ರೆಗೆ ಕರೆದೊಯ್ಯದೇ ಬೈದು ಮಲಗಿದ್ದರು. ಆದರೆ, ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವಿಷ ದೇಹದ ತುಂಬಾ ಹರಡಿಕೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಇನ್ನು ಮೃತ ಯುವತಿಯನ್ನು ಅಕ್ಷತಾ ( 17) ಎಂದು ಗುರುತಿಸಲಾಗಿದೆ. ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ…

Read More

ಸಹೋದರಿಯರ ಮಕ್ಕಳ ಜೊತೆ ಯುವಕ ನೀರುಪಾಲು|Water disaster

ಈಜಲು ನೀರಿಗಿಳಿದಿದ್ದ ವೇಳೆ ಭದ್ರಾ ಚಾನಲ್​ನಲ್ಲಿ ಕೊಚ್ಚಿಕೊಂಡು ಹೋಗಿದ್ದ ಮೂವರ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಬೆಳಗ್ಗೆ ಅನನ್ಯ ಎಂಬಾಕೆಯ ಶವ ಪತ್ತೆಯಾಗಿತ್ತು.ಬಳಿಕ ರವಿ ಎಂಬವರ ಶವ ಪತ್ತೆಯಾಗಿದೆ.  ನೀರಿನಲ್ಲಿ ಆಟವಾಡುವಾಗ ಕಾಲು ಜಾರಿ ಲಕ್ಕವಳ್ಳಿ ಡ್ಯಾಮ್ ಸಮೀಪದ ಭದ್ರಾ ಕಾಲುವೆಯಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ಧರು.  ಮೃತರನ್ನು ಲಕ್ಕವಳ್ಳಿ ಮೂಲದ ರವಿ (31), ಶಿವಮೊಗ್ಗ ಮೂಲದ ಹದಿನಾರು ವರ್ಷದ ಅನನ್ಯ ಹಾಗೂ ಚಾಮರಾಜನಗರ ಜಿಲ್ಲೆ, ನಂಜನಗೂಡು ಮೂಲದ 19 ವರ್ಷದ ಶಾಮವೇಣಿ ಎಂದು ಗುರುತಿಸಲಾಗಿದೆ.  ಮೃತ ಶಾಮವೇಣಿ…

Read More

ಹೊಸನಗರ : ಪೆಟ್ರೋಲ್ ಟ್ಯಾಂಕರ್ ಪಲ್ಟಿ – ತಪ್ಪಿದ ಭಾರಿ ಅನಾಹುತ|Accident

ಮಂಗಳೂರಿನಿಂದ ಶಿವಮೊಗ್ಗದತ್ತ ಹೊರಟಿದ್ದ ಪೆಟ್ರೋಲ್‌ ಟ್ಯಾಂಕರ್‌ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ಇಂದು ಸಂಜೆ ನಡೆದಿದೆ. ಬಿದನೂರು ನಗರದ ಶಾಂತಿಕೆರೆ ಸರ್ಕಲ್ ನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದ್ದು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಹೊಸನಗರ – ನಗರ ರಸ್ತೆ ಸಂಚಾರ ವ್ಯತ್ಯಯವಾಗಿದ್ದು,  ಸಾವಿರಾರು ಲೀಟರ್ ಪೆಟ್ರೋಲ್ ಸೋರಿಕೆಯಾಗಿದ್ದ ಹಿನ್ನಲೆಯಲ್ಲಿ ನಗರ ಪೊಲೀಸ್…

Read More

ರಿಪ್ಪನ್‌ಪೇಟೆ : ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಸಮಾಲೋಚನೆ|BJP

ರಿಪ್ಪನ್‌ಪೇಟೆ : ಇತ್ತೀಚೆಗೆ ನಡೆದ ವಿಧಾನಸಭಾ ಸಾವತ್ರಿಕ ಚುನಾವಣೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಆಭಿವೃದ್ದಿ ಕಾಮಗಾರಿಗಳು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದ್ದರೂ ಕೂಡಾ ಕ್ಷೇತ್ರದಲ್ಲಿ ಪಕ್ಷದ ಹಿನ್ನಡೆಗೆ ಕಾರಣವೇನು ಎಂಬುದರ ಕುರಿತು ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಪರಾಮರ್ಶೆ ನಡೆಸಿದರು. ಪಟ್ಟಣದ ವಿನಾಯಕ ವೃತ್ತದಲ್ಲಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನೆಡಸಿ ಮುಂದಿನ ಜಿಲ್ಲಾ ತಾಲ್ಲೂಕ್ ಪಂಚಾಯ್ತಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಅಕಾಂಕ್ಷಿಗಳ ಕುರಿತು ಸುದೀರ್ಘವಾಗಿ ಚರ್ಚೆ…

Read More

ಚಾಲಕನಿಗೆ ನಿದ್ರೆ ಮಂಪರು – ಕಾರು ಪಲ್ಟಿ|Accident

ನಿದ್ದೆ ಮಂಪರಿನಲ್ಲಿದ್ದ ಚಾಲಕ – ತಳುವೆ ಬಳಿ ಕಾರು ಪಲ್ಟಿ ! ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಳುವೆಯ ಶಾಲೆಯ ಸಮೀಪ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಪಲ್ಟಿ ಹೊಡೆದಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುತ್ತಿದ್ದ  ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎನ್ನಲಾಗುತ್ತಿದ್ದು  ಆತನನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದು ಇದರಿಂದ ಹಾಗಾಗಿ ಯಾವುದೇ ರೀತಿ…

Read More

ಸಮಯಕ್ಕೆ ಸರಿಯಾಗಿ ಹಾಜರಾಗದ ವೈದ್ಯರು- ಟಿಟಿ ಚುಚ್ಚುಮದ್ದಿಲ್ಲದೇ ರೋಗಿಗಳ ಅಳಲು ಕೇಳೋರಿಲ್ಲದತಾಂಗಿರುವ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಥೆ.!HOSPITAL

ಸಮಯಕ್ಕೆ ಸರಿಯಾಗಿ ಹಾಜರಾಗದ ವೈದ್ಯರು ಟಿಟಿ ಚುಚ್ಚುಮದ್ದಿಲ್ಲದೇ ರೋಗಿಗಳ ಕೂಗು ಕೇಳೋರಿಲ್ಲದತಾಂಗಿರುವ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಥೆ………….! ರಿಪ್ಪನ್‌ಪೇಟೆ;- ಜಾನುವಾರು ಹೊಡೆಯಲು ಹೋಗಿ ಅಕಸ್ಮಿಕವಾಗಿ ಬಿದ್ದು ಕಾಲು ಮುರಿದುಕೊಂಡ ಯುವತಿಯ ನೆರಳಾಟ ನಾಯಿ ಕಚ್ಚದ ಮಹಿಳೆಗೆ ಟಿಟಿ ಚುಚ್ಚುಮದ್ದಿಲ್ಲದೇ ಇರುವುದು ಇನ್ನೂ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ರೋಗಿಗಳ ನರಳಾಟ ಕೇಳೋರಿಲ್ಲದಂತಾಗಿರುವುದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ನೀಡುವರ‍್ಯಾರು ಎನ್ನುವಂತಾಗಿದೆ. ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಇಲ್ಲಿನ ಅಸ್ಪತ್ರೆಗೆ…

Read More

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|accident

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿಯಲ್ಲಿ ನಡೆದಿದೆ. ಮೂಡಿಗೆರೆಯಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಕಾರು ಮೇಲಿನಕುರುವಳ್ಳಿ ಸಮೀಪದ ತೀರಳೆಬೈಲು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕನೊಬ್ಬನೆ ಪ್ರಯಾಣಿಸುತಿದ್ದು ನಿದ್ದೆ ಮಂಪರಿನಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗುತಿದೆ.ತಕ್ಷಣವೇ ಸ್ಥಳೀಯರು ಚಾಲಕನನ್ನು ಕಾರಿನಿಂದ ಹೊರ ತೆಗೆದಿದ್ದಾರೆ. ಚಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಮತ್ತೆ ಮುನ್ನೆಲೆಗೆ ಬಂದ ಹೊಸನಗರ ವಿಧಾನಸಭಾ ಕ್ಷೇತ್ರ ಹೋರಾಟದ ಕೂಗು|Hosanagara

ಹೊಸನಗರ : ಕ್ಷೇತ್ರ ಪುನರ್‌ವಿಂಗಡಣೆ ನಂತರ ಅಸ್ತಿತ್ವ ಕಳೆದುಕೊಂಡಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಪಡೆಯುವ ಹೋರಾಟಕ್ಕೆ ಮತ್ತೆ ಚಾಲನೆ ದೊರೆತಿದೆ. ತಾಲೂಕಿನ ಸಮಾನ ಮನಸ್ಕ ಯುವಕರ ಗುಂಪು ಈ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚಾಲನೆ ನೀಡಿದ್ದಾರೆ.ಈ ಹೋರಾಟಕ್ಕೆ ತಾಲೂಕಿನ ಜನತೆ ಅಭೂತಪೂರ್ವ ಸ್ಪಂದನೆ ನೀಡುವ ಮೂಲಕ ರಾಜ್ಯಕ್ಕೆ ಬೆಳಕು ನೀಡಿ ಕತ್ತಲಲ್ಲಿರುವ ಹೊಸನಗರ ಅಭಿವೃದ್ಧಿಗೆ ಕ್ಷೇತ್ರವೊಂದೇ ಪರಿಹಾರವೆಂದು ಹೋರಾಟ ನಡೆಸಲು ಯುವ ತಂಡಕ್ಕೆ ಸ್ಪೂರ್ತಿ ನೀಡಿದ್ದಾರೆ. ವಿಧಾನಸಭಾ ಕ್ಷೇತ್ರ ಕಳೆದುಕೊಂಡಾಗಿನಿಂದ ಹೊಸನಗರ ಕೇವಲ ತಾಲೂಕಾಗಿ ಉಳಿದುಕೊಂಡಿದೆ….

Read More