w
Headlines
Home » ಹೊಸನಗರ : ಪೆಟ್ರೋಲ್ ಟ್ಯಾಂಕರ್ ಪಲ್ಟಿ – ತಪ್ಪಿದ ಭಾರಿ ಅನಾಹುತ|Accident

ಹೊಸನಗರ : ಪೆಟ್ರೋಲ್ ಟ್ಯಾಂಕರ್ ಪಲ್ಟಿ – ತಪ್ಪಿದ ಭಾರಿ ಅನಾಹುತ|Accident

ಮಂಗಳೂರಿನಿಂದ ಶಿವಮೊಗ್ಗದತ್ತ ಹೊರಟಿದ್ದ ಪೆಟ್ರೋಲ್‌ ಟ್ಯಾಂಕರ್‌ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ಇಂದು ಸಂಜೆ ನಡೆದಿದೆ.




ಬಿದನೂರು ನಗರದ ಶಾಂತಿಕೆರೆ ಸರ್ಕಲ್ ನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದ್ದು ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.


ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಹೊಸನಗರ – ನಗರ ರಸ್ತೆ ಸಂಚಾರ ವ್ಯತ್ಯಯವಾಗಿದ್ದು,  ಸಾವಿರಾರು ಲೀಟರ್ ಪೆಟ್ರೋಲ್ ಸೋರಿಕೆಯಾಗಿದ್ದ ಹಿನ್ನಲೆಯಲ್ಲಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮುನ್ನೆಚರಿಕೆ ಕ್ರಮ ವಹಿಸಿದ್ದರು.ನಂತರ ಸ್ಥಳಕ್ಕೆ ಅಗ್ನಿಶಾಮಕ ದಳದವರು ತೆರಳಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.




ಪಲ್ಟಿಯಾದ ಟ್ಯಾಂಕರ್ ಸುಮಾರು 29,000 ಲೀಟರ್‌ ಪೆಟ್ರೋಲ್‌ ಇತ್ತು ಎಂದು ಹೇಳಲಾಗುತಿದ್ದು ಪೊಲೀಸರು ಹಾಗೂ ಅಗ್ನಿಶಾಮಕ ದಳದವರ ಸಮಯ ಪ್ರಜ್ಞೆಯಿಂದ ಮುಂದಾಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಈ ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಕೈಗೆ ಪೆಟ್ಟಾಗಿದ್ದು ನಗರ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ ಹಾಗೂ ಕ್ಲಿನರ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.




ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.