ಮತ್ತೆ ಮುನ್ನೆಲೆಗೆ ಬಂದ ಹೊಸನಗರ ವಿಧಾನಸಭಾ ಕ್ಷೇತ್ರ ಹೋರಾಟದ ಕೂಗು|Hosanagara

ಹೊಸನಗರ : ಕ್ಷೇತ್ರ ಪುನರ್‌ವಿಂಗಡಣೆ ನಂತರ ಅಸ್ತಿತ್ವ ಕಳೆದುಕೊಂಡಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಪಡೆಯುವ ಹೋರಾಟಕ್ಕೆ ಮತ್ತೆ ಚಾಲನೆ ದೊರೆತಿದೆ.

ತಾಲೂಕಿನ ಸಮಾನ ಮನಸ್ಕ ಯುವಕರ ಗುಂಪು ಈ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚಾಲನೆ ನೀಡಿದ್ದಾರೆ.ಈ ಹೋರಾಟಕ್ಕೆ ತಾಲೂಕಿನ ಜನತೆ ಅಭೂತಪೂರ್ವ ಸ್ಪಂದನೆ ನೀಡುವ ಮೂಲಕ ರಾಜ್ಯಕ್ಕೆ ಬೆಳಕು ನೀಡಿ ಕತ್ತಲಲ್ಲಿರುವ ಹೊಸನಗರ ಅಭಿವೃದ್ಧಿಗೆ ಕ್ಷೇತ್ರವೊಂದೇ ಪರಿಹಾರವೆಂದು ಹೋರಾಟ ನಡೆಸಲು ಯುವ ತಂಡಕ್ಕೆ ಸ್ಪೂರ್ತಿ ನೀಡಿದ್ದಾರೆ.




ವಿಧಾನಸಭಾ ಕ್ಷೇತ್ರ ಕಳೆದುಕೊಂಡಾಗಿನಿಂದ ಹೊಸನಗರ ಕೇವಲ ತಾಲೂಕಾಗಿ ಉಳಿದುಕೊಂಡಿದೆ. ಇಲ್ಲಿನ ಜನತೆ ಅಗತ್ಯ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ವಿಧಾನಸಭಾ ಕ್ಷೇತ್ರ ಮರುಪಡೆದಲ್ಲಿ ಅಭಿವೃದ್ಧಿ ಸಾಧ್ಯ. ಹೋರಾಟಗಳಿಗೆ ಕಾನೂನು ತೊಡಕುಗಳು ಎದುರಾಗಬಹುದು. ಆದರೆ ಸಮಸ್ಯೆಗಳಿಗೆ ಇರುವ ಮಾರ್ಗೋಪಾಯಗಳನ್ನು ಚರ್ಚಿಸಿ ಯೋಜನಾ ಬದ್ಧ ಹೋರಾಟದ ಮೂಲಕ ಗಮನ ಸೆಳೆದು ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾದ್ಯವಿದೆ. 

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವ ದಿಸೆಯಲ್ಲಿ ಹೋರಾಟ ಅನಿವಾರ್ಯ. ಮುಳುಗಡೆ ಸಂತ್ರಸ್ತರ ತಾಲ್ಲೂಕಾಗಿರುವ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರ ಮಾನ್ಯತೆ ಅಗತ್ಯವಾಗಿ ಬೇಕಾಗಿದೆ. ಗ್ರಾಮಮಟ್ಟದಿಂದ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ

ಪಶ್ಚಿಮಘಟ್ಟ ಪ್ರದೇಶವಾಗಿರುವ ಕಾರಣ ಜನಸಂಖ್ಯೆ ಆಧರಿಸುವ ಬದಲು ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ಭೌಗೋಳಿಕ ವ್ಯಾಪ್ತಿಯ ಆಧಾರದಂತೆ ಕ್ಷೇತ್ರ ಮರುಸ್ಥಾಪನೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಂಘಟಿತರಾಗಬೇಕಾಗಿದೆ.




ಈ ಹೋರಾಟದಲ್ಲಿ ಭಾಗವಹಿಸಿರುವ ಎಲ್ಲಾ ಯುವ ಮಿತ್ರರಿಗೆ ಹಾಗೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವ ತಾಲೂಕಿನ ಏಕೈಕ ಕನ್ನಡ ದಿನಪತ್ರಿಕೆ ಮಲೆನಾಡು ವಾಯ್ಸ್ ಸಂಪಾದಕರಿಗೆ ಪೋಸ್ಟ್ ಮ್ಯಾನ್ ನ್ಯೂಸ್ ವತಿಯಿಂದ ಅಭಿನಂದನೆಗಳು.

ಹೊಸನಗರ ಕ್ಷೇತ್ರ ಮರು ನಿರ್ಮಾಣ ಹೋರಾಟದಲ್ಲಿ‌ ಭಾಗವಹಿಸಲು ಇಚ್ಚಿಸುವವರು ಈ ಕೆಳಗಿನ ಲಿಂಕ್ ಬಳಸಿ ತಮ್ಮ ವಿವರಗಳನ್ನು ನೊಂದಾಯಿಸಿ 

Leave a Reply

Your email address will not be published. Required fields are marked *