ಬೇಳೂರು ಪರ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭರ್ಜರಿ ರೋಡ್ ಶೋ|election
ರಿಪ್ಪನ್‌ಪೇಟೆ : ರಾಜ್ಯ ಕಂಡ ಧೀಮಂತ ನಾಯಕ ದಿ.ಎಸ್ ಬಂಗಾರಪ್ಪಜಿಯವರ ಅಭಿಮಾನಿಗಳಿರುವ ಈ ಕ್ಷೇತ್ರದಲ್ಲಿ ಅವರೇ ಬೆಳೆಸಿದ ಗೋಪಾಲಕೃಷ್ಣ ಬೇಳೂರು ಇವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ನಟ ಡಾ.ಶಿವರಾಜ್ ಕುಮಾರ್ ರವರು ಮನವಿ ಮಾಡಿದರು. ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ರವರ ಪರ ಭರ್ಜರಿ ರೋಡ್ ಶೋ ನಡೆಸಿ ನಂತರ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಸಜ್ಜನ ವ್ಯಕ್ತಿತ್ವದ ಬೇಳೂರು ಗೋಪಾಲಕೃಷ್ಣ ರವರನ್ನು ಬೆಂಬಲಿಸಿ ವಿಧಾನಸೌದಕ್ಕೆ ಕಳಿಸಿಕೊಡಿ…