w
Headlines
Home » ಬೇಳೂರು ಪರ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭರ್ಜರಿ ರೋಡ್ ಶೋ|election

ಬೇಳೂರು ಪರ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭರ್ಜರಿ ರೋಡ್ ಶೋ|election

ರಿಪ್ಪನ್‌ಪೇಟೆ : ರಾಜ್ಯ ಕಂಡ ಧೀಮಂತ ನಾಯಕ ದಿ.ಎಸ್ ಬಂಗಾರಪ್ಪಜಿಯವರ ಅಭಿಮಾನಿಗಳಿರುವ ಈ ಕ್ಷೇತ್ರದಲ್ಲಿ ಅವರೇ ಬೆಳೆಸಿದ ಗೋಪಾಲಕೃಷ್ಣ ಬೇಳೂರು ಇವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಿ ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ನಟ ಡಾ.ಶಿವರಾಜ್ ಕುಮಾರ್ ರವರು ಮನವಿ ಮಾಡಿದರು.




ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ರವರ ಪರ ಭರ್ಜರಿ ರೋಡ್ ಶೋ ನಡೆಸಿ ನಂತರ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಸಜ್ಜನ ವ್ಯಕ್ತಿತ್ವದ ಬೇಳೂರು ಗೋಪಾಲಕೃಷ್ಣ ರವರನ್ನು ಬೆಂಬಲಿಸಿ ವಿಧಾನಸೌದಕ್ಕೆ ಕಳಿಸಿಕೊಡಿ ಎಂದರು.


ಈ ಸಂಧರ್ಭದಲ್ಲಿ ಶಿವಣ್ಣ ಹಾಡು ಹೇಳಿ ಎಂದು ಅಭಿಮಾನಿಗಳು ಕೂಗುತ್ತಿದ್ದಂತೆ ನಟ ಶಿವರಾಜ್ ಕುಮಾರ ಜೋಗಿ ಚಿತ್ರದ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಮತ್ತು ಪುನೀತ್ ರಾಜ್‍ಕುಮಾರ್ ರವರ ‘ಬಾನ ದಾರಿಯಲ್ಲಿ’ ಹಾಡನ್ನು ಹಾಡಿ ಮತದಾರರನ್ನು ಹುರಿದುಂಬಿಸಿದರು.

ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ ಸೊರಬ ಸಾಗರ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮತದಾರರು ನಮ್ಮ ತಂದೆಯವರ ಅಭಿಮಾನಿಗಳ ತವರೂರು ಆ ಕಾರಣದಿಂದಾಗಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ನಮ್ಮಗಳ ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ. ಈ ಬಾರಿ ಗೆಲುವು ನಮ್ಮದೇ ಎಂಬುದಕ್ಕೆ ಇಲ್ಲಿ ಸೇರಿರುವ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ ಎನ್ನುವುದರೊಂದಿಗೆ ಪರೋಕ್ಷವಾಗಿ ಬಿಜೆಪಿಗೆ ಈ ಜನಸ್ತೋಮವನ್ನು ಕಂಡು ಭಯಹುಟ್ಟುವಂತೆ ಮಾಡಿದೆ ಎಂದರು.


ಗವಟೂರು ಬಸ್ ನಿಲ್ದಾಣದಿಂದ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿಯ ಮೆರವಣಿಗೆ ಆರಂಭಗೊಂಡು ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯ ಮೆಸ್ಕಾಂ ಕಛೇರಿಯ ಬಳಿ ಕೊನೆಗೊಂಡಿತು.

ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್, ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಜಿ.ಪಂ.ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಶ್ವೇತಾ, ಬಿ.ಜಿ ನಾಗರಾಜ್, ಜಯಶೀಲಪ್ಪಗೌಡ, ಹಕ್ರೆ ಮಲ್ಲಿಕಾರ್ಜುನ, ಅಮ್ಮಿರ್‌ಹಂಜಾ, ಹೆಚ್.ವಿ.ಈಶ್ವರಪ್ಪಗೌಡ, ಎಂ.ಎಂ ಪರಮೇಶ್, ಎರಗಿ ಉಮೇಶ್, ಉಬೇದುಲ್ಲಷರೀಪ್, ಆಸೀಪ್‌ಭಾಷಾಸಾಬ್, ಜಿ.ಆರ್.ಗೋಪಾಕೃಷ್ಣ, ಮಳವಳ್ಳಿ ಮಂಜುನಾಥ, ಸಣ್ಣಕ್ಕಿ ಮಂಜು,ಉಲ್ಲಾಸ್ ,ರಮೇಶ್ ,ಶ್ರೀಧರ್ ಹಾಗೂ ಇನ್ನಿತರರು ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.











Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.