Ex Mla |ರಿಪ್ಪನ್‌ಪೇಟೆ : ಮಾಜಿ ಶಾಸಕ ಡಾ. ಉಮಾಕಾಂತ್ ಬಿ ಬೋರ್ಕರ್ ನಿಧನ
ರಿಪ್ಪನ್‌ಪೇಟೆ : ಶಿರಸಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬೋರ್ಕರ್ ಉಮಾಕಾಂತ್(84) ರವರು ಇಂದು ಮುಂಜಾನೆ ವಯೋಸಹಜ ನಿಧನರಾಗಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬೋರ್ಕರ್ ಉಮಾಕಾಂತ್ ಗೆಲುವು ಸಾಧಿಸಿದ್ದರು. ಹಲವಾರು ವರ್ಷಗಳಿಂದ ಅವರು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ವಾಸಿಸುತಿದ್ದು ಅವರ ಪತ್ನಿ ಮಂಜುಳಾ ಬೋರ್ಕರ್ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. 1978 ರಲ್ಲಿ ತುರ್ತು ಪರಿಸ್ಥಿತಿಯ ಪ್ರಭಾವದಿಂದ ಬೋರ್ಕರ್ ಉಮಾಕಾಂತ್ ಕಾಂಗ್ರೆಸ್‌ನ ರೇವಣಕರ್ ಶಂಕರ್ ಪುರುಷೋತ್ತಮ್…