w
Headlines
Home » ಅಕ್ರಮ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ|encroachment

ಅಕ್ರಮ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ|encroachment

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಸರ್ವೆ ನಂಬರ್ 85 ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದ 2.5 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಲಾಯಿತು.




ಮಳವಳ್ಳಿ ಗ್ರಾಮದ ಶ್ರೀಧರ ಬಿನ್ ತಿಮ್ಮನಾಯ್ಕ ಸರ್ವೆ ನಂ 85 ರಲ್ಲಿ ಸುಮಾರು ಎರಡೂವರೆ ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಅಡಿಕೆ ಸಸಿಗಳನ್ನು ನೆಡಲು ತಯಾರಿ ನಡೆಸಿದ್ದರು.

ಇಂದು ಕೆರೆಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕರಾದ ಸೈಯದ್ ಅಪ್ರೋಜ್ ಅಹಮದ್ ರವರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅಕ್ರಮವಾಗಿ ಒತ್ತುವರಿ ಮಾಡಿದ್ದ ಸರ್ಕಾರಿ ಜಮೀನನ್ನು ತೆರವುಗೊಳಿಸಿದ್ದಾರೆ.




ಈ ಸಂಧರ್ಭದಲ್ಲಿ ಗ್ರಾಮಲೆಕ್ಕಿಗ ಅಂಬಿಕಾ ಮತ್ತು ಗ್ರಾಮ ಸಹಾಯಕರುಗಳಾದ ಅಮ್ಜಾದ್ ,ಅಣ್ಣಪ್ಪ ,ನಯಾಜ್‌, ಷಣ್ಮುಖ , ಮಂಜಪ್ಪ , ದರ್ಶನ್ , ರಾಘು , ಸುಬ್ರಹ್ಮಣ್ಯ , ಸುರೇಶ್ ಮತ್ತು ಸುಬ್ರಹ್ಮಣ್ಯ ಇದ್ದರು. 






Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.