ಡಿಕೆಶಿ ಜನ್ಮದಿನಾಚರಣೆ ಮತ್ತು ಬೇಳೂರು ಗೆಲುವಿಗೆ ಕಾರ್ಯಕರ್ತರಿಗೆ ಮತದಾರರಿಗೆ ಆಭಿನಂದನೆ’’
ರಿಪ್ಪನ್‌ಪೇಟೆ : ಸಿದ್ದರಾಮಯ್ಯರವರ ಜನಪ್ರಿಯತೆ ಹಾಗೂ ಡಿ ಕೆ ಶಿವಕುಮಾರ್ ರವರ ರವರ ಶ್ರಮದಿಂದ ಪಕ್ಷ ಅಧಿಕಾರಕ್ಕೇರಿದೆ ಎಂದು ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ ಹೇಳಿದರು.
ಅವರು ಇಂದು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ನಂತರ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಅಡಳಿತ ನಡೆಸಿದ ಬಿಜೆಪಿ ಭ್ರಷ್ಟಾಸರ್ಕಾರವನ್ನು ಕಿತ್ತು ಹಾಕುವುದೇ ನಮ್ಮ ಕಾಂಗ್ರೆಸ್ ಗುರಿಯಾಗಿದೆ ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಲವು ಜನಹಿತ ಪ್ರಣಾಳಿಕೆಯನ್ನು ಘೋಷಿಸುವ ಮೂಲಕ ನಿರೀಕ್ಷೆಗೂ ಮೀರಿದ ಸ್ಪಷ್ಟ ಬಹುಮತದೊಂದಿಗೆ ಪಕ್ಷವನ್ನು ಗೆಲಿಸುವಲ್ಲಿ ಯಶಸ್ವಿಯಾಗಿದ್ದು ನಮ್ಮ ಕಾರ್ಯಕರ್ತರು ಮತ್ತು ಮತದಾರರು ಹಗಲಿರುಳು ಶ್ರಮಿಸಿದ್ದರ ಪ್ರತಿಫಲವೇ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗಿದೆ,ಇನ್ನೂ ಮುಂದೆ ಮೈಮರೆಯದೆ ಪಕ್ಷದ ಸಂಘಟನೆಯೊಂದಿಗೆ ಮತದಾರರ ಪ್ರೀತಿ ವಿಶ್ವಾಸವನ್ನು ಬೆಳಸಿಕೊಂಡು ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಹಕಾರಿಯಾಗುವಂತೆ ಜಿ.ಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ ಕಾರ್ಯಕರ್ತರಿಗೆ ಹುರಿದುಂಬಿಸಿ ಅಭಿನಂದಿಸಿದರು.
ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಆಧಾರದಲ್ಲಿ ಮತ ಕೇಳಿದ್ದರೇ ಬಿಜೆಪಿ ಪಕ್ಷ ಹಲಾಲ್ – ಹಿಜಾಬ್ ನಂತಹ ಕೋಮು ಧೃವೀಕರಣದ ಆಧಾರದಲ್ಲಿ ಮತ ಕೇಳಿತ್ತು ಆ ಹಿನ್ನಲೆಯಲ್ಲಿ ರಾಜ್ಯದ ಪ್ರಜ್ಞಾವಂತ ಜನ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದಾರೆ.ಬಿಜೆಪಿ ಪಕ್ಷ ನೀಡಿದ್ದ ಎಲ್ಲಾ ತರಹದ ಕಿರುಕುಳಗನ್ನು ಅನುಭವಿಸಿದ್ದ ಡಿ ಕೆ ಶಿವಕುಮಾರ್ ಇಂದು ಸತತ ಪರಿಶ್ರಮದಿಂದ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದರು.
ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೀಫ್ ಭಾಷಾ ಮಾತನಾಡಿ ಸಾಗರ ಕ್ಷೇತ್ರದಲ್ಲಿ ದ್ವೇಷ ಸೋತು ಪ್ರೀತಿ ಗೆದ್ದಿದೆ,ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಸೋಲನ್ನು ಈ ಚುನಾವಣೆಯಲ್ಲಿ ಬೆಳೂರು ಗೋಪಾಲಕೃಷ್ಣ ರವರನ್ನು ಗೆಲ್ಲಿಸುವ ಮೂಲಕ ತಿರಿಸಿಕೊಂಡಿದ್ದೇವೆ ಎಂದರು.
ರಿಪ್ಪನ್‌ಪೇಟೆಯ ಎಲ್ಲಾ ಏಳೂ ಬೂತ್ ಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ದೊರಕಿದೆ ಈ ಗೆಲುವು ಬೇಳೂ ಗೆಲುವಲ್ಲ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು ಎಂದು ಹೇಳಿ ರಿಪ್ಪನ್‌ಪೇಟೆಯಲ್ಲಿನ ಹಲವು ಮೂಲಭೂತ ಸಮಸ್ಯೆಗಳಾದ ನಾಲ್ಕು ರಸ್ತೆಗಳನ್ನು ಡಬಲ್ ರಸ್ತೆ ಮಾಡುವ ಮೂಲಕ ಡಿವೈಡರ್ ಅಳವಡಿಕೆ ಮತ್ತು ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಕಟ್ಟಡ ಹಾಗೂ ಬಸ್ ನಿಲ್ದಾಣದ ಬಗ್ಗೆ ಪ್ರಥಮ ಅಧ್ಯತೆ ನೀಡುವುದು ಮತ್ತು ಬೇಳೂರು ಗೋಪಾಲಕೃಷ್ಣರಿಗೆ ಮಂತ್ರಿ ಸ್ಥಾನ ಕಲ್ಪಿಸುವಂತೆ ಸಹ ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮನವಿ ಮೂಲಕ ಆಗ್ರಹಿಸಿದರು.
ಇದೇ ಸಂಧರ್ಭದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಅಭಿನಂದನಾ ಕೃತಜ್ಞತಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ,ಎಂ ಎಂ ಪರಮೆಶ್, ಡಿ.ಈ.ಮಧುಸೂಧನ್, ರವೀಂದ್ರಕೆರೆಹಳ್ಳಿ, ರಮೆಶ್ ಫ್ಯಾನ್ಸಿ, ಉಲ್ಲಾಸ ತೆಂಕೋಲ್, ಗಣಪತಿ ಗವಟೂರು,ಆರ್.ಎಸ್.ಶಂಶುದ್ದೀನ್, ಧನಲಕ್ಷಿö್ಮ, ಶ್ರೀಧರ, ಉಮೇಶ್,ನಾಗೇಂದ್ರ,ಮಂಜುನಾಥ ಮಳವಳ್ಳಿ,ನವೀನ್ ಕೆರೆಹಳ್ಳಿ, ಹಾಗೂ ಇನ್ನಿತರರಿದ್ದರು.
