w
Headlines
Home » SSLC RESULT | ಹೊಸನಗರದ ರಾಮಕೃಷ್ಣ ವಿದ್ಯಾಲಯಕ್ಕೆ ಶೇ 100% ಫಲಿತಾಂಶ – 625ಕ್ಕೆ 619 ಅಂಕ ಪಡೆದ ಜಿ ಎಂ ವಾಣಿ

SSLC RESULT | ಹೊಸನಗರದ ರಾಮಕೃಷ್ಣ ವಿದ್ಯಾಲಯಕ್ಕೆ ಶೇ 100% ಫಲಿತಾಂಶ – 625ಕ್ಕೆ 619 ಅಂಕ ಪಡೆದ ಜಿ ಎಂ ವಾಣಿ

ಹೊಸನಗರ : 2022 23ನೇ ಸಾಲಿನ ಎಸ್ ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಲಯ ಈ ಬಾರಿಯೂ ಸಹ ಶೇಕಡ 100% ರಷ್ಟು ಫಲಿತಾಂಶವನ್ನು ಪಡೆದಿದೆ.

 ಶ್ರೀ ರಾಮಕೃಷ್ಣ ವಿದ್ಯಾಲಯ ದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ಗಳಿಸಿ ಕೊಟ್ಟಿದ್ದಾರೆ

ರಾಮಕೃಷ್ಣ ಶಾಲೆಯ  625ಕ್ಕೆ 619 (99.04%) ಅಂಕ ಗಳಿಸಿದ್ದಾಳೆ.ಇವರು ಪಟ್ಟಣದ ಗಂಗನಕೊಪ್ಪ ಗ್ರಾಮದ ನಿವಾಸಿ ಮುರುಗೇಂದ್ರಪ್ಪ ಮತ್ತು ವಿನೋದ ದಂಪತಿಗಳ ಪುತ್ರಿಯಾಗಿದ್ದಾರೆ.

ಹೆಚ್ ಆರ್ ಅನಘ  625ಕ್ಕೆ 606(96.96%) ಅಂಕ ಗಳಿಸಿದ್ದು,ಇವರು ಹಿರಿಯೋಗಿಯ ನಿವಾಸಿ ರವೀಂದ್ರ ಮತ್ತು ಗಾಯತ್ರಿ ದಂಪತಿಗಳ ಪುತ್ರಿಯಾಗಿದ್ದಾರೆ.

ಕುಮಾರಿ ಐಸಿರಿ 625ಕ್ಕೆ 604(96.46%) ಅಂಕ ಗಳಿಸಿದ್ದು,ಇವರು ಪಟ್ಟಣದ ಮೂಡುಬಾಗಿಲಿನ ನಿವಾಸಿ ಮಾಧವ ಮತ್ತು ಶ್ರೀಲತಾ ದಂಪತಿಗಳ ಪುತ್ರಿಯಾಗಿದ್ದಾರೆ.

ರಾಮಕೃಷ್ಣ ವಿದ್ಯಾಲಯಕ್ಕೆ ಶೇಕಡಾ100% ಫಲಿತಾಂಶ ತಂದುಕೊಟ್ಟು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಪೋಷಕ ವೃಂದ ಅಭಿನಂದಿಸಿ ಶುಭ ಹಾರೈಸಿದೆ.

SSLC ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ರಾಮಕೃಷ್ಣ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಅಭಿನಂದನೆಗಳು…….

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.